ಫೆಬ್ರವರಿ 14 ರಂದು ಅರಮನೆ ಮೈದಾನದಲ್ಲಿ ಜೆಡಿಎಸ್ ಪಕ್ಷ ಬೃಹತ್ ಸಮಾವೇಶ ನಡೆಸಿದೆ. ಈ ವೇಳೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದಲ್ಲಿ ಆರ್ಥಿಕ ಬಲ ಕಡಿಮೆಯಿತ್ತು. ಇದರಿಂದ ಮುಂಬರುವ ಮಸ್ಕಿ, ಬಸವಕಲ್ಯಾಣ, ಸಿಂದಗಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಕಣ್ಣಕ್ಕಿಳಿಸುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಈ ವಿಷಯ ತಿಳಿದು ವಿರೋಧ ಪಕ್ಷದವರು ಟೀಕೆ ಮಾಡಿದ್ದರು. ಬಿಜೆಪಿಗೆ ಸಹಾಯ ಮಾಡುವ ಸಲುವಾಗಿ ಜೆಡಿಎಸ್ ಚುನಾವಣೆಯಿಂದ ಹಿಂದೆ ಉಳಿದಿದೆ ಎಂದು ಟೀಕಿಸಲಾಗಿತ್ತು. ಆ ರೀತಿಯ ಯೋಚನೆ ನಮಗಿಲ್ಲ ಎಂದು ಹೆಚ್ಡಿಕೆ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಾವು ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ, ಬೇರೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದು ಸಾಕಾಗಿದೆ, ಯಾರ ಸಹವಾಸ ಬೇಡ, ಪಕ್ಷದ ಸ್ವಂತ ಬಲದಿಂದಲೇ ಶ್ರಮಿಸಿ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಬೇಕು. ಈ ಹಿನ್ನಲೆ ಮುಂಬರುವ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲಲು ಶ್ರಮಿಸಬೇಕು, ಶ್ರಮ ವಹಿಸಿದ್ರೆ 120 ಸ್ಥಾನಗಳನ್ನು ಗೆಲ್ಲಲು ಸಾಧ್ಯ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಸಲಹೆ ನೀಡಿದ್ದಾರೆ.
ರೈತರಪರ ಕಾಳಜಿ ಹಾಗು ರೈತರಿಗಾದ ಅನ್ಯಾಯದ ವಿರುದ್ಧ ಧ್ವನಿಯೆತ್ತುತ್ತಲೇ ಬಂದವರು ಹೆಚ್.ಡಿ ದೇವೇಗೌಡರು ಇವರ ರೈತಪರ ಕಾಳಜಿಗೆ ಪ್ರಧಾನಿ ಮೋದಿಯವರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದ ಕಾಶಂಪೂರ್ ಎಲ್ಲಾ ಭಾಗ್ಯಗಳನ್ನು ತಂದ ಕಾಂಗ್ರೆಸ್ ನವರು ಎಲ್ಲಿದ್ದಾರೆ. ಇದೀಗ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಕೆಲಸವಾಗುತ್ತಿಲ್ಲ ಎಂದು ವಿರೋಧ ಪಕ್ಷದವರ ವಿರುದ್ಧ ಬಂಡೆಪ್ಪ ಕಾಶಂಪೂರ್ ಗುಡುಗಿದ್ದಾರೆ.