• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

20 ವರ್ಷ ನಕಲಿ ದಂತವೈದ್ಯನ ಆಟ: ಇದೀಗ ಬಂಧನ

ಪ್ರತಿಧ್ವನಿ by ಪ್ರತಿಧ್ವನಿ
March 26, 2026
in Top Story
0
20 ವರ್ಷ ನಕಲಿ ದಂತವೈದ್ಯನ ಆಟ: ಇದೀಗ ಬಂಧನ
Share on WhatsAppShare on FacebookShare on Telegram

ಹೈದರಾಬಾದ್:

ADVERTISEMENT

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಹಲ್ಲು ಕೀಳುವ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಾಸುವ ಮುನ್ನವೇ, ಹೈದರಾಬಾದ್ ನಲ್ಲಿ ನಕಲಿ ದಂತವೈದ್ಯನೊಬ್ಬ ಸಿಕ್ಕಿಬಿದ್ದಿರುವುದು ವೈದ್ಯಕೀಯ ಕ್ಷೇತ್ರದ ಮೇಲೆ ಮತ್ತೆ ಆತಂಕ ಹುಟ್ಟಿಸಿದೆ.ಉತ್ತರ ಪ್ರದೇಶ ಮೂಲದ ರಮೇಶ್ ಎಂಬ ವ್ಯಕ್ತಿ, 10ನೇ ತರಗತಿಯನ್ನು ಕೂಡ ಪೂರ್ಣಗೊಳಿಸದೆ, ಕಳೆದ 20 ವರ್ಷಗಳಿಂದ ನಕಲಿ ಪ್ರಮಾಣಪತ್ರಗಳ ಆಧಾರದಲ್ಲಿ ದಂತವೈದ್ಯನಂತೆ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.

Raghav Chadha : ಭಾರತ ಈ ಬಿಕ್ಕಟ್ಟನ್ನು ಸೃಷ್ಟಿಸಲಿಲ್ಲ. ಭಾರತ ಈ ಸಂಘರ್ಷದಲ್ಲಿ ಒಂದು ಪಕ್ಷವಲ್ಲ.!

ಮಲ್ಕಾಜ್‌ಗಿರಿ ವಿಶೇಷ ಕಾರ್ಯಾಚರಣೆ ತಂಡ (SOT) ನಡೆಸಿದ ದಾಳಿಯಲ್ಲಿ ಈತನ ಅಕ್ರಮ ಕ್ಲಿನಿಕ್ ಪತ್ತೆಯಾಗಿದ್ದು, ಸಿಕಂದರಾಬಾದ್‌ನ ನರೆಡ್ಮೆಟ್ ಪ್ರದೇಶದಲ್ಲಿ ಬಂಧಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ರಮೇಶ್ ತನ್ನನ್ನು ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (BDS) ಪದವಿ ಪಡೆದ ವೈದ್ಯನಂತೆ ತೋರಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದನು. ಅವನು ಹೆಚ್ಚಾಗಿ ತಡರಾತ್ರಿ ಮತ್ತು ಬೆಳಗಿನ ಜಾವದ ವೇಳೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದುದರಿಂದ ಸ್ಥಳೀಯರಿಗೆ ಅನುಮಾನ ಮೂಡಿದ್ದು, ಅದರ ಆಧಾರದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು.

Gas cylinder problem: ಗ್ಯಾಸ್ ಸಮಸ್ಯೆ ಮೋದಿಗೆ ಕೆಟ್ಟ ಹೆಸರು…!#cookinggas #hundredsofcylinders

ತನಿಖೆಯಲ್ಲಿ ಈತನಿಗೆ ಯಾವುದೇ ಮಾನ್ಯತೆ ಪಡೆದ ವೈದ್ಯಕೀಯ ಅರ್ಹತೆ ಇಲ್ಲವೆಂಬುದು ದೃಢಪಟ್ಟಿದ್ದು, ಸುಮಾರು ಎರಡು ದಶಕಗಳಿಂದ ಅಕ್ರಮವಾಗಿ ಚಿಕಿತ್ಸೆ ನೀಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಇಷ್ಟೊಂದು ವರ್ಷಗಳ ಕಾಲ ಯಾರಿಗೂ ಗೊತ್ತಾಗದಂತೆ ಈತನ ಕಾರ್ಯಾಚರಣೆ ಮುಂದುವರಿದಿರುವುದು ಅಚ್ಚರಿ ಮೂಡಿಸಿದೆ.

ಇದೀಗ, ಈತನ ಬಳಿ ಚಿಕಿತ್ಸೆ ಪಡೆದಿರುವ ರೋಗಿಗಳ ಸಂಖ್ಯೆ ಹಾಗೂ ಸಂಭವನೀಯ ಅನಾಹುತಗಳ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಕ್ಲಿನಿಕ್ ಆರಂಭಿಸಲು ಅಗತ್ಯ ಅನುಮತಿಗಳು ಕಡ್ಡಾಯವಾಗಿದ್ದರೂ, ಈ ಪ್ರಕರಣದಲ್ಲಿ ಆಡಳಿತದ ಮೇಲ್ವಿಚಾರಣೆ ಕುರಿತು ಪ್ರಶ್ನೆಗಳು ಎದ್ದಿವೆ.

Eduaitutors : ಇದು ಸ್ಟೂಡೆಂಟ್ ಗೆ ಹೇಗೆ ಉಪಯೋಗ ಆಗುತ್ತೆ #pratidhvani  #Actorlifestory #ai #neetexam #watch

ಈ ನಡುವೆ, ಕೆಲ ತಿಂಗಳ ಹಿಂದೆ ನಕಲಿ ವೈದ್ಯರಿಂದ ನಡೆದ ಹೆರಿಗೆ ಪ್ರಕರಣದಲ್ಲಿ ಮಹಿಳೆ ಸಾವನ್ನಪ್ಪಿದ ಘಟನೆ ಕೂಡ ನೆನಪಿಗೆ ಬರುತ್ತಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ನಕಲಿ ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯ ಮತ್ತೊಮ್ಮೆ ಒತ್ತಿ ಹೇಳಲಾಗಿದೆ.

ಇದನ್ನೂ ಓದಿ

ಚುನಾವಣೆಯಲ್ಲಿ ಇವಿಎಂ ಬಾಯ್, ಬ್ಯಾಲೆಟ್ ಹಾಯ್: ಕರ್ನಾಟಕದಲ್ಲಿ ಐತಿಹಾಸಿಕ ವಿಧೇಯಕ ಅಂಗೀಕಾರ!

Tags: 20 yearsAnajalika dentalfake dentist dentist arresthydrabadpratidavaniUttara Pradesh
Previous Post

ಇವಳು-ಅವಳು ನಮ್ಮವಳೆನಿಸುವುದು ಯಾವಾಗ ?

Next Post

ಐಪಿಎಲ್ ಪಂದ್ಯಕ್ಕಾಗಿ ಮೆಟ್ರೋ ಸೇವೆ ವಿಸ್ತರಣೆ: ಇಲ್ಲಿದೆ ಹೊಸ ವೇಳಾಪಟ್ಟಿ

Related Posts

ಕೆನ್–ಬೆಟ್ವಾ ನದಿ ಜೋಡಣೆ ಯೋಜನೆ: ಆದಿವಾಸಿಗಳಿಗೆ ಪರಿಹಾರ ತಲುಪಿಲ್ಲವೇ? ಸರ್ಕಾರದ ಹೇಳಿಕೆಗೆ ಫಲಾನುಭವಿಗಳ ಪ್ರಶ್ನೆ
Top Story

ಕೆನ್–ಬೆಟ್ವಾ ನದಿ ಜೋಡಣೆ ಯೋಜನೆ: ಆದಿವಾಸಿಗಳಿಗೆ ಪರಿಹಾರ ತಲುಪಿಲ್ಲವೇ? ಸರ್ಕಾರದ ಹೇಳಿಕೆಗೆ ಫಲಾನುಭವಿಗಳ ಪ್ರಶ್ನೆ

by ಪ್ರತಿಧ್ವನಿ
July 16, 2026
0

ನವದೆಹಲಿ: ದೇಶದ ಮಹತ್ವಾಕಾಂಕ್ಷೆಯ ಕೆನ್–ಬೆಟ್ವಾ ನದಿ ಜೋಡಣೆ ಯೋಜನೆ (Ken-Betwa River Linking Project) ಅಡಿಯಲ್ಲಿ ಸ್ಥಳಾಂತರಗೊಳ್ಳುತ್ತಿರುವ ಆದಿವಾಸಿಗಳಿಗೆ ನೀಡಬೇಕಿದ್ದ ಪರಿಹಾರ ಧನದ ಕುರಿತು ಹೊಸ ಪ್ರಶ್ನೆಗಳು...

Read moreDetails
18 ದಿನಗಳಿಂದ ಉಪವಾಸ ಸತ್ಯಾಗ್ರಹ: ಸಾವು–ಬದುಕಿನ ನಡುವೆ ಸೋನಮ್ ವಾಂಗ್‌ಚುಕ್; ಯಾರಾತ ?

18 ದಿನಗಳಿಂದ ಉಪವಾಸ ಸತ್ಯಾಗ್ರಹ: ಸಾವು–ಬದುಕಿನ ನಡುವೆ ಸೋನಮ್ ವಾಂಗ್‌ಚುಕ್; ಯಾರಾತ ?

July 16, 2026
ಮತದಾರರಿಗೆ ಮತ್ತೊಂದು ಅವಕಾಶ: ವಿಶೇಷ ಪರಿಷ್ಕರಣೆ ದಿನಾಂಕ ವಿಸ್ತರಿಸಿದ ಚುನಾವಣಾ ಆಯೋಗ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ: ಬ್ಯಾಂಕ್ ಆಫ್ ಬರೋಡಾದಲ್ಲಿ ಹಿರಿಯ ಹುದ್ದೆಗಳಿಗೆ ನೇಮಕಾತಿ

July 15, 2026
‘ನಾನು ಹೆಮ್ಮೆಯ ಹಿಂದೂ’; ಕೇಸರಿ ವಿವಾದಕ್ಕೆ ಕಾಂಗ್ರೆಸ್ ನಾಯಕಿ ನಯನ ಮೊಟಮ್ಮ ಸ್ಪಷ್ಟನೆ

‘ನಾನು ಹೆಮ್ಮೆಯ ಹಿಂದೂ’; ಕೇಸರಿ ವಿವಾದಕ್ಕೆ ಕಾಂಗ್ರೆಸ್ ನಾಯಕಿ ನಯನ ಮೊಟಮ್ಮ ಸ್ಪಷ್ಟನೆ

July 15, 2026
ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿಗೆ ಸಿಎಂ ಡಿ.ಕೆ ಶಿವಕುಮಾರ್ ಪತ್ರ

ಅಪಾರ್ಟ್ಮೆಂಟ್‌ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಡಿ.ಕೆ ಶಿವಕುಮಾರ್

July 15, 2026
Next Post
ಐಪಿಎಲ್ ಪಂದ್ಯಕ್ಕಾಗಿ ಮೆಟ್ರೋ ಸೇವೆ ವಿಸ್ತರಣೆ: ಇಲ್ಲಿದೆ ಹೊಸ ವೇಳಾಪಟ್ಟಿ

ಐಪಿಎಲ್ ಪಂದ್ಯಕ್ಕಾಗಿ ಮೆಟ್ರೋ ಸೇವೆ ವಿಸ್ತರಣೆ: ಇಲ್ಲಿದೆ ಹೊಸ ವೇಳಾಪಟ್ಟಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada