ವೃತ್ತಿಪರ ಕೋರ್ಸ್ ಗಳ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. 2,10,829 ವಿಧ್ಯಾರ್ಥಿಗಳ ರ್ಯಾಂಕಿಂಗ್ ಹೊರಬಿದ್ದಿದ್ದು ಇತಿಹಾಸದಲ್ಲೇ ಮೊದಲ ಭಾರಿಗೆ ಹುಡುಗರು ಈ ಭಾರಿ ಮೇಲುಗೈ ಸಾಧಿಸಿದ್ದಾರೆ. ಎಲ್ಲಾ ವಿಭಾಗಗಳ ಟಾಪ್ 10 ಪಟ್ಟಿಯಲ್ಲಿ CBSE ವಿಧ್ಯಾರ್ಥಿಗಳೇ ಪಾರುಪತ್ಯ ಸಾಧಿಸಿದ್ದಾರೆ.
ಎಲ್ಲಾ ವಿಭಾಗಗಳ ಟಾಪ್ 10 ನಲ್ಲಿ CBSE ವಿಧ್ಯಾರ್ಥಿಗಳದ್ದೇ ಪಾರುಪತ್ಯ!
PSI ಹಾಗೂ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಗಳ ಅಕ್ರಮದಿಂದ ಎಚ್ಚೆತ್ತು ಕೆಇಎ ಬೊರ್ಡ್ ಫುಲ್ ಅಲರ್ಟ್ ಆಗಿ, ಟೈಟ್ ಸೆಕ್ಯುರಿಟಿ ನಡುವೆ 2021- 22ನೇ ಸಾಲಿನ CET ಪರೀಕ್ಷೆ ನಡೆಸಿತ್ತು. ಬಹುನಿರೀಕ್ಷಿತ ಈ ವರ್ಷದ ರಿಸಲ್ಟ್ ಹೊರಬಿದ್ದಿದ್ದು KEA ಬೋರ್ಡ್ ನಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಫಲಿತಾಂಶ ಪ್ರಕಟಿಸಿದರು. ರಾಜ್ಯದ 486 ಕೇಂದ್ರಗಳಲ್ಲಿ ನಡೆದ ಎಕ್ಸಾಂನಲ್ಲಿ ನೋಂದಾಯಿಸಿಕೊಂಡಿದ್ದ 2,16,559 ವಿಧ್ಯಾರ್ಥಿಗಳ ಪೈಕಿ 2,10,829 ಮಂದಿ ಎಕ್ಸಾಂಗೆ ಹಾಜರಾಗಿದ್ರು. ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ರ್ಯಾಂಕಿಂಗ್ ಘೋಷಣೆಯಾಗಿದೆ. ಈ ಪೈಕಿ 1,01,990 ಹುಡುಗರು, 1,08,839 ವಿದ್ಯಾರ್ಥಿನಿಯರ ರಿಸಲ್ಟ್ ಬಂದಿದೆ. ಇನ್ನು ಎಲ್ಲಾ ವಿಭಾಗಗಳ ಟಾಪರ್ಸ್ ಟಾಪ್ 10 ನಲ್ಲಿ CBSE ವಿಧ್ಯಾರ್ಥಿಗಳೇ ಪಾರುಪತ್ಯ ಸಾಧಿಸಿದ್ದಾರೆ.
ಇನ್ನು ವಿಭಾಗಾವಾರು ಎಷ್ಟು ರ್ಯಾಂಕ್ ಕೊಡಲಾಗಿದೆ ಅನ್ನೋ ಲಿಸ್ಟ್ ನೋಡೋದಾದ್ರೆ…
ವಿಭಾಗ ರ್ಯಾಂಕ್ ಪಡೆದವರ ಸಂಖ್ಯೆ
ಯೋಗ & ನ್ಯಾಚುರೋಪತಿ 1,42,750
ಇಂಜಿನಿಯರಿಂಗ್ 1,71,656
BSC ಕೃಷಿ ವಿಭಾಗ 1,39,968
ಪಶುಸಂಗೋಪನೆ 1,42,820
B&D ಫಾರ್ಮ 1,74,568
ವಿಭಾಗಾವಾರು ಟಾಫ್ 3 ರ್ಯಾಂಕ್ ಪಡೆದವರ ಲಿಸ್ಟ್ ನೋಡೋದಾದ್ರೆ…
ಯೋಗ & ನ್ಯಾಚುರೋಪತಿ ವಿಭಾಗ ಟಾಫರ್ಸ್
1st ರ್ಯಾಂಕ್- ಹೃಷಿಕೇಶ್ ನಾಗಭೂಷಣ್, ಬೆಂಗಳೂರು
2nd ರ್ಯಾಂಕ್- ರಾಜೇಶ್ ವೀಣಧರ್, ಉಡುಪಿ
3rd ರ್ಯಾಂಕ್- ಕೃಷ್ಣ SR, ಬೆಂಗಳೂರು
ಇಂಜಿನಿಯರಿಂಗ್ ವಿಭಾಗದ ಟಾಫರ್ಸ್
1st ರ್ಯಾಂಕ್- ಅಪೂರ್ವ ಟಂಡನ್, ಬೆಂಗಳೂರು
2nd ರ್ಯಾಂಕ್- ಸಿದ್ದಾರ್ಥ ಸಿಂಗ್, ಬೆಂಗಳೂರು
3rd ರ್ಯಾಂಕ್- ಆತ್ಮಕುರಿ ವೆಂಕಟ ಮಾಧವ್, ಬೆಂಗಳೂರು
BSC ಕೃಷಿ ವಿಭಾಗದ ಟಾಫರ್ಸ್
1st ರ್ಯಾಂಕ್- ಅರ್ಜುನ್ ರವಿಶಂಕರ್, ಬೆಂಗಳೂರು
2nd ರ್ಯಾಂಕ್- ಸುಮೀತ್ ಎಸ್ ಪಾಟೀಲ್, ಬೆಂಗಳೂರು
3rd ರ್ಯಾಂಕ್- ಸುದೀಪ್ YM, ತುಮಕೂರು
ಪಶುಸಂಗೋಪನೆ ವಿಭಾಗದ ಟಾಫರ್ಸ್
1st ರ್ಯಾಂಕ್- ಹೃಷಿಕೇಶ್ ನಾಗಭೂಷಣ್, ಬೆಂಗಳೂರು
2nd ರ್ಯಾಂಕ್- ಮನೀಷ್ SA, ಬೆಂಗಳೂರು
3rd ರ್ಯಾಂಕ್- ಶುಭ ಕೌಷಿಕ್, ಬೆಂಗಳೂರು
B&D ಫಾರ್ಮ ವಿಭಾಗದ ಟಾಫರ್ಸ್
1st ರ್ಯಾಂಕ್- ಶಿಶೀರ RK, ಬೆಂಗಳೂರು
2nd ರ್ಯಾಂಕ್- ಹೃಷಿಕೇಶ್ ನಾಗಭೂಷಣ್, ಬೆಂಗಳೂರು
3rd ರ್ಯಾಂಕ್- ಅಪೂರ್ವ ಟಂಡನ್, ಬೆಂಗಳೂರು
ಇನ್ನು ಈ ವರ್ಷದ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಆಗಸ್ಟ್ 5 ರಿಂದ ಆರಂಭವಾಗಲಿದ್ದು ಆನ್ ಲೈನ್ ಮೂಲಕ ಎಲ್ಲಾ ಪ್ರಕ್ರಿಯೆಗಳು ನಡೆಯಲಿವೆ. ಇನ್ನು ಆಯ್ಕೆಯ ಕೋರ್ಸ್ ಗಳ ಮಾಹಿತಿಯ ಸಹಾಯವಾಣಿಯನ್ನು ಅಪ್ ಗ್ರೇಡ್ ಮಾಡಲಾಗಿದ್ದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ರ್ಯಾಂಕ್ ಪಡೆದ ವಿಧ್ಯಾರ್ಥಿಗಳು ತಮ್ಮಿಷ್ಟದ ಕೋರ್ಸ್ ಗಳಿಗೆ ಸೇರಿ ತಮ್ಮ ಜೀವನವನ್ನು ರೂಪಿಸಿಕೊಳ್ಳಿ ಎಂಬುದೇ ನಮ್ಮ ಆಶಯ.