ರಾಜ್ಯಾದಲ್ಲಿ ಬಿಪಿಎಲ್ ಕಾರ್ಡ್ (BPL card) ಗಳನ್ನು ರದ್ದುಗೊಳಿಸುವ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಈ ಬೆನ್ನಲ್ಲೆ ತುಮಕೂರಿನಲ್ಲಿ (Tumkur) ಸರ್ಕಾರದ ಮಾನದಂಡಗಳ ಪ್ರಕಾರ 24 ಸಾವಿರ ಕಾರ್ಡ್‌ಗಳು ರದ್ದಾಗಲಿವೆ ಎಂದು ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ (Shuba kalyan) ಮಾಹಿತಿ ನೀಡಿದ್ದಾರೆ.
ಸರ್ಕಾರಿ ನೌಕರರಾಗಿದ್ರೆ, ವಾರ್ಷಿಕ ಆದಾಯ ಸುಮಾರು 1.2 ಲಕ್ಷಕ್ಕಿಂತ ಹೆಚ್ಚಿದ್ರೆ, ಇನ್ನು ಆದಾಯ ತೆರಿಗೆ ಪಾವತಿ ಮಾಡುತ್ತಿರುವವರು ಯಾರಿದ್ದಾರೆ, ಅಂತಹ 24 ಸಾವಿರ ಜನರನ್ನ ಆಯ್ಕೆ ಮಾಡಿದ್ದೇವೆ. ಇಂಥವರ ಕಾರ್ಡ್ ಗಳು ರದ್ದಾಗಲಿದೆ, ಉಳಿದಂತೆ ಜನರಲ್ಲಿ ಆತಂಕ ಬೇಡ ಎಂದಿದ್ದಾರೆ.

ಯಾವೆಲ್ಲ ಕುಟುಂಬಗಳು ಅರ್ಹರಿದ್ದಾರೆ ಅಂಥವರಿಗೆ ಯಾವುದೇ ತೊಂದರೆ ಆಗಲ್ಲ, ನಿಜವಾದ ಫಲಾನುಭವಿಗಳು ಹೆಸರು ತೆಗೆಯುವುದಿಲ್ಲ. ಹಾಗೇನಾದ್ರೂ ತಪ್ಪುಗಳಾಗಿದ್ರೆ ಮನವಿ ಕೊಡಿ,ತಕ್ಷಣ ಚೆಕ್ ಮಾಡಿ ಪುನಃ ಸರಿ ಪಡಿಸ್ತೀವಿ ಎಂದು ಭರವಸೆ ನೀಡಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ 19 ಸಾವಿರ ಜನರ ಆದಾಯ 1.2 ಲಕ್ಷಕ್ಕಿಂತ ಹೆಚ್ಚಿದೆ. ಇನ್ನು 4ಸಾವಿರ ಜನ ತೆರಿಗೆದಾರರಿದ್ದಾರೆ. ಇದರ ಜೊತೆಗೆ 300 ಜನ ಗೌರ್ನಮೆಂಟ್ ನೌಕರರ ಬಳಿ ಬಿಎಲ್ ಕಾರ್ಡ್ ಇದೆ ಎಂಬ ಮಾಹಿತಿಯಿದೆ ಎಂದು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಸ್ಪಷ್ಟನೇ ನೀಡಿದ್ದಾರೆ.