2020 ನೇ ವರ್ಷ ಮುಗಿಯುವ ಕೊನೆಯ ದಿನದಲ್ಲಿದ್ದೇವೆ. ಈ ವರ್ಷ ಕರೋನಾ ಸಾಂಕ್ರಾಮಿಕದ ನಡುವೆಯೂ ಭಾರತ ಹಲವು ರಾಜಕೀಯ ಬಿಕ್ಕಟ್ಟುಗಳಿಗೆ ಸಾಕ್ಷಿಯಾಯಿತು. ಭಾರತದ ರಾಜಕಾರಣದಲ್ಲಿ ನಡೆದ ಕೆಲವು ಪ್ರಮುಖ ಘಟನಾವಳಿಗಳ ಹಾಗೂ ಸ್ಥಿತ್ಯಂತರಗಳ ಕುರಿತು ಹಿನ್ನೋಟ ಬೀರುವ ಲೇಖನ ಇಲ್ಲಿದೆ…
ದೆಹಲಿ ಚುನಾವಣೆ: ಮತ್ತೆ ಅಧಿಕಾರ ಹಿಡಿದ ಆಮ್ ಆದ್ಮಿ ಪಾರ್ಟಿ
ಭಾರತ ಒಕ್ಕೂಟ ವ್ಯವಸ್ಥೆಯ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆ ಫೆಬ್ರವರಿ 8 ರಂದು ನಡೆಯಿತು. 70 ಕ್ಷೇತ್ರದ ದೆಹಲಿಯಲ್ಲಿ 62 ಕ್ಷೇತ್ರವನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಗೆದ್ದುಕೊಂಡು ಸರ್ಕಾರ ರಚಿಸಿತು.
Also Read: ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಗೆದ್ದಿದ್ದು ಯಾಕೆ?
Also Read: ದೆಹಲಿಯಲ್ಲಿ ಬಿಜೆಪಿ ಸೋಲಿಗೆ ಆಮ್ ಆದ್ಮಿಗಿಂತ ಕಾಂಗ್ರೆಸ್ ಕಾರಣ!
ಮಧ್ಯಪ್ರದೇಶ; ಕಮಲ್ ನಾಥ್ ಸರ್ಕಾರ ಪತನ
2018 ರ ವಿಧಾನಸಭೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್ ಎಸ್‌ಪಿ, ಬಿಎಸ್‌ಪಿ ಹಾಗೂ ನಾಲ್ವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಆಪರೇಶನ್ ಕಮಲ ಮೂಲಕ ಕಾಂಗ್ರೆಸ್ ನ ಶಾಸಕ ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ಬೆಂಬಲಿಗರನ್ನು ಬಿಜೆಪಿ ತನ್ನೆಡೆಗೆ ಸೆಳೆಯಿತು. ಬಹುಮತ ಸಾಬೀತುಪಡಿಸಲು ಸೋತ ಕಮಲ್ ನಾಥ್ ನೇತೃತ್ವದ ಸರ್ಕಾರ 2020 ರ ಮಾರ್ಚ್ ತಿಂಗಳಲ್ಲಿ ಉರುಳಿತು.
ಬಳಿಕ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾನ್ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಿತು. ಮಾರ್ಚ್ 23 ರಂದು ಶಿವರಾಜ್ ಸಿಂಗ್ ಚೌಹಾನ್ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
Also Read: ನಿರ್ಣಾಯಕ ಘಟ್ಟ ತಲುಪಿದ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು
Also Read: ಕರೋನಾ ಕತ್ತಲಲ್ಲಿ ಗದ್ದುಗೆ ಏರಿದ ಶಿವರಾಜ್ ಸಿಂಗ್ ಚೌಹಾಣ್
ಮಹಾರಾಷ್ಟ್ರ; ಉದ್ಧವ್ ಠಾಕ್ರೆ ಎದುರಿಸಿದ ಆತಂಕ
ಭಾರತದಲ್ಲಿ ಕರೋನಾ ಸೋಂಕಿನ ಆತಂಕ ತೀವ್ರಗೊಳ್ಳುತ್ತಿದ್ದ ಸಂಧರ್ಭದಲ್ಲಿಯೇ, ರಾಜಕಾರಣ ವಲಯದ ಬಿರುಸಿನ ಚಟುವಟಿಕೆಗಳಿಗೆ ಮಹಾರಾಷ್ಟ್ರ ಸಾಕ್ಷಿಯಾಯಿತು. ಒಂದು ಘಟ್ಟದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತನ್ನ ಮುಖ್ಯಮಂತ್ರಿ ಪಟ್ಟ ಕಳೆದುಕೊಳ್ಳುವಲ್ಲಿಗೆ ತಲುಪಿದ್ದರು. ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಲು ಸಿಎಂ ಠಾಕ್ರೆ ಬಯಸಿದ್ದರು, ಆದರೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯರಿ ಈ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದ ಕಾರಣ ಠಾಕ್ರೆ ಮುಖ್ಯಮಂತ್ರಿ ಪದವಿ ತೂಗುಗತ್ತಿಯ ಮೇಲೆ ನಿಂತಿತ್ತು. ಹಲವಾರು ರಾಜಕಿಯ ನಾಟಕೀಯ ಬೆಳವಣಿಗೆಗಳ ಬಳಿಕ ಕೊನೆಗೂ ಉದ್ಧವ್ ಠಾಕ್ರೆ ತನ್ನ ಸ್ಥಾನ ಉಳಿಸಿಕೊಂಡಿದ್ದರು.
Also Read: ಮಹಾರಾಷ್ಟ್ರ: ಉಧ್ಧವ್ ಠಾಕ್ರೆ ಮುಖ್ಯಮಂತ್ರಿ ಪದವಿ ತೂಗುಗತ್ತಿಯಲ್ಲಿ
Also Read: ಏಕಕಾಲಕ್ಕೆ ಮೂರು ರೀತಿಯ ದಾಳ ಉರುಳಿಸಿ ಕುರ್ಚಿ ಕಷ್ಟದಿಂದ ಪಾರಾದ ಉದ್ಧವ್ ಠಾಕ್ರೆ
ರಾಜಸ್ಥಾನ; ಸರ್ಕಾರ ಉರುಳುವ ಭಯ ಎದುರಿಸಿದ ಅಶೋಕ್ ಗೆಹ್ಲೋಟ್
ಕರೋನಾ ತನ್ನ ಹಾವಳಿಯನ್ನು ಮುಂದುವರೆಸಿದ್ದರೂ ಭಾರತದ ರಾಜಕೀಯ ರಂಗದಲ್ಲಿ ಹೆಚ್ಚಿನ ಗಾಂಭೀರ್ಯವನ್ನು ತರಲು ಕರೋನಾಗೆ ಸಾಧ್ಯವಾಗಿಲ್ಲ. ಭಾರತದ ವಿವಿಧ ರಾಜ್ಯದಲ್ಲಿ ಅಧಿಕಾರಕ್ಕಾಗಿ ಲಾಭಿ ಮುಂದುವರೆದೇ ಇತ್ತು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಸರ್ಕಾರ ರಚಿಸಿಕೊಂಡಿದ್ದ ಬಿಜೆಪಿ ರಾಜಸ್ಥಾನದಲ್ಲೂ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದರು.
ಅಶೋಕ್ ಗೆಹ್ಲೋಟ್‌ರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂದು ಪಟ್ಟು ಹಿಡಿದು ರಾಜಸ್ಥಾನದ 23 ಕಾಂಗ್ರೆಸ್ ಶಾಸಕರು ಸಚಿನ್ ಪೈಲಟ್ ನೇತೃತ್ವದಲ್ಲಿ ದೆಹಲಿ ತಲುಪಿದ್ದರು. ಇನ್ನೇನು ಸರ್ಕಾರ ಉರುಳೇ ಬಿಡುತ್ತೆ ಎನ್ನುವಾಗ ಕಾಂಗ್ರೆಸ್ ಬಿಕ್ಕಟ್ಟು ಶಮನಗೊಳಿಸಿ ಸರ್ಕಾರವನ್ನು ಉಳಿಸಿತು.
Also Read: ರಾಜಸ್ಥಾನ ರಾಜಕೀಯ ಹೈಡ್ರಾಮ: ಆಪ್ತ ಶಾಸಕರೊಂದಿಗೆ ದೆಹಲಿ ತಲುಪಿದ ಸಚಿನ್ ಪೈಲಟ್
Also Read: ರೋಚಕ ಘಟ್ಟ ತಲುಪಿದ ರಾಜಸ್ಥಾನ ರಾಜಕೀಯ ಬಿಕ್ಕಟ್ಟು; ಗೆಹ್ಲೋಟ್, ಪೈಲಟ್ ಇಬ್ಬರಿಗೂ ಇಕ್ಕಟ್ಟು
Also Read: ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಕೆಡವುವ ‘ಪೈಲೆಟ್ ಪ್ಲಾನ್’ ಫ್ಲಾಪ್, ಮುಂದಿನದು ಮತ್ತೂ ಅತಂತ್ರ!
Also Read: ಅರ್ಧ ವರ್ಷಕ್ಕೊಂದು ಆಪರೇಷನ್..! ರಾಜಸ್ಥಾನದಲ್ಲಿ ರಂಗೇರಿದ ಕಮಲ..
Also Read: ಸಚಿನ್ ಪೈಲಟ್ ಕಿತ್ತುಹಾಕಿದ ಕಾಂಗ್ರೆಸ್ ಪರ್ಯಾಯ ನಾಯಕನನ್ನು ಹುಟ್ಟುಹಾಕುವುದೇ?
ಬಿಹಾರ ಚುನಾವಣೆ; ಮತ್ತೆ ಗದ್ದುಗೆ ಏರಿದ ನಿತೀಶ್
ಮೂರು ಹಂತದಲ್ಲಿ ನಡೆದ ಬಹುನಿರೀಕ್ಷಿತ ಬಿಹಾರ ಚುನಾವಣೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಎರಡನೇ ಸ್ಥಾನಕ್ಕೆ ತೃಪ್ತಿಕೊಂಡ ಬಿಜೆಪಿ ತನಗಿಂತ ಕಡಿಮೆ ಸ್ಥಾನ ಪಡೆದ ನಿತೀಶ್ ಕುಮಾರ್‌ರನ್ನು ಮುಖ್ಯಮಂತ್ರಿಯನ್ನಾಗಿ ಸರ್ಕಾರ ರಚಿಸಿತು. ಸದ್ಯ, ನಿತೀಶ್ ಕುಮಾರ್ ಸರ್ಕಾರ ಅಭದ್ರತೆಯಲ್ಲಿದೆ.
ಚುನಾವಾಣಾ ಪೂರ್ವ ಸಮೀಕ್ಷೆಗಳು ಯುಪಿಎ ಬಹುಮತ ಪಡೆಯುತ್ತದೆ ಎಂದು ಹೇಳಿದ್ದರೂ ನಿರೀಕ್ಷೆಗೂ ಮೀರಿ ಎನ್‌ಡಿಎ ಬಹುಮತ ಸಾಧಿಸಿತು. ಅದಾಗ್ಯೂ ಆರ್‌ಜೆಡಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.
Also Read: ಬಿಹಾರದಲ್ಲಿ ಗರಿಗೆದರುವುದೆ ಹೊಸ ರಾಜಕೀಯ ಸಮೀಕರಣ?
Also Read: ಉಪಚುನಾವಣೆ: ಕಾಂಗ್ರೆಸ್ ʼಕೈʼ ಹಿಡಿಯುವುದೇ ಡಿಕೆಶಿ ಜಾತಿ ಲೆಕ್ಕಾಚಾರ?
ಬಹುನಿರೀಕ್ಷಿತ ಕರ್ನಾಟಕ ಉಪಚುನಾವಣೆ
ಕರ್ನಾಟಕದಲ್ಲಿ ಶಿರಾ ಹಾಗೂ ರಾಜರಾಜೇಶ್ವರಿ ನಗರದ ಉಪಚುನಾವಣೆ ತೀವ್ರ ರಂಗೇರಿತ್ತು. ಎರಡೂ ಕ್ಷೇತ್ರದಲ್ಲೂ ಮೂರು ಪಕ್ಷಗಳ ರಾಜಕೀಯ ಚಟುವಟಿಕೆ ಗರಿಗೆದರಿತ್ತು. ಬಿಜೆಪಿ-ಕಾಂಗ್ರೆಸ್ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾದ ಈ ಉಪಚುನಾವಣೆಗಳಲ್ಲಿ ಬಿಜೆಪಿ ಭಾರೀ ಅಂತರದಲ್ಲಿ ಗೆಲುವು ಸಾಧಿಸಿತು.
Also Read: ಉಪಚುನಾವಣೆ; ರಾಜ್ಯದಲ್ಲಿ ಕಾವೇರಿದ ರಾಜಕೀಯ ಚಟುವಟಿಕೆ
ತಮಿಳುನಾಡು: ಐಎಎಸ್ vs ಐಪಿಎಸ್
ಪಾರಂಪರಿಕ ದ್ರಾವಿಡ ರಾಜಕಾರಣಕ್ಕೆ ಭಿನ್ನವಾಗಿ ಮಾಜಿ ಅಧಿಕಾರಿಗಳಿಬ್ಬರು ರಾಷ್ಟ್ರೀಯ ಪಕ್ಷಗಳೆಡೆಗೆ ಸೇರಿಕೊಂಡರು. ಕರ್ನಾಟಕ ಐಪಿಎಸ್ ಕೇಡರ್ ಅಣ್ಣಾಮಲೈ ಬಿಜೆಪಿಗೆ ಸೇರಿಕೊಂಡರೆ, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರು.
Also Read: ತಮಿಳುನಾಡು ಚುನಾವಣೆ ಗೆಲ್ಲಲು ಕಾಂಗ್ರೆಸ್ ಭರ್ಜರಿ ತಯಾರಿ
Also Read: ತಮಿಳುನಾಡು ಚುನಾವಣೆ ಗೆಲ್ಲಲು ಬಿಜೆಪಿ ತಯಾರಿ; ಮಿಷನ್ ‘ಟಾರ್ಗೆಟ್ 200’
Also Read: ತಮಿಳುನಾಡು ಮೇಲೆ ಅಮಿತ್ ಶಾ ಹದ್ದಿನ ಕಣ್ಣು; ದ್ರಾವಿಡರ ನೆಲದಲ್ಲಿ ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ
ಜಮ್ಮು-ಕಾಶ್ಮೀರ: ಗುಪ್ಕಾರ್ ಡಿಕ್ಲರೇಷನ್
ಜಮ್ಮು ಕಾಶ್ಮೀರದಲ್ಲಿ ರಾಜಕಾರಣ ಈ ವರ್ಷ ಹಲವು ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದೆ. ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ನಾಯಕರು ಗೃಹ ಬಂಧನದಿಂದ ಹೊರಬಂದ ನಂತರ ಹೊಸ ರಾಜಕೀಯ ಬೆಳವಣಿಗೆಗಳಿಗೆ ಜಮ್ಮು ಕಾಶ್ಮೀರ ಸಾಕ್ಷಿಯಾಗಿತ್ತು. ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ನಾಯಕರಾದ ಫಾರುಕ್ ಅಬ್ದುಲ್ಲಾ, ಅವರ ಬದ್ದ ವೈರಿ ಮೆಹಬೂಬ ಮುಫ್ತಿ ಮತ್ತು ಸಜ್ಜದ್ ಲೋನ್ ಅವರು ಸಭೆ ಸೇರಿ ಮೈತ್ರಿಕೂಟವನ್ನು ರಚಿಸಿದ್ದಾರೆ. ಎಲ್ಲಾ ಘಟಾನುಘಟಿ ನಾಯಕರು ಸಭೆ ಸೇರಿ ತಮ್ಮ ಮೈತ್ರಿಯನ್ನು ಘೋಷಿಸಿದ್ದಾರೆ. ರದ್ದುಗೊಳಿಸಲಾಗಿರುವ ಸಂವಿಧಾನದ 370ನೇ ವಿಧಿಯನ್ನು ಪುನರ್‌ಸ್ಥಾಪಿಸುವ ಗುರಿಯನ್ನು ಹೊಂದಿರುವ ಈ ಮೈತ್ರಿಕೂಟದ ಹೆಸರು ʼಪೀಪಲ್ಸ್ ಅಲಾಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಷನ್ʼ.
Also Read: ಕಾಶ್ಮೀರದಲ್ಲಿ ಸದ್ದು ಮಾಡುತ್ತಿರುವ ʼಗುಪ್ಕಾರ್ ಡಿಕ್ಲರೇಷನ್ʼ: ಏನಿದರ ಮಹತ್ವ?