ಬಿಜೆಪಿ ಕಚೇರಿಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸುದ್ದಿಗೋಷ್ಠಿ ನಡೆಸಿ, ಇವತ್ತು ವಿರೋಧ ಪಕ್ಷದ ನಾಯಕನಾಗಿ ಒಂದು ವರ್ಷ ತುಂಬಿದೆ.. ನಮ್ಮ ಮೇಲೆ ಕಾಂಗ್ರೆಸ್‌ನವರು 40 ಪರ್ಸೆಂಟ್ ಅರೋಪ ಮಾಡಿದ್ರು. ಇಂದು ಅದರಿಂದಲೂ ಮುಕ್ತರಾಗಿದ್ದೇವೆ.. ಇದು ನಮಗೆ ಸಿಹಿ ಸುದ್ದಿ. ಅರೋಪ ಮಾಡಿದ್ದವರು ಕಾಂಗ್ರೆಸ್ ಟೂಲ್ ಕಿಟ್ ಆಗಿ ಅರೋಪ ಮಾಡಿದ್ರು.. ನಿರುದ್ಯೋಗಿ ಕಂಟ್ರಾಕ್ಟರ್‌ಗಳೆಲ್ಲ ಸೇರಿಕೊಂಡು ನಮ್ಮ ಮೇಲೆ ಅರೋಪ ಮಾಡಿದ್ರು.. ನಮ್ಮ ಮೇಲೆ 40 ಪರ್ಸೆಂಟ್ ಅರೋಪ ಮಾಡಿದ್ರು ಸಹ ಇಲ್ಲಿಯವರೆಗೂ ಸರ್ಕಾರಕ್ಕೆ ಪ್ರೂವ್ ಮಾಡಲು ಅಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಮಾತನಾಡಿ, 40 ಪರ್ಸೆಂಟ್ ಕಮೀಷನ್ ಆರೋಪ ಸುಳ್ಳು ಎಂಬ ವರದಿ ವಿಚಾರಕ್ಕೆ ತಿರುಗೇಟು ನಿಡಿದ್ದಾರೆ. ನಾವು ಅಧಿಕಾರಕ್ಕೆ ಬಂದಿದ್ದೇ 40 ಪರ್ಸೆಂಟ್ ಆರೋಪ ಮಾಡಿದ ಕಾರಣದಿಂದ ಅಂತ ಯಾರು ಹೇಳಿದ್ದು..? ಎಂದು ಪ್ರಶ್ನಿಸಿದ್ದಾರೆ.ಆಗ ಬಿಜೆಪಿಯವರರ ವಿರುದ್ಧ ಆರೋಪ ಬಂದಿತ್ತು.ಕೆಂಪಣ್ಣ ಅವರು ಪ್ರಧಾನಿ ಮೋದಿ ಅವರಿಗೆ ದೂರು ಕೊಟ್ಟಿದ್ದರು. ಅದೇ ಕಾರಣಕ್ಕೆ ಜನರ ಹಿತ ಕಾಪಾಡುವ ದೃಷ್ಟಿಯಿಂದ ಹೋರಾಟ ಮಾಡಿದ್ದೆವು.ಆದ್ರೆ ಅವರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ಬರೀ 40 ಪರ್ಸೆಂಟ್ ಆರೋಪ ಮಾಡಿದ್ದಕ್ಕೇ ನಮ್ಮ ಸರ್ಕಾರ ಬಂದಿದ್ದು ಅನ್ನೋದು ಸುಳ್ಳು ಎಂದಿದ್ದಾರೆ.
ಇನ್ನು ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ವಿಚಾರ ತನಿಖೆ ನಡೆಸಿರುವ ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಿದೆ. ಕೂಡಲೇ ಕಾಂಗ್ರೆಸ್ ಸರ್ಕಾರ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹ ಮಾಡಿದ್ದಾರೆ. ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಎದುರು ಬಹಿರಂಗ ಕ್ಷಮೆ ಕೇಳಬೇಕು. 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಲೋಕಾಯುಕ್ತ ತನಿಖೆ ಮಾಡಿ ವರದಿ ಕೊಟ್ಟಿದೆ, ಅದರಲ್ಲಿ ಆರೋಪ ಸುಳ್ಳು ಅಂತ ಹೇಳಿದೆ ಎಂದಿದ್ದಾರೆ.
40 ಪರ್ಸೆಂಟ್ ಕಮಿಷನ್ ಆರೋಪ ಸುಳ್ಳು ಎಂದು ಲೋಕಾಯುಕ್ತ ತನಿಖೆ ವರದಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಂಪಣ್ಣ ಹಿಂದಿನ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಕೇಳ್ತಿದ್ದಾರೆ ಅನ್ನೋ ಆರೋಪ ಮಾಡಿದ್ರು. ಕೆಂಪಣ್ಣ ಆರೋಪದ ಬಗ್ಗೆ ನಾವು ಪ್ರತಿಭಟನೆ ಮಾಡಿದ್ವಿ. ಸದ್ಯ ಲೋಕಾಯುಕ್ತರು ನೀಡಿರುವ ರಿಪೋರ್ಟ್ ನಾನು ನೋಡಿಲ್ಲ. ಬಿಜೆಪಿಯವರ ಮಾತು ಕೇಳಿ ನನ್ನ ಬಳಿ ಕೇಳಬೇಡಿ. ರಿಪೋರ್ಟ್ ಬಂದಿದೆ ಅಂದ ಮಾತ್ರಕ್ಕೆ ತಪ್ಪು ಆಗಿಯೇ ಇಲ್ಲ ಅಂತಲ್ಲ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.