ಕರೋನಾ ಸಾಂಕ್ರಾಮಿಕ ರೋಗ ಹಿನ್ನಲೆ ಮುಚ್ಚಲಾದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪೂರ್ಣಾವಧಿ ತರಗತಿಗಳು ಆರಂಭಗೊಂಡಿವೆ. ಫೆಬ್ರವರಿ 1 ರಿಂದ 9 ನೇ ತರಗತಿ ಮತ್ತು ಪ್ರಥಮ ಪಿಯುಸಿ ಪೂರ್ಣಾವಧಿ ತರಗತಿಗಳು ಆರಂಭಗೊಳ್ಳುತ್ತವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಧ್ಯಮ ಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದರು. ಇದೀಗ ವಿದ್ಯಾರ್ಥಿಗಳ ಬಸ್ಪಾಸ್ ವಿಚಾರಕ್ಕೆ ಸಂಬಂಧಿಸಿದಂತಹ ಮಾಹಿತಿಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2019-20 ನೇ ಸಾಲಿನಲ್ಲಿ ವಿತರಣೆ ಮಾಡಿರುವ ಸ್ಮಾರ್ಟ್ ಕಾರ್ಡ್ ವಿದ್ಯಾರ್ಥಿ ಪಾಸು ಅಥವಾ ಪ್ರಸ್ತುತ ಸಾಲಿನ ಶಾಲಾ/ಕಾಲೇಜಿಗೆ ದಾಖಲಾಗಿರುವ ಶುಲ್ಕ ರಸೀದಿ ಅಥವಾ ಗುರುತಿನ ಚೀಟಿಯೊಂದಿಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತಿಳಿಸಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
2020-21ನೇ ಸಾಲಿನ ವಿದ್ಯಾರ್ಥಿ ಪಾಸಿಗಾಗಿ ವಿದ್ಯಾರ್ಥಿ ಪಾಸಿಗಾಗಿ ಇಲ್ಲಿಯವರೆಗೂ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು, ದಿನಾಂಕ 28.02.2021 ರೊಳಗಾಗಿ ಪಾಸು ಪಡೆಯುವಂತೆ ಸಂಸ್ಥೆ ತಿಳಿಸಿದೆ
ಶಿಕ್ಷಣ ಸಂಸ್ಥೆಗಳು ಸಂಸ್ಥೆಯ ವೆಬ್ಸೈಟ್ (www.mybmtc.karnataka.nic.in) ಮೂಲಕ ನೋಂದಣಿಯಾಗದೇ ಇದ್ದಲ್ಲಿ, ನೋಂದಣಿ ಮಾಡಿಕೊಳ್ಳುವಂತೆ ಸಂಸ್ಥೆ ತಿಳಿಸಿದೆ.
ಈಗಾಗಲೇ ವಿದ್ಯಾರ್ಥಿ ಪಾಸಿಗಾಗಿ, ಅರ್ಜಿ ಸಲ್ಲಿಸಿ ಪಾಸು ಪಡೆಯದೇ ಇರುವ ವಿದ್ಯಾರ್ಥಿಗಳು ಪಾಸು ಪಡೆಯುವ ಸ್ಥಳ(ಬೆಂಗಳೂರು ಒನ್ ಕೇಂದ್ರ), ದಿನಾಂಕ ಮತ್ತು ವೇಳೆಯನ್ನು ನಿಗದಿಪಡಿಸಿಕೊಂಡು ಪಾಸು ಪಡೆಯಲು ಕೋರಿದೆ.
ವಿದ್ಯಾರ್ಥಿ ಪಾಸಿಗಾಗಿ ಇಲ್ಲಿಯವರೆಗೂ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು, ಫೆಬ್ರವರಿ ೨೮ ರೊಳಗಾಗಿ ಪಾಸು ಪಡೆಯುವಂತೆ ಸಂಸ್ಥೆ ತಿಳಿಸಿದೆ.