ಬೆಂಗಳೂರಿನ (Bangalore) ಮಲ್ಲೇಶ್ವರಂನ (Malleshwaram) ರಾಜಾಶಂಕರ್ ಆಟದ ಮೈದಾನದಲ್ಲಿ ಗೇಟ್ ಬಿದ್ದು ಮೃತಪಟ್ಟಿದ್ದ ಬಾಲಕ ನಿರಂಜನ್ (Niranjan) ಕುಟುಂಬಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ (Dk shivakumar) ಸಾಂತ್ವನ ಹೇಳಿದ್ದಾರೆ ಜೊತೆಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಇನ್ನು ನಿರ್ಲಕ್ಷ್ಯ ತೋರಿರುವ ಸಹಾಯಕ ಎಂಜಿನಿಯರ್ ಶ್ರೀನಿವಾಸ್ ರಾಜು (Engineer srinivas raju) ಅಮಾನತಿಗೆ ಆದೇಶಿಸಿದ್ದಾರೆ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳಾದ ಕೆ. ಶಾಂತಲಾ, ದೇವರಾಜು, ಬೇಬಿ ಆಯೇಷಾ ಹುಸೇನ್ರನ್ನ ಅಮಾನತುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಅಲ್ಲದೇ ಕಾರ್ಯಪಾಲಕ ಇಂಜಿನಿಯರ್ ಎಲ್.ವೆಂಕಟೇಶ್ಗೆ ಕಾರಣ ಕೇಳಿ ನೋಟಿಸ್ (Notice) ನೀಡಲಾಗಿದೆ. ಇತ್ತ ಆಟದ ಮೈದಾನದ ಸಂಪೂರ್ಣ ಕಾಮಗಾರಿಯ ಕುರಿತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಒಂದು ವಾರದೊಳಗೆ ಎಲ್ಲವನ್ನ ಪರಿಶೀಲಿಸಿ, ಸಂಪೂರ್ಣ ವರದಿ ನೀಡುವಂತೆ ತಿಳಿಸಲಾಗಿದೆ.