ಕಲಿಯುಗ ಕಾಮಧೇನು ಬೇಡಿದವರ ನೀಡುವ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವವು ಆಗಸ್ಟ್ 29ರಿಂದ ಸೆಪ್ಟೆಂಬರ್ 4ರವರೆಗೆ ಜರುಗಲಿದೆ ಮಠದ ಪೀಠಾಧ್ಯಕ್ಷ ಶ್ರೀ ಸುಭುದೇಂದ್ರ ತೀರ್ಥರು ಬುಧವಾರ (ಆಗಸ್ಟ್ 16) ಹೇಳಿದ್ದಾರೆ.
ಸೆಪ್ಟೆಂಬರ್ 29ರಿಂದ ಆರಾಧನಾ ಮಹೋತ್ಸವ ಅಂಗವಾಗಿ ಪ್ರತಿದಿನ ಸಂಜೆ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀಗಳು ಮಠದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಂತ್ರಾಲಯ ರಾಯರ ಆರಾಧನಾ ಮಹೋತ್ಸವದ ನೇತೃತ್ವವನ್ನು ಪೀಠಾಧಿಪತಿ ಸುಭುದೇಂದ್ರ ತೀರ್ಥ ಸ್ವಾಮೀಜಿ ವಹಿಸಲಿದ್ದು, ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಅಬ್ದುಲ್ ನಜೀರ್ ಉಪಸ್ಥಿತರಿರುವವರು. ವಿದ್ವಾನ್ ರಾಮ ವಿಠ್ಠಲ ಚಾರ್ಯ, ವಿದ್ವಾನ್ ಗರಿಕಿಪತಿ ನರಸಿಂಹರಾವ್, ಎನ್. ಚಂದ್ರಶೇಖರನ್ ಹಾಗೂ ಎಂ.ಐ.ಟಿ ಸಂಸ್ಥಾಪಕ ಡಾ.ವಿಶ್ವನಾಥ್ ಡಿ. ಕಾರತ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸೆಪ್ಟೆಂಬರ್ 1ರ ಬೆಳಿಗ್ಗೆ 7.30ಕ್ಕೆ ರಾಯರ ಮಧ್ಯರಾಧನೆ ಕಾರ್ಯಕ್ರಮ ಜರುಗಲಿದೆ.
ಈ ಸುದ್ದಿ ಓದಿದ್ದೀರಾ? ನೆಹರೂ ಸ್ಮಾರಕ ಮ್ಯೂಸಿಯಂ ಇನ್ನು ಪ್ರಧಾನ ಮಂತ್ರಿ ಮ್ಯೂಸಿಯಂ | ಅಧಿಕೃತ ಮರುನಾಮಕರಣ
ಆರಾಧನಾ ಸಪ್ತ ರಥೋತ್ಸವ ಅಂಗವಾಗಿ ಧ್ವಜಾರೋಹಣ ಪ್ರಾರ್ಥನೋತ್ಸವ, ಪ್ರಭಾ ಉತ್ರವ, ಧನ್ಯೋತ್ಸವ, ಋಗ್ವೇದ ನಿತ್ಯ ನೂತನ ಉಪಕರ್ಮ ನಡೆಯಲಿದೆ.
ಮಂತ್ರಾಲಯ ರಾಯರ ಆರಾಧನಾ ಮಹೋತ್ಸವ ಅಂಗವಾಗಿ ಆಗಸ್ಟ್ 30 ರಂದು ಶಾಖೋತ್ಸವ ರಜತ ಮಂಟಪೋತ್ಸವ, ಯಜುರ್ವೇದ ನಿತ್ಯ ನೂತನ ಉಪಕರ್ಮ, ಆಗಸ್ಟ್ 31 ರಂದು ಪೂರ್ವಾ ಆರಾಧನಾ ರಜತ ಸಿಂಹ ವನೋತ್ಸವ, ಸೆಪ್ಟೆಂಬರ್ 1 ರಂದು ಮಧ್ಯಾರಾಧನಾ ಮಹಾ ಪಂಚಾಮೃತ ಅಭಿಷೇಕ ಗಜರಾಜತ ಸ್ವರ್ಣ ರಥೋತ್ಸವ, ಸೆಪ್ಟೆಂಬರ್ 2 ರಂದು ಉತ್ತರ ಆರಾಧನಾ ಪ್ರಾತಃ ಮಹಾರಥೋತ್ಸವ ಕಾರ್ಯಕ್ರಮ, ಸೆಪ್ಟೆಂಬರ್ 2ರಂದು ಶ್ರೀ ಸುಜ್ಞಾನೇಂದ್ರ ತೀರ್ಥ ಆರಾಧಾನ ಮಹೋತ್ಸವ, ಅಶ್ವ ವನೋತ್ಸವ ಹಾಗೂ 4ರಂದು ಸರ್ವ ಸಮಾರೋಪನೋತ್ಸವ ಕಾರ್ಯಕ್ರಮ ನಡೆಯಲಿದೆ.