ಧರ್ಮಸ್ಥಳದಲ್ಲಿ ರಹಸ್ಯವಾಗಿ ಶವಗಳನ್ನು (Dharmasthala mass burials) ಹೂತಿಟ್ಟ ಆರೋಪ ಸದ್ದು ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಈಗಾಗಲೇ ಎಸ್‌ಐಟಿ (SIT) ರಚನೆ ಮಾಡಿದ್ದು,ಇಂದಿನಿಂದ (ಜು.23) ನಿಗೂಢ ಸಾವುಗಳ ರಹಸ್ಯವನ್ನು ಬೇಧಿಸಲು ಎಸ್‌ಐಟಿ ತಂಡ ತನಿಖೆ ಆರಂಭಿಸಲಿದೆ.

ಐ.ಪಿ.ಎಸ್ (IPS) ಅಧಿಕಾರಿ ಪ್ರಣವ್ ಮೊಹಾಂತಿ (Pranav mohanthi) ಅವರ ನೇತೃತ್ವದ ವಿಶೇಷ ತನಿಖಾ ತಂಡ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ. ಈ ವೇಳೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅನಾಮಿಕ ವ್ಯಕ್ತಿ ನೀಡಿದ ದೂರಿನ ತನಿಖೆ ನಡೆಸಲಿದೆ. ಆ ಮೂಲಕ ಹುದುಗಿ ಹೋಗಿರುವ ಸತ್ಯ ಹೊರಬರುವ ಆಶಾಭಾವನೆ ಹೋರಾಟಗಾರರಲ್ಲಿ ಮೂಡಿದೆ.

ಇನ್ನು ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ SIT ತಂಡಕ್ಕೆ ಒಟ್ಟು 20 ಮಂದಿ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು ಎಂ.ಎನ್.ಅನುಚೇತ್, ಸೌಮ್ಯಲತಾ, ಜಿತೇಂದ್ರ ಕುಮಾರ್ ಒಳಗೊಂಡ ತಂಡಕ್ಕೆ ಡಿಜಿಪಿ ಸಲೀಂ ಈ ಸಿಬ್ಬಂದಿಗಳ ಹೊಸ ಟೀಂ ನಿಯೋಜಿಸಿದ್ದಾರೆ.