ಅನಾಮಿಕ ಕರೆಗಳನ್ನು ಗೊತ್ತು ಪಡಿಸುವ ಮೊಬೈಲ್ ಆ್ಯಪ್ True Caller ಬಗ್ಗೆ ಆಘಾತಕಾರಿ ಮಾಹಿತಿಯೊಂದು ಈಗ ಹೊರ ಬಂದಿದೆ. ಈ ಆ್ಯಪ್ ಬಳಸುವ ದೇಶದ 4 ಕೋಟಿ ಜನರ ಮಾಹಿತಿಗಳು ಇದೀಗ ಡಾರ್ಕ್ ನೆಟ್ನಲ್ಲಿ ಮಾರಾಟಕ್ಕೆ ಬಿದ್ದಿದೆ.
ಅಮೆರಿಕಾ ಮೂಲದ ಸೈಬಲ್ ಇಂಕ್ ಎಂಬ ಸೈಬರ್ ಕಂಪೆನಿಯೊಂದು ಈ ಮಾಹಿತಿ ಬಯಲು ಮಾಡಿದ್ದು, ಒಟ್ಟಾರೆ 4 ಕೋಟಿ ಭಾರತೀಯರ, ಮೊಬೈಲ್ ಸಂಖ್ಯೆ, ಹೆಸರು, ಲಿಂಗ (Gender), ಲೊಕೇಶನ್, ಈಮೇಲ್ ವಿವರ ಹಾಗೂ ಫೇಸ್ಬುಕ್ ವಿವರಗಳನ್ನು ಕೇವಲ 1 ಸಾವಿರ ಡಾಲರ್ ರೂಪಾಯಿಗೆ ಮಾರಟಕ್ಕಿಡಲಾಗಿದೆ ಎಂದು ಈ ಸೈಬರ್ ಕಂಪೆನಿ ಹೇಳಿದೆ.
Also Read: ಅತೀ ಹೆಚ್ಚು ಬಳಕೆಯ ZOOM ಆ್ಯಪ್ ಕುರಿತು ಎಚ್ಚರಿಕೆ ವಹಿಸಿ!
ಮುಖ್ಯವಾಗಿ, ಮಹಾರಾಷ್ಟ್ರ, ಬಿಹಾರ್, ಆಂಧ್ರಪ್ರದೇಶ, ದೆಹಲಿ, ಹರಿಯಾಣ, ಮಧ್ಯಪ್ರದೇಶ, ಈಶಾನ್ಯ ಭಾರತ, ಒರಿಸ್ಸಾ ಹಾಗೂ ಪಂಜಾಬ್ ರಾಜ್ಯದಲ್ಲಿನ ಬಳಕೆದಾರರ ಮಾಹಿತಿ ಇಲ್ಲಿ ಮಾರಾಟಕ್ಕೆ ಇಡಲಾಗಿದೆ. ವಿವರವನ್ನ ಸೈಬಲ್ ಇಂಕ್ ಕಂಪೆನಿ ಸೈಬರ್ ಎಕ್ಸ್ಪರ್ಟ್ ಬೀನು ಅರೋರ ಈ ಮಾಹಿತಿಯನ್ನು ಈಗ ಹೊರಹಾಕಿದ್ದಾರೆ.
ಈ ಬಗ್ಗೆ ಹೇಳಿರುವ ಅರೋರ, True Callerನಲ್ಲಿನ ಗೌಪ್ಯ ಮಾಹಿತಿಗಳನ್ನು TooGod ಹೆಸರಲ್ಲಿನ ವ್ಯಕ್ತಿ ಅಥವಾ ಒಂದು ಗುಂಪು ಈ ಮಾಹಿತಿಗಳನ್ನು ಕದ್ದು, ಸದ್ಯ ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಭಾರತ ಗಮನ ಹರಿಸ ಬೇಕಿದೆ ಎಂದೂ ಹೇಳಿದ್ದಾರೆ. ಅಂದಹಾಗೆ, ಡಾರ್ಕ್ ನೆಟ್ ಎಂಬುದು ದೊಡ್ಡ ಮಲ್ಟಿನ್ಯಾಷನಲ್ ಕಂಪೆನಿಗಳ ಜಾಲ. ಇಲ್ಲಿ ಕಂಪೆನಿಗಳು ತಮಗೆ ಬೇಕಾದ ಮಾಹಿತಿಗಳನ್ನು ದುಡ್ಡು ಕೊಟ್ಟು ಖರೀದಿಸಬಹುದು.