ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh kumar) ಅರಣ್ಯ ಭೂಮಿ ಒತ್ತುವರಿಯ ವಿವಾದಕ್ಕೆ ಸಂಬಂಧಪಟ್ಟಂತೆ ಕಳೆದ ತಿಂಗಳು ಜಂಟಿ ಸರ್ವೆ (Joint survey) ನಡೆಸಿ ಹೈಕೋರ್ಟ್ ಗೆ ವರದಿ ಸಲ್ಲಿಕೆ ಮಾಡಲಾಗಿತ್ತು.

ಇದೀಗ ಈ ಜಂಟಿ ಸರ್ವೆ ವರದಿಯಲ್ಲಿ ಏನಿದೆ ಎಂಬ ಅಂಶಗಳು ಲಭ್ಯವಾಗಿದ್ದು, ಜಂಟಿ ಸರ್ವೆ ವರದಿಯಲ್ಲಿ ಅರಣ್ಯ ಭೂಮಿ ಒತ್ತುವರಿ (Forest land encroachment) ಆಗಿರುವ ಕುರಿತು ಉಲ್ಲೇಖಿಸಲಾಗಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಹೊಸಹುಡ್ಯ ಗ್ರಾಮದ ಸರ್ವೆ ನಂ -1 ಮತ್ತು 2 ರಲ್ಲಿ ಒತ್ತುವರಿ ಆರೋಪ ಕೇಳಿಬಂದಿತ್ತು. ಸರ್ವೆ ನಂ 1 ರಲ್ಲಿ 6 ಎಕರೆ,ಸರ್ವೆ ನಂ 2 ರಲ್ಲಿ 54.23 ಎಕರೆ ಅರಣ್ಯ ಭೂಮಿ, ಆ ಮೂಲಕವಾಗಿ ಒಟ್ಟು 60.23 ಎಕರೆ ಅರಣ್ಯ ಭೂಮಿ ಒತ್ತುವರಿ ಆಗಿರುವ ಕುರಿತು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಕುರಿತು ಫೆಬ್ರವರಿ 6 ರಂದು ವಿಚಾರಣೆ ನಡೆಯಲಿದ್ದು ,ಆ ನಂತರ ಮುಂದಿನ ಕ್ರಮ ಏನು ಎಂಬುದು ತಿಳಿಯಲಿದೆ. ಆ ಮೂಲಕ ಈ ವಿವಾದದ ಕುರಿತು ಸುಧೀರ್ಘವಾದ ಎರಡು ದಶಕದ ಕಾನೂನು ಹೋರಾಟ ತಾರ್ಕಿಕ ಅಂತ್ಯ ಕಾಣುವ ನಿರೀಕ್ಷೆಯಿದೆ.