2020-21ರ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿಯನ್ನು ನವೀಕರಿಸದ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸದ ಕಾರಣ ರಾಜ್ಯದಲ್ಲಿ 60,000 ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಶಾಲೆಯಿಂದ ಹೊರಗುಳಿದಿದ್ದಾರೆ, ಆದರೆ ಸರ್ಕಾರದ ದಾಖಲೆಗಳಲ್ಲಿ ಮಾತ್ರ ಅವರ ಹೆಸರುಗಳು ಇದೆ ಎಂದು ಕೆಎಎಂಎಸ್ ಹೇಲಿದ್ದಾರೆ.
ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ (ಕೆಎಎಂಎಸ್) ನಡೆಸಿದ ಸಮೀಕ್ಷೆಯಲ್ಲಿ ಈ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಸಮೀಕ್ಷೆಯಲ್ಲಿ ಸುಮಾರು 250 ಖಾಸಗಿ ಅನುದಾನರಹಿತ ಶಾಲೆಗಳು ಭಾಗವಹಿಸಿದ್ದವು. ಸಂಘದ ಪ್ರಕಾರ, ಕರ್ನಾಟಕದಲ್ಲಿ 3,600 ಖಾಸಗಿ ಅನುದಾನರಹಿತ ಶಾಲೆಗಳಿವೆ. ಇನ್ನೂ ಹೆಚ್ಚು ಸಂಖ್ಯೆ ಇರಬಹುದು ಎನ್ನಲಾಗಿದೆ.
ಭಾನುವಾರ ಬೆಂಗಳೂರಿನಲ್ಲಿ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಿದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಶಶಿ ಕುಮಾರ್, “ಈ ವಿದ್ಯಾರ್ಥಿಗಳು ಸರ್ಕಾರದ ಪ್ರಕಾರ ಶಾಲೆಗಳಲ್ಲಿದ್ದಾರೆ, ಆದರೆ ಅವರು ಶಾಲೆಗಳಲ್ಲಿ ಇರುವುದಕ್ಕೆ ಯಾವುದೇ ಪುರಾವೆಗಳಿಲ್ಲ” ಎಂದು ಹೇಳಿದ್ದಾರೆ.

ಭಾಗವಹಿಸದ ವಿದ್ಯಾರ್ಥಿಗಳ ಡೇಟಾವನ್ನು ಅಪ್ಲೋಡ್ ಮಾಡಲು ಸರ್ಕಾರ ಶಾಲೆಗಳ ಮೇಲೆ ಒತ್ತಡ ಹೇರಿದೆ ಎಂದು ಸಂಘದ ಸದಸ್ಯರು ಆರೋಪಿಸಿದರು.
“ವಿದ್ಯಾರ್ಥಿಗಳು ತಮ್ಮ ಪ್ರವೇಶವನ್ನು ನವೀಕರಿಸಿಲ್ಲ. ಅವರು ವರ್ಗಾವಣೆ ಪ್ರಮಾಣಪತ್ರಗಳನ್ನು ತೆಗೆದುಕೊಂಡಿಲ್ಲ ಮತ್ತು ಶಾಲೆಗಳು ನಡೆಸಿದ ಚಟುವಟಿಕೆಗಳಿಗೆ ಹಾಜರಾಗಿಲ್ಲ ಆದರು ಶಾಲೆಗಳ ಡೇಟಾವನ್ನು ಪೋರ್ಟಲ್ಗಳಲ್ಲಿ ಅಪ್ಲೋಡ್ ಮಾಡಲು ಸರ್ಕಾರ ಒತ್ತಾಯಿಸುತ್ತಿದೆ. ಈ 2021-22ರ ಶೈಕ್ಷಣಿಕ ವರ್ಷದಲ್ಲಿ ‘ಶಾಲೆಯಿಂದ ವಂಚಿತರಾದವರ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ ಮತ್ತು ಸೆಪ್ಟೆಂಬರ್ ವೇಳೆಗೆ ನಾವು ಸ್ಪಷ್ಟ ಚಿತ್ರವನ್ನು ಪಡೆಯುತ್ತೇವೆ “ಎಂದು ಸಂಘದ ಸದಸ್ಯರು ಹೇಳಿದ್ಧಾರೆ ಎಂದು ಡೆಕನ್ ಎರಾಲ್ಡ್ ವರದಿ ಮಾಡಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದ ಶಾಲೆಗಳ ಪ್ರಕಾರ, ಹೆಚ್ಚಿನ ಮಕ್ಕಳು ಶಾಲಾ ಶುಲ್ಕ ಕಟ್ಟಲು ಸಮಸ್ಯಯಾಗಿರುವವರೇ ಆಗಿದ್ದಾರೆ. “2020-21ರ ಶೈಕ್ಷಣಿಕ ವರ್ಷದಲ್ಲಿ ಕೇವಲ 45% ಪೋಷಕರು 100% ಶುಲ್ಕವನ್ನು ಪಾವತಿಸಿದ್ದಾರೆ ಮತ್ತು 17% ರಷ್ಟು 75% ಶುಲ್ಕವನ್ನು ಪಾವತಿಸಿದ್ದಾರೆ ಮತ್ತು 9% ಪೋಷಕರು ಹಿಂದಿನ ಶೈಕ್ಷಣಿಕ ವರ್ಷದಲ್ಲಿ 25% ಶುಲ್ಕವನ್ನು ಪಾವತಿಸಿದ್ದಾರೆ” ಎಂದು ಶಶಿ ಕುಮಾರ್ ಹೇಳಿದ್ದಾರೆ.

ಸಮೀಕ್ಷೆಯು ಶಿಶುವಿಹಾರ ಮತ್ತು 10 ನೇ ತರಗತಿಯ ನಡುವಿನ ಮಕ್ಕಳನ್ನು ಒಳಗೊಂಡಿದೆ.
ಆನ್ಲೈನ್ / ಆಫ್ಲೈನ್ನಲ್ಲಿ ಕಡ್ಡಾಯವಾಗಿ ಹಾಜರಾಗುವುದು ಅಥವಾ ಆಯಾ ಶಾಲೆಯಿಂದ ಕಲಿಸುವ ಯಾವುದೇ ವಿಧಾನಗಳೊಂದಿಗೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸುವುದು ಕಡ್ಡಾಯಗೊಳಿಸುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿ ಸರ್ಕಾರವನ್ನು ಕೋರಿದೆ.
ಏತನ್ಮಧ್ಯೆ, ಶಾಲಾ ದಾಖಲೆಗಳ ಭಾಗವಾಗಿರದ ವಿದ್ಯಾರ್ಥಿಗಳನ್ನು ಸರ್ಕಾರ ಎಣಿಸುವ ಬಗ್ಗೆ ಸಂಘವು ಕಳವಳ ವ್ಯಕ್ತಪಡಿಸಿದೆ. “ಯಾವುದೇ ಮಕ್ಕಳಿಗೆ ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ, ಸಂಬಂಧಪಟ್ಟ ಶಾಲೆಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಮತ್ತು ಇದು ಕೂಡ ಒಂದು ಕಳವಳವಾಗಿದೆ” ಎಂದು ಶಶಿ ಕುಮಾರ್ ಹೇಳಿದ್ದಾರೆ.

ಸಮೀಕ್ಷೆಯ ಫಲಿತಾಂಶವನ್ನು ಸಂಘವು ಕರ್ನಾಟಕ ಹೈಕೋರ್ಟ್ಗೆ ಸಲ್ಲಿಸಿದೆ.