
ಕರಾವಳಿಯಲ್ಲಿ ಟ್ರಫ್ (A problem caused by the movement of air in the atmosphere) ಉಂಟಾಗಿರುವ ಹಿನ್ನಲೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಐದು ದಿನಗಳ ಕಾಲ ಮಳೆ ಇರಲಿದೆ (Five Days Raining) ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ (Karnataka Rain). ಕರಾವಳಿ ಜಿಲ್ಲೆಗಳಾದ ಉಡುಪಿ(Udupi), ದಕ್ಷಿಣ ಕನ್ನಡ(Dakshina Kannada), ಉತ್ತರ ಕನ್ನಡ(Uttara Kannada) ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 11 (July 11) ರವರೆಗೂ ಮಳೆ ಇರಲಿದ್ದು ಆರೆಂಜ್ ಅಲರ್ಟ್(Orange Allert) ಘೋಷಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಮಳೆಯ ಅಲರ್ಟ್ ನೀಡಲಾಗಿದೆ. ಇನ್ನು ಉತ್ತರ ಒಳನಾಡಿನ ಬೆಳಗಾವಿಗೆ(Belagavi) ಇಂದಿನಿಂದ ಜುಲೈ 10ರ ವರೆಗೆ ಯಲ್ಲೋ ಅಲರ್ಟ್ ನೀಡಿದ್ದು ಬಾಗಲಕೋಟೆ(Bagalkot), ಧಾರವಾಡ(Dharwad), ಗದಗ(Gadag), ಹಾವೇರಿ(haveri), ಕೊಪ್ಪಳ(Koppal), ರಾಯಚೂರು(Raichur), ವಿಜಯಪುರ(Vijayapura) ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನು ಬೀದರ್(Bidar), ಕಲ್ಬುರ್ಗಿ(Gulbarga), ಯಾದಗಿರಿ(Yadgir) ಜಿಲ್ಲೆಗೆ ಇಂದು ಯೆಲ್ಲೋ ಅಲರ್ಟ್ ನೀಡಿದ್ದು ಬೆಳಗಾವಿ, ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಐದು ದಿನದ ಮಳೆಯ ಅಲರ್ಟ್ ನೀಡಿದ್ದು ಬಳ್ಳಾರಿ(Ballary), ಬೆಂಗಳೂರು ಗ್ರಾಮಾಂತರ (Bangalore Rural), ಬೆಂಗಳೂರು ನಗರ(Bangalore), ಚಾಮರಾಜನಗರ(Chamarajnagar), ಚಿಕ್ಕಬಳ್ಳಾಪುರ(Chikkaballapur), ಚಿತ್ರದುರ್ಗ(Chitradurga), ದಾವಣಗೆರೆ(Davanagere), ಹಾಸನ(hassan), ಕೊಡಗು(Kodagu), ಕೋಲಾರ(Kolar), ಮಂಡ್ಯ(Mandya), ಮೈಸೂರು(Mysore), ರಾಮನಗರ(Ramanagar), ತುಮಕೂರು(Tumkur), ವಿಜಯನಗರ(Vijayanagara) ಜಿಲ್ಲೆಗಳಲ್ಲಿ ನಿರಂತರ ಗಾಳಿ ಮತ್ತು ಹಗುರದಿಂದ ಸಾಧಾರಣ ಮಳೆಯಾಗಲಿದೆ.