ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ 70ನೇ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಿತು. 2024ರಲ್ಲಿ ತೆರೆಕಂಡ ದಕ್ಷಿಣ ಭಾರತೀಯ ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅನೇಕ ಸಿನಿಮಾ ತಾರೆಯರು ಭಾಗಿಯಾಗಿದ್ದರು. ಈ ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದ ಕನ್ನಡ ತಾರೆಯರ ವಿವರ ಈ ಕೆಳಕಂಡಂತಿದೆ.

ಪ್ರಮುಖ ಪ್ರಶಸ್ತಿ ವಿಜೇತರು
ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ – (ಕೋಳಿ ಎಸ್ರು)
ಅತ್ಯುತ್ತಮ ನಟ: ಶ್ರೀಮುರಳಿ – (ಬಘೀರ)
ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ಗೌರಿಶಂಕರ್ – (ಕೆರೆಬೇಟೆ)
ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ಅಂಕಿತಾ ಅಮರ್ – (ಇಬ್ಬನಿ ತಬ್ಬಿದ ಇಳೆಯಲಿ)
ಅತ್ಯುತ್ತಮ ಪೋಷಕ ನಟ: ಗೋಪಾಲಕೃಷ್ಣ ದೇಶಪಾಂಡೆ – (ಬ್ಲಿಂಕ್)
ಅತ್ಯುತ್ತಮ ಪೋಷಕ ನಟಿ: ಪ್ರಿಯಾ – (ಭೀಮ)

ಇತರೆ ಪ್ರಶಸ್ತಿಗಳು
ಅತ್ಯುತ್ತಮ ಸಿನಿಮಾ: ಶಾಖಾಹಾರಿ (ನಿರ್ದೇಶನ: ಸಂದೀಪ್ ಸುಂಕದ್)
ಅತ್ಯುತ್ತಮ ನಿರ್ದೇಶಕ: ಪೃಥ್ವಿ ಕೋಣನೂರು – (ಹದಿನೇಳೆಂಟು)
ಅತ್ಯುತ್ತಮ ಸಿನಿಮಾ (ವಿಮರ್ಶಕರ ಆಯ್ಕೆ): ಬ್ಲಿಂಕ್ (ನಿರ್ದೇಶನ: ಶ್ರೀನಿಧಿ ಬೆಂಗಳೂರು)
ಅತ್ಯುತ್ತಮ ಸಂಗೀತ: ಅರ್ಜುನ್ ಜನ್ಯ – (ಕೃಷ್ಣಂ ಪ್ರಣಯ ಸಖಿ)

ಹೊಸ ಪ್ರತಿಭೆಗಳು
ಅತ್ಯುತ್ತಮ ಹೊಸ ನಟಿ: ಬಿಂಧು ಶಿವರಾಮ್ – (ಕೆರೆಬೇಟೆ)
ಅತ್ಯುತ್ತಮ ಹೊಸ ನಟ: ಸಮರ್‌ಜಿತ್ ಲಂಕೇಶ್ – (ಗೌರಿ)
ಸಂಗೀತ ವಿಭಾಗ
ಅತ್ಯುತ್ತಮ ಹಿನ್ನೆಲೆ ಗಾಯಕಿ: ಶ್ರುತಿ ಪ್ರಹ್ಲಾದ್ – (ಹಿತ್ತಲಕ ಕರಿಬ್ಯಾಡ)
ಅತ್ಯುತ್ತಮ ಹಿನ್ನೆಲೆ ಗಾಯಕ: ಜಸ್ಕರಣ್ ಸಿಂಗ್ – (ದ್ವಾಪರ ದಾಟುತ)
ಅತ್ಯುತ್ತಮ ಗೀತರಚನೆ: ನಾಗೇಂದ್ರ ಪ್ರಸಾದ್ – (ದ್ವಾಪರ ದಾಟುತ)






