
ನಟಿ ರಮ್ಯಾ (Actress ramya) ಅವರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ (Social media ) ಅಶ್ಲೀಲ ಪದ ಬಳಕೆ ಮಾಡಿದ ದರ್ಶನ್ ಫ್ಯಾನ್ಸ್ (Darshan fans) ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆಯಷ್ಟೇ ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ ನಟಿ ರಮ್ಯಾ ದೂರು ದಾಖಲಿಸಿದ್ದರು.

ಹೀಗೆ ನಟಿ ರಮ್ಯಾ ಅವರಿಂದ ದೂರು ದಾಖಲಾಗ್ತಿದ್ದಂತೆ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ನಟಿ ರಮ್ಯಾ ಒಟ್ಟು 43 ಅಕೌಂಟ್ ಗಳ ಹೆಸರಿನ ಸಮೇತ ದೂರು ನೀಡಿದ್ದು, ಅಶ್ಲೀಲ ಕಾಮೆಂಟ್ಸ್ ಬಂದಿರೋ ಅಕೌಂಟ್ಸ್ ಪೈಕಿ ಬಹುತೇಕ ಫೇಕ್ ಅಕೌಂಟ್ಸ್ ಎನ್ನಲಾಗುತ್ತಿದೆ.

ಈ ಪ್ರೊಫೈಲ್ ಗಳನ್ನು ಜಾಲಾಡಿದಾಗ, ಬೇರೊಬ್ಬರ ಪೊಟೋ ಬಳಸಿ ವಿಪಿಎನ್ ಸಾಫ್ಟ್‌ವೇರ್ ಮೂಲಕ ನಕಲಿ ಅಕೌಂಟ್ಸ್ ಓಪನ್ ಮಾಡಲಾಗಿದೆ ಮತ್ತು ಯುವತಿಯರ ಪೊಟೋ ಬಳಸಿ ನಕಲಿ ಅಕೌಂಟ್ ಕ್ರಿಯೇಟ್ ಮಾಡಿರೋದು ಕೂಡ ಪತ್ತೆಯಾಗಿದೆ.
ಹೀಗಾಗಿ ತನಿಖೆ ಇನ್ನಷ್ಟು ತೀವ್ರಗೊಳ್ಳಬೇಕಿದ್ದು, ಅಶ್ಲೀಲ ಸಂದೇಶ ಕಳುಹಿಸಿರುವ ಅಕೌಂಟ್ ಗಳ ಐಪಿ ಅಡ್ರೆಸ್ ಪತ್ತೆಯಾದಲ್ಲಿ ಸೈಬರ್ ಕ್ರೈಂ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.