ದೇಶವಿರೋಧಿ ಹಾಗೂ ಸುಳ್ಳು ಸುದ್ದಿ ಪ್ರಚಾರ ಮಾಡಲಾಗುತ್ತಿದೆ ಎಂದು ಭಾರತದ 7 ಹಾಗೂ ಪಾಕಿಸ್ತಾನದ 1 ಯೂಟ್ಯೂಬ್ ಚಾನೆಲ್ ಗಳನ್ನು ನಿಷೇಧಿಸಲಾಗಿದೆ.
ಕಳೆದ ಡಿಸೆಂಬರ್ ನಿಂದ ಇಲ್ಲಿಯವರೆಗೆ 102 ಯೂಟ್ಯೂಬ್ ಚಾನೆಲ್ ಗಳನ್ನು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ನಿಷೇಧಿಸಿದೆ. ಇದರಲ್ಲಿ 1 ಫೇಸ್ ಬುಕ್ ಮತ್ತು 2 ಇನ್ ಸ್ಟಾಗ್ರಾಂ ಸೇರಿದೆ.
ಐಟಿ ಕಾಯ್ದೆ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ 8 ಯೂಟ್ಯೂಬ್ ಚಾನೆಲ್ ಗಳನ್ನು ನಿಷೇಧಿಸಲಾಗಿದೆ.

ಈ ೮ ಯೂಟ್ಯೂಬ್ ಚಾನೆಲ್ ಗಳು 8 ಲಕ್ಷ ಸಬ್ ಸ್ಕೈಬರ್ ಹೊಂದಿದ್ದು, 114 ಕೋಟಿ ವೀಕ್ಷಣೆ ಮಾಡಲಾಗಿದೆ. ಈ ಚಾನೆಲ್ ಗಳು ಜನಾಂಗೀಯ ದ್ವೇಷದ ವರದಿಗಳನ್ನು ಪ್ರಸಾರ ಮಾಡುತ್ತಿತ್ತು ಎಂದು ಸಚಿವಾಲಯ ತಿಳಿಸಿದೆ.








