ರಾಜ್ಯ ಕಾಂಗ್ರೆಸ್(congress) ತನ್ನ ಎರೆಡನೇ ಪಟ್ಟಿಯನ್ನು (second list) ಬಹುತೇಕ ಅಂತ್ಯಗೊಳಿಸಿದ್ದು ನಾಳೆ ಅಭ್ಯರ್ಥಿಗಳ (candidates) ಹೆಸರು ಪ್ರಕಟವಾಗೋ ಸಾಧ್ಯತೆಯಿದೆ. ಲೋಕಸಬಾ ಚುನಾವಣೆಗೆ ಗೆಲ್ಲುವ ಅಭ್ಗರ್ಥಿಗಳನ್ನ ಕಣಕ್ಕಿಳಿಸೋದು ಕಾಂಗ್ರೆಸ್ ಗೆ ಸವಾಲಿನ ಸಂಗತಿಯಾಗಿತ್ತು. ಯಾಕಂದ್ರೆ ಮೋದಿ ಅಲೆ (modi wave) ಎದುರಿಸಿ ಗೆಲ್ಲಬಲ್ಲ ಸಮರ್ಥ ಅಂಗ್ಯರ್ಥಿಗಳನ್ನ ಹುಡುಕಿತರೋದು ಕಾಂಗ್ರೆಸ್ ಗೆ ಸವಾಲಾಗಿತ್ತು. ಆದ್ರೆ ಇದೀಗ ಕಾಂಗ್ರೆಸ್ ಒಂದು ಹಂತಕ್ಕೆ ಆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದ್ದು ಪಟ್ಟಿ ಫೈನಲ್ ಆಗಿದೆ.

ಮೂಲಗಳ ಮಾಹಿತಿಯ ಪ್ರಕಾರ ಕಾಂಗ್ರೆಸ್ (congress) ಅತಿ ಹೆಚ್ಚು ಕುಟುಂಬ ರಾಜಕಾರಣಕ್ಕೆ ಮಣೆಹಾಕಿದೆ ಎನ್ನಲಾಗಿದ್ದು, ಬಹುತೇಕ ಸಚಿವರ (ministers) ಕುಟುಂಬಗಳಿಗೆ ಟಿಕೆಟ್ ನೀಡಿದೆ ಎನ್ನಲಾಗ್ತಿದೆ. ಸ್ವತ ಸಚಿವರನ್ನೇ ಕಣಕ್ಕಿಳಿಸಬೇಕು ಎಂಬ ಇಚ್ಛೆ ಹೊಬ್ದಿದ್ದ ಕಾಂಗ್ರೆಸ್ ಗೆ ಸಚಿವರುಗಳು ಸಾಥ್ ನೀಡಲಿಲ್ಲ. ಹೀಗಾಗಿ ಅವರ ಮಕ್ಕಳಿಗೆ ಟಿಕೆಟ್ (Ticket) ನೀಡಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಸಚಿವರ (ministers) ಹೆಗಲಿಗೆ ನೀಡಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್(mrunal hebbalkar) , ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ (priyanka jarakiholi) ಹೀಗೆ ಒಟ್ಟು ೫ ಜನ ಸಚಿವರ ಮಕ್ಕಳಿಗೆ ಟಿಕೆಟ್ ಫೈನಲ್ ಆಗಿದ್ದು, ಸಾಮಾನ್ಯ ಕಾರ್ಯಕರ್ತರಿಗೆ ಎಲ್ಲಿಯೂ ಅವಕಾಶ ಮಾಡಿಕೊಟ್ಟಿಲ ಎಂಬ ಕೂಗು ಕೇಳಿಬರ್ತಿದೆ. ಪಟ್ಟಿ ಘೋಷಣೆಯಾದ ನಂತರ ಸಣ್ಣದಾಗಿ ಕಾರ್ಯಕರ್ತರ (party workers) ಅಸಮಾಧಾನ ಭುಗಿಲೆದ್ದರೂ ಆಶ್ಚರ್ಯವೇನಿಲ್ಲ. ಪಕ್ಷ ಕಟ್ಟಲು ಮಾತ್ರ ಕಾರ್ಯಕರ್ತರು ಬೇಕು. ಆದ್ರೆ ಟಿಕೆಟ್ ಮಾತ್ರ ಪ್ರಭಾವಿಗಳು ಸಚಿವರುಗಳ ಪಾಲಿಗೆ ಎಂದು ಕೆಲ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.