ನಟ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರ 777 ಚಾರ್ಲಿ ಟ್ರೈಲರ್ ಸೋಮವಾರ ಬಿಡುಗಡೆಯಾಗಿದೆ.
ಕಿರಣ್‌ರಾಜ್ ಕಥೆ, ಚಿತ್ರಕಥೆಯ ಜೊತೆಗೆ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ರಕ್ಷಿತ್ಗೆ ಜೊತೆಯಾಗಿ ಸಂಗೀತಾ ಶೃಂಗೇರಿ ಅಭಿನಯಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಡ್ಯಾನಿಶ್ ಸೇಠ್, ರಾಜ್. ಬಿ. ಶೆಟ್ಟಿ, ಬಾಬಿ ಸಿಂಹ ನಟಿಸಿದ್ದಾರೆ.
ನೊಬಿನ್ ಪೌಲ್ ಸಂಗೀತವಿರುವ ಈ ಚಿತ್ರಕ್ಕೆ ಪ್ರತೀಕ್ ಶೆಟ್ಟಿರವರು ಸಂಕಲನ ಮಾಡಿದ್ದಾರೆ. ಪರಂವಾ ಸ್ಟೂಡಿಯೋ ಬ್ಯಾನರ್ನಡಿ ರಕ್ಷಿತ್ ಶೆಟ್ಟಿ ಹಾಗು ಜಿ.ಎಸ್.ಗುಪ್ತಾ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಚಿತ್ರ ಮನುಷ್ಯ ಹಾಗು ಪ್ರಾಣಿಗಳ ನಡುವಿನ ಸಂಬಂಧದ ಸುತ್ತ ಸಾಗುತ್ತದೆ. ಚಿತ್ರದ ಟ್ರೈಲರ್ ವೀಕ್ಷಿಸಿದ ಪ್ರತಿಯೊಬ್ಬರು ರಕ್ಷಿತ್ ಹಾಗು ಸೆಲೆಬ್ರಿಟಿ ಡಾಗ್ ಸಿಂಬಾ ನಟನೆಗೆ ಮನಸೋತಿದ್ದಾರೆ.
ಚಿತ್ರ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು ಕನ್ನಡ ಅವತರಣಿಕೆಯನ್ನು ನಟ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ, ತೆಲುಗಿನಲ್ಲಿ ನಟ ವಿಕ್ಟರಿ ವೆಂಕಟೇಶ್, ನಟಿಯರಾದ ಸಾಯಿ ಪಲ್ಲವಿ, ಲಕ್ಷ್ಮೀ ಮಂಚು, ತಮಿಳಿನಲ್ಲಿ ನಟ ಧನುಶ್, ಮಲಯಾಳಂನಲ್ಲಿ ನಟರಾದ ನಿವಿನ್ ಪೌಲಿ ಶೆಟ್ಟಿ, ಆಸಿಫ್ ಅಲಿ, ತೊವಿನೋ ಥಾಮಸ್, ಅಂಟೋನಿ ವರ್ಗೀಸ್ ಹಾಗು ಅರ್ಜುನ್ ಅಶೋಕನ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಚಿತ್ರ ಜೂನ್ 10, 2022 ರಂದು ತೆರೆಗೆ ಬರಲಿದೆ