ನವರಾತ್ರಿ ಅಂದ್ರೆ ಉತ್ತರ ಭಾರತದಲ್ಲಿ (North India) ದುರ್ಗೆಯ ಆರಾಧನೆ ವೈಭವದಿಂದ ನಡೆಯುತ್ತದೆ. ಅದರಲ್ಲೂ ಪಶ್ಚಿಮ ಬಂಗಾಳದಾದ್ಯಂತ (Weather Bengal) ದೇವಿಯ ಪೂಜೆ ಭಾರೀ ಜೋರು. ಹೀಗೆ ಕೋಲ್ಕತ್ತಾದಲ್ಲಿ ಮೂವರು ಮಾಡೆಲ್‌ಗಳು (Models) ದೇವಿ ದರ್ಶನ ಪಡೆದ ರೀತಿ ವಿವಾದಕ್ಕೆ ಕಾರಣವಾಗಿದೆ.
ಎಲ್ಲಿಗೆ ಯಾವ ರೀತಿ ಬಟ್ಟೆ ಹಾಕಬೇಕು ಎಂಬ ಸಾಮಾನ್ಯ ಜ್ಞಾನ ಎಂಥವರಿಗೂ ಇರುತ್ತದೆ. ಆದ್ರೆ ಈ ಮೂವರು ಮಾಡೆಲ್ ಗಳು ದೇವಿ ದರ್ಶನಕ್ಕೆ ಬಂದ ರೀತಿ ಭಕ್ತರನ್ನು ಕೆರಳಿಸಿದೆ. ಈ ಮಾಡೆಲ್ ಗಳು ಅಸಭ್ಯವಾದ ತುಂಡು ಉಡುಗೆಯಲ್ಲಿ ದುರ್ಗಾದೇವಿಯ ದರ್ಶನ ಪಡೆದಿದ್ದಾರೆ.
ಈ ರೀತಿ ಅಸಹ್ಯಕರ ಉಡುಪು ಧರಿಸಿ ಬಂದಿದ್ದನ್ನು ಕಂಡ ಭಕ್ತರು ಈ ಮಾಡೆಲ್ ಗಳ ವಿರುದ್ಧ ಕಿಡಿ ಕಾರಿದ್ದಾರೆ. ಕೋಲ್ಕತ್ತಾ ಮಾಡೆಲ್ ಗಳಾದ ಹೆಮೋ ಶ್ರೀ ಭದ್ರ ಹಾಗೂ ಇತರ ಇಬ್ಬರು ಮಾಡೆಲ್‌ಗಳು ಈ ರೀತಿ ದುರ್ಗಾ ದೇವಿಯನ್ನು ತುಂಡು ಉಡುಗೆಯಲ್ಲಿ ದರ್ಶನ ಮಾಡಿದ್ದರು.
ಈ ಫೋಟೋಗಳನ್ನು ಸ್ವತಃ ಮಾಡೆಲ್ ಗಳು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಂಡಿದ್ದರು.ಈ ಪೋಸ್ಟ್ ಕಂಡ ಕಂಡ ಭಕ್ತರು, ‘ಒಂದಿಷ್ಟು ಜ್ಞಾನ ಇಟ್ಟುಕೊಳ್ಳಬೇಕು’ ಎಂದು ಮಾಡೆಲ್ ಗಳಿಗೆ ಕ್ಲಾಸ್ ತಗೊಂಡಿದ್ದಾರೆ.