ಕೋವಿಡ್ ಹಗರಣದ ತನಿಖೆಗೆ ಸರ್ಕಾರ ಮುಂದಡಿ ಇಟ್ಟಿದ್ದು ಈಗಾಗಲೇ ವಿಧಾನಸೌದ ಪೊಲೀಸ್ ಠಾಣೆಯಲ್ಲಿ FIR ಕೂಡ ದಾಖಲಾಗಿದ್ದ. ಸದ್ಯಕ್ಕೆ ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಎನ್ 95 ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರ ಸಾಮಗ್ರಿಗಳ ಖರೀದಿಯಲ್ಲಿ ಹಣ ದುಬರ್ಳಕೆ ಆಗಿದೆ. ಕಾನೂನು ಪ್ರಕ್ರಿಯೆಗಳನ್ನ ಗಾಳಿಗೆ ತೂರಿದ್ರಿಂದ ಒಟ್ಟು 167 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎನ್ನಲಾಗಿದೆ.
2020ರ ಆಗಸ್ಟ್ 18ರಂದು ಸರ್ಕಾರ ವತಿಯಿಂದ ಮಾಸ್ಕ್ ಹಾಗೂ ಪಿಪಿಇ ಕಿಟ್ ಖರೀದಿ ನಡೆದಿದೆ. 2.59 ಲಕ್ಷ ಎನ್ 95 ಮಾಸ್ಕ್ ಹಾಗೂ 2.59 ಪಿಪಿಇ ಕಿಟ್ ಖರೀದಿಗೆ ಅನುಮತಿ ಕೊಡಲಾಗಿದೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಬಳಕೆಗೆ ರಾಜ್ಯದ 17 ಸರ್ಕಾರಿ ಕಾಲೇಜು ಹಾಗೂ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಳಸಲು ಅನುಮೋದನೆ ಕೊಡಲಾಗಿತ್ತು. ನಂತರ ವೈದ್ಯಕೀಯ ಶಿಕ್ಷಣ ಇಲಾಖೆಯಿಂದಲೂ ಟೆಂಡರ್ ಕರೆದಿದ್ದು, ಖಾಸಗಿ ಸಂಸ್ಥೆಗೆ ಪಿಪಿಇ ಕಿಟ್ ಸರಬರಾಜು ಬಿಡ್ ಕೊಟ್ಟು 15 ದಿನದೊಳಗೆ ಸರಬರಾಜು ಮಾಡಲು ಆದೇಶ ಮಾಡಲಾಗಿದೆ.
ಆದರೂ 17 ಸರ್ಕಾರಿ ಕಾಲೇಜು, ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೀಡಿರುವ ದಾಖಲೆಗಳಲ್ಲಿ ನಮೂದಿಸಿಲ್ಲ ಎಂದು ಎಫ್ಐಆರ್ ಆಗಿದೆ. ಟೆಂಡರ್‌ನಲ್ಲಿ ಭಾಗವಹಿಸದೇ ಇದ್ದರೂ ಮತ್ತೊಂದು ಕಂಪನಿಗೆ ಬಿಡ್ ಕೊಡಲಾಗಿದೆ. ಅಂದಿನ ಅಧಿಕಾರಿಗಳು, ಜನಪ್ರತಿನಿಧಿಗಳು ಅಕ್ರಮದಲ್ಲಿ ಶಾಮೀಲು ಆಗಿರುವ ಆರೋಪ ಹೊರಿಸಲಾಗಿದೆ.
ತುರ್ತು ಪರಿಸ್ಥಿತಿಯ ಲಾಭ ಪಡೆದು ಸರ್ಕಾರಕ್ಕೆ 167 ಕೋಟಿಗಳ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ ಎಂದು ಎಫ್ಐಆರ್‌ನಲ್ಲಿ ಹೇಳಲಾಗಿದೆ. ಐಪಿಸಿ ಸೆಕ್ಷಮ್ 406, 409, 403, 120b ಅಡಿಯಲ್ಲಿ ತನಿಖೆಯ ನಡೆಸಲು ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿ ಹಗರಣದ ಪಿನ್ ಟು ಪಿನ್ ಲೆಕ್ಕ ಬಯಲು ಮಾಡುತ್ತಾ ಅನ್ನೋ ಕುತೂಹಲ ಸೃಷ್ಟಿಸಿದೆ.