5, 8 ಮತ್ತು 9ನೇ ತರಗತಿ ಪರೀಕ್ಷೆಗೆ ದಿನಾಂಕ ನಿಗದಿ.. ಪರೀಕ್ಷೆ ನಡೆಯುತ್ತಾ..?

ರಾಜ್ಯ ಸರ್ಕಾರ ಬೋರ್ಡ್ ಎಕ್ಸಾಂ ನಡೆಸುವ ನಿರ್ಧಾರ ಇನ್ನೂ ಅನಿಶ್ಚತತೆಯಿಂದ ಕೂಡಿದೆ. 5, 8 & 9ನೇ ತರಗತಿಗಳ ಬೋರ್ಡ್ ಎಕ್ಸಾಂ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಿದೆ ಹೈಕೋರ್ಟ್ ವಿಭಾಗೀಯ ಪೀಠ. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಸುದೀರ್ಘ ವಿಚಾರಣೆ ಬಳಿಕ ಬೋರ್ಡ್ ಎಕ್ಸಾಂಗೆ ನಡೆಸಲು ಅಸ್ತು ಎಂದಿದೆ ಹೈಕೋರ್ಟ್ ವಿಭಾಗೀಯ ಪೀಠ.
ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ಬೆನ್ನಲ್ಲೇ ಸೋಮವಾರದಿಂದ ಪರೀಕ್ಷೆ ನಡೆಸುವ ಬಗ್ಗೆ ಹೈಕೋರ್ಟ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿತ್ತು. ಅದರಂತೆ ಉಳಿದ ವಿಷಯಗಳ ಪರೀಕ್ಷೆಗೆ ದಿನಾಂಕ ಘೋಷಣೆ ಮಾಡಿದೆ. ಈಗಾಗಲೇ 11 ನೇ ತರಗತಿಯ ಎಲ್ಲಾ ಪರೀಕ್ಷೆಗಳು ಮುಗಿದಿವೆ. 5, 8 ಮತ್ತು 9ನೇ ತರಗತಿಗಳ ಎರಡು ವಿಷಯಗಳ ಪರೀಕ್ಷೆ ಮುಗಿದಿದೆ. ಉಳಿದ ವಿಷಯಗಳ ಪರೀಕ್ಷೆಗಳನ್ನ ಸೋಮವಾರದಿಂದ ಆರಂಭ ಮಾಡುವುದಕ್ಕೆ ಶಿಕ್ಷಣ ಇಲಾಖೆ ಆದೇಶ ಮಾಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವ ದಿನ ಮಧ್ಯಾಹ್ನ 2.30ಕ್ಕೆ ಪರೀಕ್ಷೆ ನಡೆಯಲಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಲ್ಲದ ದಿನ ಬೆಳ್ಳಗೆ 10 ಗಂಟೆಯಿಂದ ಪರೀಕ್ಷೆ ಮಾಡಲು ನಿರ್ಧಾರ ಮಾಡಲಾಗಿದೆ.
5ನೇ ತರಗತಿ ವೇಳಾಪಟ್ಟಿ
25-03-2024 – ಪರಿಸರ ಅಧ್ಯಯನ
26-03-2024 – ಗಣಿತ
8ನೇ ತರಗತಿ ವೇಳಾಪಟ್ಟಿ
25-03-2024 – ತೃತೀಯ ಭಾಷೆ
26-03-2024 – ಗಣಿತ
27-03-2024 – ವಿಜ್ಞಾನ
28-03-2024 – ಸಮಾಜ ವಿಜ್ಞಾನ
9ನೇ ತರಗತಿ ವೇಳಾಪಟ್ಟಿ
25-03-2024 – ತೃತೀಯ ಭಾಷೆ
26-03-2024 – ಗಣಿತ
27-03-2024 – ವಿಜ್ಞಾನ
28-03-2024 – ಸಮಾಜ ವಿಜ್ಞಾನ

ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ರುಪ್ಸಾ ನಿರ್ಧರಿಸಿದೆ. ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ ಈ ತೀರ್ಪು ತೃಪ್ತಿ ತಂದಿಲ್ಲ ಎಂದು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ (RUPSA) ಅಧ್ಯಕ್ಷ ಲೋಕೇಶ್ ತಾಳಿಕಟ್ಟಿ ಹೇಳಿದ್ದಾರೆ. ಸದ್ಯ ವಿಭಾಗೀಯ ಪೀಠ ಈ ಬಾರಿ ನಡೆಯುತ್ತಿರುವ ಬೋರ್ಡ್ ಪರೀಕ್ಷೆಗಳನ್ನ ಮುಗಿಸಿ. ಮುಂದಿನ ವರ್ಷದಿಂದ ಸೂಕ್ತ ತೀರ್ಮಾನ ತೆಗೆದುಕೊಳ್ಳಿ ಅಂತ ಹೇಳಿದೆ. ಆದರೆ ಈ ಬಾರಿ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಹೀಗಾಗಿ ನಾವು ಸುಪ್ರಿಂ ಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

ಸಾಕಷ್ಟು ಮಂದಿ ಪೋಷಕರು ಸಹ ಈ ಬಗ್ಗೆ ನಮಗೆ ಒತ್ತಾಯ ಮಾಡಿದ್ದಾರೆ ಎಂದು ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ. ಆದರೆ ರುಪ್ಸಾ ಸಂಘಟನೆ ನಿರ್ಧಾರ ಸಾಕಷ್ಟು ಪೋಷಕರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಎರಡು ಪರೀಕ್ಷೆಗಳು ನಡೆದಿದ್ದು, ಇನ್ನು ನಾಲ್ಕು ವಿಷಯಗಳ ಪರೀಕ್ಷೆ ಬಾಕಿಯಿದೆ. ಇದೀಗ ಹೈಕೋರ್ಟ್ ವಿಭಾಗೀಯ ಪೀಠ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಮಕ್ಕಳು ಸೋಮವಾರದಿಂದ ಪರೀಕ್ಷೆ ಬರೆಯುವುದಕ್ಕೆ ತಯಾರಿ ಮಾಡುತ್ತಿದ್ದಾರೆ. ಆದರೆ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದರೆ ವಿಚಾರಣೆ ಮುಗಿಯುವ ತನಕ ಪರೀಕ್ಷೆ ನಡೆಯುವುದು ಅನುಮಾನ ಎನ್ನಲಾಗ್ತಿದೆ. ಆದರೆ ಈ ಬಾರಿ ಪರೀಕ್ಷೆ ನಡೆದು, ಮುಂದಿನ ಬಾರಿ ಅನುಮಾನಕ್ಕೆ ತೆರೆ ಎಳೆಯಲಿ ಅನ್ನೋದು ಪೋಷಕರು ಆಗ್ರಹ ಎನ್ನಬಹುದು.