Day: October 21, 2021

ಭಾರತ ಸರ್ಕಾರದ ಮೇಲೆ ಭರವಸೆಯಿಲ್ಲ- ಬಾಂಗ್ಲಾ ಹಿಂದೂಗಳ ಆಕ್ರೋಶ

ಭಾರತ ಸರ್ಕಾರದ ಮೇಲೆ ಭರವಸೆಯಿಲ್ಲ- ಬಾಂಗ್ಲಾ ಹಿಂದೂಗಳ ಆಕ್ರೋಶ

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ಹಾಗೂ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸೆಗೆ ಭಾರತ ಸರ್ಕಾರ ನೀಡಿರುವ ಪ್ರತಿಕ್ರಿಯೆ ಕುರಿತು ಅಲ್ಲಿನ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಬಾಂಗ್ಲಾದಲ್ಲಿ ಹಿಂದೂಗಳಿಗೆ ರಕ್ಷಣೆ ಸಿಗುತ್ತಿಲ್ಲವಾದರೂ, ಬಿಜೆಪಿ ಕಾಟಾಚಾರಕ್ಕೆ ಮಾತ್ರ ತನ್ನ ಸಹಾನುಭೂತಿ ತೋರುತ್ತಿದೆ. ಬಾಂಗ್ಲಾದೇಶ ಸರ್ಕಾರದ ಮೇಲೆ ಒತ್ತಡ ಹೇರುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಬಾಂಗ್ಲಾದೇಶ್ ಜಯಿತೊ ಹಿಂದೂ ಮೊಹಾಜೊತೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೋಬಿಂದ ಚಂದ್ರ ಪ್ರಮಾಣಿಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ದುರ್ಗಾ ಪೂಜೆಯ ಪೆಂಡಾಲ್’ಗಳಲ್ಲಿ ಕುರಾನ್’ಗೆ ಅಪಚಾರವೆಸಗಲಾಗಿದೆ ಎಂಬ ಆರೋಪದಡಿ ಅಕ್ಟೋಬರ್ 13ರ ನಂತರ ಹಲವು ಕಡೆಗಳಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಲಾಗಿತ್ತು. ಸುಮಾರು ಆರು ದಿನಗಳ ಕಾಲ ನಿರಂತರವಾಗಿ ಹಲವೆಡೆ ಈ ದಾಳಿಗಳು ನಡೆದಿದ್ದವು. ಈ ದಾಳಿಗಳನ್ನು ಖಂಡಿಸಿ ಬಾಂಗ್ಲಾದೇಶದ ಹಲವು ಪ್ರಗತಿಪರ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು.  ಭಾರತದಲ್ಲಿಯೂ ಹಿಂದೂಪರ ಸಂಘಟನೆಗಳು ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದವು. ಭಜರಂಗದಳ, ವಿಶ್ವ ಹಿಂದೂ ಪರಿಷತ್, ಆರ್‌ಎಸ್ಎಸ್, ಹಿಂದೂ ಮಹಾಸಭಾ ಸೇರಿದಂತೆ ಹಲವು ಸಂಘಟನೆಗಳು ತೀವ್ರವಾಗಿ ಈ ದಾಳಿಗಳನ್ನು ಖಂಡಿಸಿದ್ದವು. ಆದರೆ, ಸರ್ಕಾರದ ಮಟ್ಟದಲ್ಲಿ ಯಾವ ರೀತಿ ಬಾಂಗ್ಲಾದೇಶದ ಮೇಲೆ ಒತ್ತಡ ಹೇರಲಾಗಿದೆ ಎಂದು ಗಮನಿಸಿದರೆ, ನಿರಾಶದಾಯಕ ಉತ್ತರ ಸಿಕ್ಕಿದೆ, ಎಂದು ಬಾಂಗ್ಲಾದೇಶದ ಹಿಂದೂ ಸಂಘಟನೆಗಳು ಆರೋಪಿಸಿವೆ.  ಈ ಕುರಿತಾಗಿ ‘ದಿ ವೈರ್’ಗೆ ಸಂದರ್ಶನ ನೀಡಿರುವ ಗೋಬಿಂದ ಚಂದ್ರ ಪ್ರಮಾಣಿಕ್, ಕಳೆದ ಹಲವು ವರ್ಷಗಳಲ್ಲಿ ಬಾಂಗ್ಲಾದೇಶದ ಹಿಂದೂಗಳ ಮೇಲೆ ನಡೆದಿರುವ ದಾಳಿಗಳಲ್ಲಿ ಆಡಳಿತರೂಢ ಅವಾಮಿ ಲೀಗ್ ನಾಯಕರ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಸರ್ಕಾರವು ಕೋಮುವಾದಿ ಶಕ್ತಿಗಳ ಬೆಂಬಲಕ್ಕೆ ನಿಂತಿರುವುದು ಈ ಹಿಂದೆಯೂ ಸಾಬೀತಾಗಿದೆ. ಹಾಗಾಗಿ ಇಲ್ಲಿ ಪದೇ ಪದೇ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಲೇ ಇವೆ, ಎಂದಿದ್ದಾರೆ.  “ಹಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿ, ಆರೋಪಿಗಳನ್ನು ಬಂಧಿಸಿದ್ದರೂ ಇಲ್ಲಿನ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯಾಗಿಲ್ಲ. ಅಕ್ಟೋಬರ್ 18-19ರಂದು ಕೂಡಾ ಹಿಂದೂಗಳ ಮೇಲೆ ದಾಳಿ ನಡೆಸಲಾಗಿದೆ. ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿಗೆ ಪ್ರತಿಯಾಗಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಸಿರುವ ಸಾಧ್ಯತೆಗಳಿವೆ ಎಂದು ಈಗಾಗಲೇ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಆದರೆ, ಇದು ಸ್ವೀಕಾರಾರ್ಹವಾದ ಉತ್ತರವಲ್ಲ,” ಎಂದು ಅವರು ಹೇಳಿದ್ದಾರೆ.  ಮುಂದುವರೆದು, ಬಹುತೇಕ ಅವಾಮಿ ಲೀಗ್ ನಾಯಕರು ಬಿಜೆಪಿ, ಆರ್‌ಎಸ್ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ತನ್ನು ಭಯೋತ್ಪಾದಕ ಸಂಘಟನೆಗಳಂತೆ ಗುರುತಿಸುವ ಕಾರಣದಿಂದ, ಇಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಬಿಜೆಪಿಯನ್ನು ಇಷ್ಟಪಡದ ನಾಯಕರು ಸರ್ಕಾರದಲ್ಲಿ ಹೆಚ್ಚಾಗಿರುವುದರಿಂದ ಭಾರತ ಸರ್ಕಾರದ ಮಾತುಗಳಿಗೆ ಇಲ್ಲಿ ಬೆಲೆಯಿಲ್ಲದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಆರ್‌ಎಸ್ಎಸ್ ಹಾಗು ವಿ ಹೆಚ್ ಪಿ ಕುರಿತಾಗಿ ಅವಾಮಿ ಲೀಗ್ ನಾಯಕರು ಬೃಹತ್ ಅಭಿಯಾನವನ್ನೇ ಆರಂಭಿಸಿರುವ ಕಾರಣ ಇಲ್ಲಿ ಹಿಂದೂಗಳ ವಿರುದ್ದ ಅಸಹನೆ ಹೆಚ್ಚಾಗಿದೆ, ಎಂದು ಗೋಬಿಂದ್ ಹೇಳಿದ್ದಾರೆ.  “ಬಾಂಗ್ಲಾದೇಶದ ಹಿಂದೂಗಳು ಭಾರತ ಸರ್ಕಾರದ ನಡವಳಿಕೆಯ ವಿರುದ್ದ ತೀವ್ರವಾದ ಆಕ್ರೋಶವನ್ನು ಹೊಂದಿದ್ದಾರೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ನೇರವಾಗಿ ಎಚ್ಚರಿಕೆ ನೀಡುವ ಮಟ್ಟಿಗೆ ತಲುಪಿದ್ದರೂ, ಭಾರತ ಸರ್ಕಾರ ಇಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನು ಕನಿಷ್ಟ ಖಂಡಿಸುವ ಹೇಳಿಕೆಯನ್ನೂ ನೀಡಿಲ್ಲ. ಬಾಂಗ್ಲಾ ಸರ್ಕಾರಕ್ಕೆ ಎಚ್ಚರಿಕೆಯನ್ನೂ ರವಾನಿಸಿಲ್ಲ. ಬದಲಾಗಿ, ಹಿಂದೂಗಳ ಮೇಲಿನ ದಾಳಿಗೆ ಕ್ರಮ ಕೈಗೊಂಡ ಶೇಖ್ ಹಸೀನಾ ಅವರಿಗೆ ಭಾರತದ ವಿದೇಶಾಂಗ ಇಲಾಖೆ ಅಭಿನಂದನೆ ತಿಳಿಸಿದೆ. ವಿಶ್ವ ಸಂಸ್ಥೆ ಹಾಗೂ ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ಈ ದಾಳಿಯನ್ನು ತೀವ್ರವಾಗಿ ಖಂಡಿಸಿವೆ. ಇಂತಹ ಸಂದರ್ಭದಲ್ಲಿ ಭಾರತ ಸರ್ಕಾರದ ಮೌನ ನಿಜಕ್ಕೂ ಬೇಸರ ಮೂಡಿಸಿದೆ,” ಎಂದು ಗೋಬಿಂದ್ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.  ಇನ್ನು ಭಾರತೀಯ ಮೂಲದ ಹಿಂದೂ ಸಂಸ್ಥೆಗಳ ಬಳಿ ಮನವಿ ಮಾಡಿದರೂ, ಅವರ ನೆರವು ದಕ್ಕದೇ ಇರುವುದು ಮತ್ತಷ್ಟು ನೋವಿಗೆ ಕಾರಣವಾಗಿದೆ ಎಂದು ಹೇಳಿರುವ ಗೋಬಿಂದ್ ಪ್ರಮಾಣಿಕ್, ಬಿಜೆಪಿ, ಆರ್ಎಸ್ಎಸ್ ಹಾಗೂ ವಿ ಹೆಚ್ ಪಿ ಸಂಸ್ಥೆಯೊಂದಿಗೆ ನಿರಂತರವಾಗಿ ನಾವು ಸಂಪರ್ಕದಲ್ಲಿ ಇದ್ದೇವೆ. ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹೇರಲು ಅವರಲ್ಲಿ ವಿನಂತಿಸಿಕೊಂಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ದಿವಂಗತ ಸುಷ್ಮಾ ಸ್ವರಾಜ್, ಆರ್ಎಸ್ಎಸ್’ನ ಹಿರಿಯ ನಾಯಕ ರಾಮ್ ಮಾಧವ್ ಅವರು ನಮ್ಮ ಕುರಿತಾಗಿ ಅಪಾರ ಸಹಾನುಭೂತಿ ಹೊಂದಿದ್ದರು. ಇತರರು ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ನಮಗೆ ಅರ್ಥವಾಗದ ಯಾವುದೋ ಕಾರಣಕ್ಕಾಗಿ ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹೇರಲು ಹಿಂಜರಿಯುತ್ತಿದ್ದಾರೆ, ಎಂದು ಹೇಳಿದ್ದಾರೆ.  ಪಶ್ಚಿಮ ಬಂಗಾಳದ ನಾಯಕರಾದ ದಿಲೀಪ್ ಘೋಷ್ ಹಾಗೂ ಸುವೆಂದು ಅಧಿಕಾರಿ ಅಲ್ಪ ಮಟ್ಟಿನ ಬೆಂಬಲವನ್ನು ನಮಗೆ ನಿಡಿದ್ದು ಖುಶಿ ತಂದಿದೆ. ಆದರೆ, ಭಾರತ ಸರ್ಕಾರದ ಮೇಲೆ ನಮಗೆ ಎಳ್ಳಷ್ಟೂ ಭರವಸೆ ಉಳಿದಿಲ್ಲ, ಎಂದು ಗೋಬಿಂದ್ ಅವರು ಹೇಳಿರುವುದು ಆರ್ಎಸ್ಎಸ್ ಹಾಗೂ ಬಿಜೆಪಿಯ ಹಿಂದೂ ಪ್ರೇಮಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ. 

ತಾಲಿಬಾನ್ ಬೆಂಬಲಿಸುವುದು ದೇಶದ್ರೋಹಕ್ಕೆ ಸಮ: ಯೋಗಿ ಆದಿತ್ಯನಾಥ್

ಉ.ಪ್ರ ಚುನಾವಣೆ ಗೆಲ್ಲಲು ಯೋಗಿ ಆದಿತ್ಯನಾಥ್ ಸರ್ಕಸ್; ಏರ್ಪೋರ್ಟ್ ಕಟ್ಟಿಸಿ ಅಭಿವೃದ್ದಿ ಮಾಡಿದ್ದೇವೆ ಎಂದು ಜಪ

2022ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಹೀಗಿರುವಾಗಲೇ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ವಿರುದ್ಧ ಬ್ರಾಹ್ಮಣರು ಸೇರಿದಂತೆ ಎಲ್ಲಾ ಸಮುದಾಯದವರು ಅಸಮಾಧಾನಗೊಂಡಿದ್ದಾರೆ. ...

ಭಾವನೆಗಳ ವಾರಸುದಾರರೂ ಧಕ್ಕೆಗೊಳಗಾದ ವಿವೇಚನೆಯೂ

ಭಾವನೆಗಳ ವಾರಸುದಾರರೂ ಧಕ್ಕೆಗೊಳಗಾದ ವಿವೇಚನೆಯೂ

ಇತ್ತೀಚೆಗೆ ಕರ್ನಾಟಕದ ಕರಾವಳಿ ಮತ್ತಿತರ ಜಿಲ್ಲೆಗಳಲ್ಲಿ ನಡೆಯುತ್ತಿರುವ ಮತಾಂಧರ ಧಾಳಿಯನ್ನು ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ಸಮಾಜದಲ್ಲಿ ಹಲವಾರು ಭಾವನೆಗಳ ಜನರಿದ್ದಾರೆ. ಈ ಭಾವನೆಗಳಿಗೆ ಧಕ್ಕೆ ಆಗದ ...

ಮೈಸೂರಿನ ಅತ್ಯಾಚಾರ ತನಿಖೆ ಸಂಪೂರ್ಣವಾಗಿ ಹಾದಿ ತಪ್ಪಿದೆ: ಸದನದಲ್ಲಿ ಸಿದ್ದರಾಮಯ್ಯ ಕಿಡಿ

ಪ್ರತಿಭಟಿಸುವ ಹಕ್ಕು ರೈತರಿಗಿದೆ, ಆದರೆ ರಸ್ತೆ ತಡೆಯುವ ಹಕ್ಕಿಲ್ಲ: ಸುಪ್ರೀಂ

ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ ಅನಿರ್ದಿಷ್ಟಾವಧಿಗೆ ರಸ್ತೆಗಳನ್ನು ತಡೆಯುವ ಹಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.  ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ರೈತ ...

Page 1 of 2 1 2