ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಆರಂಭವಾಗಿ ಒಂದುವರೆ ವರ್ಷ ಕಳೆದಿದೆ. ಹೀಗಾಗಿ ಇತ್ತೀಚೆಗೆ ಈ ಯುದ್ಧದ ಕರಾಳ ಸತ್ಯಗಳು ಈಗಿಗ ಹೊರ ಬರುತ್ತಿವೆ. ಉಕ್ರೇನ್ ಜತೆಗಿನ ಯುದ್ಧದಲ್ಲಿ ಮಡಿದ ತನ್ನ ಯೋಧರ ಸಂಖ್ಯೆ 6 ಸಾವಿರ ಮಾತ್ರ ಎಂದು ಇದುವರೆಗೂ ರಷ್ಯಾ ಹೇಳಿಕೊಂಡಿತ್ತು. ಆದರೆ ಸಾವನನ್ನಪ್ಪಿದ ರಷ್ಯ ಸೈನಿಕರ ಸಂಖ್ಯೆ ಸುಮಾರು 50 ಸಾವಿರಕ್ಕೂ ಅಧಿಕ ಎಂದು ರಷ್ಯಾದ 2 ಸ್ವತಂತ್ರ ಮಾಧ್ಯಮ ಸಂಸ್ಥೆಗಳು ವರದಿಯೊಂದನ್ನ ಬಹಿರಂಗ ಪಡಿಸಿವೆ. ಇದು ರಷ್ಯಾವನ್ನೇ ದಂಗಾಗಿಸಿದೆ.
ರಷ್ಯಾ ಈ ಹಿಂದೆ ಕೂಡ ಯುದ್ಧ ಕುರಿತಾಗಿ ಹಲವು ಸುಳ್ಳುಗಳನ್ನ ಹೇಳಿಕೊಂಡು ಬಂದಿದೆ ಎಂಬ ಆರೋಪಗಳು ಇವೆ. ಇದಕ್ಕೆ ಪೂರಕ ಎಂಬಂತೆ ಇದೀಗ ರಷ್ಯದ ಸ್ವತಂತ್ರ ತನಿಖಾ ಪತ್ರಿಕಾ ಸಂಸ್ಥೆಗಳು ನೀಡಿದ ವರದಿ ಈಗ ರಷ್ಯಾ ಮಾತ್ರವಲ್ಲದೆ ಜಗತ್ತಿನ ಅಚ್ಚರಿಗೆ ಕೂಡ ಕಾರಣವಾಗಿದೆ
ಈ ಕುರಿತು ಮಾಹಿತಿ ನೀಡಿರುವ ಮೀಡಿಯಾ ಜೋನ ಹಾಗೂ ಮೆಡುಜ ಮಾಧ್ಯಮಗಳು ಅಮೆರಿಕ 20,000 ಯೋಧರು ಸಾವನ್ನಪ್ಪಿರಬಹುದು ಎಂದು ಹೇಳಿದ್ದರೆ ಬ್ರಿಟನ್ 40 ರಿಂದ 60,000 ಮಂದಿ ರಷ್ಯಾದ ಸೈನಿಕರು ಸಾವನ್ನಪ್ಪಿರಬಹುದು ಎಂಬ ಅಂಕಿ ಅಂಶವನ್ನು ನೀಡಿತ್ತು ಆದರೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವು ಗೊಂದಲಗಳು ಕೂಡ ಉದ್ಭವವಾಗಿದ್ದವು. ಪ್ರಮುಖವಾಗಿ ಉಕ್ರೇನ್ ರಷ್ಯಾದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿತ್ತು. ಇದು ರಷ್ಯಾದಲ್ಲಿ ಕೂಡ ಹಲವು ಗೊಂದಲಗಳಿಗೆ ಕಾರಣವಾಗಿತ್ತು ಹೀಗಾಗಿ ಈ ಸ್ವತಂತ್ರ ಪತ್ರಿಕಾ ಸಂಸ್ಥೆಗಳು ಈ ಬಗ್ಗೆ ವರದಿ ಮಾಡೋದಕ್ಕೆ ಅಧ್ಯಯನ ನಡೆಸಿದ್ದವು ಈಗ ಆ ಅಧ್ಯಾಯದಲ್ಲಿ 50,000ಕ್ಕೂ ಹೆಚ್ಚು ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತವಾಗಿ ಮಾಹಿತಿ ನೀಡಿದೆ.