ಚಾಮರಾಜನಗರದ (Chamarajanagar) ಮಲೆ ಮಹದೇಶ್ವರ ಬೆಟ್ಟದ (MM Hills) ವನ್ಯಧಾಮದಲ್ಲಿ ಐದು ಹುಲಿಗಳು ಸಾವನ್ನಪ್ಪಿದ್ದ ಪ್ರಕರಣಕ್ಕೆ Tiger death) ಸಂಬಂಧಪಟ್ಟಂತೆ, ಹಸುವಿನ ಮಾಂಸಕ್ಕೆ ವಿಷ ಹಾಕಿದ್ದ ಮೂವರು ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹೌದು,ಮಾದ ಅಲಿಯಾಸ್ ಮಾದರಾಜು, ನಾಗರಾಜು ಸೇರಿ ಮೂವರನ್ನ ಅರೆಸ್ಟ್ ಮಾಡಲಾಗಿದೆ. ಮಾದನ ತಂದೆ ಶಿವಣ್ಣನಿಗೂ ಹುಲಿಗಳ ಸಾವಿಗೂ ಯಾವುದೇ ಸಂಬಂಧವಿಲ್ಲದ ಕಾರಣ, ಆತನನ್ನ ಪ್ರಕರಣದಿಂದ ಕೈಬಿಡಲಾಗಿದೆ.

ಇನ್ನು ಬಂಧಿತ ಮೂವರು ಆರೋಪಿಗಳು ಒಟ್ಟಿಗೆ ಹಸು ಮೇಯಿಸಲು ಹೋಗುತ್ತಿದ್ದರು.ಈ ವೇಳೆ ಹುಲಿಗಳು ಮಾದನ ಹಸು ಮೇಲೆ ದಾಳಿ ಮಾಡ್ತಿತ್ತು.ಇದಕ್ಕೆ ಸೇಡು ತೀರಿಸಿಕೊಳ್ಳಲು ಹುಲಿಗಳನ್ನ ಕೊಲ್ಲಲು ಸ್ಕೆಚ್ ಹಾಕಿ ಮೃತಪಟ್ಟಿದ್ದ ಹಸುವಿನ ಮಾಂಸಕ್ಕೆ ವಿಷ ಹಾಕಿದ್ದರು ಎಂಬ ವಿಚಾರ ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.