ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಂಗವಾಗಿ ದಾವಣಗೆರೆಯಲ್ಲಿ ಆಗಸ್ಟ್ 3ರಂದು ಆಯೋಜಿಸುತ್ತಿರುವ ಅಮೃತ ಮಹೋತ್ಸವ ಕಾರ್ಯಕ್ರಮಕ್ಕಾಗಿ 3 ಕಿ.ಮೀ. ಉದ್ದದ ಬ್ಯಾನರ್ ಸಿದ್ಧಗೊಳ್ಳುತ್ತಿದೆ.
ಸಿದ್ದರಾಮಯ್ಯ 75ನೇ ವರ್ಷದ ಅಮೃತ ಮಹೋತ್ಸವದ ಬ್ಯಾನರ್ ಗುಜರಾತ್ ನ ಸೂರತ್ ನಲ್ಲಿ ಸಿದ್ಧಗೊಳ್ಳುತ್ತಿದ್ದು, ನಾಳೆ ಈ ಬ್ಯಾನರ್ ದಾವಣಗೆರೆ ತಲುಪಲಿದ್ದು, 3 ಕಿ.ಮೀ. ಉದ್ದದ ಬ್ಯಾನರ್ ಆಗಿದ್ದು, ಬೆಂಗಳೂರು- ಪುಣೆ ಹೆದ್ದಾರಿಯಲ್ಲಿ ಹಾಕಲಾಗುತ್ತದೆ.

ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕಾಗಿ ದಾವಣಗೆರೆಯಲ್ಲಿ 50 ಎಕರೆ ಪ್ರದೇಶದಲ್ಲಿ ವೇದಿಕೆ ಸಜ್ಜುಗೊಳ್ಳುತ್ತಿದ್ದು, 6 ಲಕ್ಷ ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ 150 ಭೋಜನ ಕೌಂಟರ್ ಗಳನ್ನು ತೆರೆಯಲಾಗುತ್ತಿದೆ.
ವಿವಿಧೆಡೆಯಿಂದ ಬರುತ್ತಿರುವ ಗಣ್ಯರು, ಅತೀ ಗಣ್ಯರ 50ರಿಂದ 500 ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಇದೇ ವೇಳೆ ವೇದಿಕೆಯ ಮೇಲೆ ಸಿದ್ದರಾಮಯ್ಯ ಅವರ ಜೀವನ ಆಧರಿಸಿದ ಸುಮಾರು 500 ಫೋಟೊಗಳ ಪ್ರದರ್ಶನ ಏರ್ಪಡಿಸಲಾಗುತ್ತಿದ್ದು, ಇದಕ್ಕಾಗಿ 10 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ.











