• Home
  • About Us
  • ಕರ್ನಾಟಕ
Friday, November 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಅಸ್ಸಾಂ: ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಗುಂಡಿನ ದಾಳಿ; ಇಬ್ಬರ ಸಾವು

Shivakumar A by Shivakumar A
September 24, 2021
in ದೇಶ
0
ಅಸ್ಸಾಂ: ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಗುಂಡಿನ ದಾಳಿ; ಇಬ್ಬರ ಸಾವು
Share on WhatsAppShare on FacebookShare on Telegram

ಅಸ್ಸಾಂನ ದರ್ರಾಂಗ್ ಜಿಲ್ಲೆಯ ಸಿಪಾಜ್ಪುರ್ ಎಂಬಲ್ಲಿ ಪೊಲೀಸರಿಂದ ನಡೆದ ಗುಂಡಿನ ದಾಳಿಗೆ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ತೆರವು ಕಾರ್ಯಾಚರಣೆಯ ವೇಳೆ ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಜಗಳ ಏರ್ಪಿಟ್ಟಿತ್ತು. ಈ ವೇಳೆ ಪೊಲೀಸರು ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ್ದಾರೆ.

ADVERTISEMENT

ಘಟನೆಯ ಕುರಿತಾದ ವೀಡಿಯೋವೊಂದು ಬಹಿರಂಗವಾಗಿದ್ದು, ಇದರಲ್ಲಿ ವಲಸಿಗರ ತೆರವು ಕಾರ್ಯಾಚರಣೆ ವೇಳೆ ಪೊಲೀಸರು ವ್ಯಕ್ತಿಗೆ ಗುಂಡಿಕ್ಕಿದ ನಂತರ ಅವನ ಮೇಲೆ ಕ್ರೂರವಾಗಿ ಲಾಠಿ ಬೀಸಿದ್ದಾರೆ. ಇದೇ ವೀಡಿಯೋದಲ್ಲಿ ಫೊಟೋಗ್ರಾಫರ್ ಒಬ್ಬರು ಗಾಯಾಳುವಿನ ಎದೆ ಹಾಗೂ ಕುತ್ತಿಗೆಯ ಭಾಗಕ್ಕೆ ತುಳಿದು ದಾಳಿ ನಡೆಸಿರುವುದೂ ದಾಖಲಾಗಿದೆ. ಈ ಫೋಟೋಗ್ರಾಫರ್ ಪಿಟಿಐ ನ್ಯೂಸ್ ಏಜೆನ್ಸಿಯ ಬಿಜಯ್ ಶಂಕರ್ ಬನಿಯಾ ಎಂದು ಗುರುತಿಸಲಾಗಿದ್ದು, ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಿಂಸಾಚಾರದಿಂದಾಗಿ ಪೊಲೀಸರು ಸೇರಿದಂತೆ ಒಟ್ಟು 20 ಜನರಿಗೆ ಗಾಯಗಳಾಗಿವೆ.

NDTVಯ ವರದಿಯಂತೆ, ಸ್ಥಳೀಯರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದಾಗ ಬಲ ಪ್ರಯೋಗಿಸಬೇಕಾಯಿತು. ಒಂಬತ್ತು ಜನ ಪೊಲೀಸರು ಗಾಯಗೊಂಡಿದ್ದರು. ಇಬ್ಬರು ನಾಗರಿಕರು ಕೂಡಾ ಗಾಯಗೊಂಡಿದ್ದರು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಸರ್ಮಾ ಅವರ ತಮ್ಮ ಸುಶಾಂತ್ ಬಿಸ್ವಾ ಸರ್ಮಾ ಅವರು ಹೇಳಿದ್ದಾರೆ.

“ಘಟನಾ ಸ್ಥಳದಲ್ಲಿ ಸುಶಾಂತ್ ಅವರು ಹಾಜರಿದ್ದರೂ, ಪೊಲೀಸರು ಗುಂಡಿನ ದಾಳಿ ನಡೆಸಿರುವ ಕುರಿತು ಮಾಹಿತಿಯಿಲ್ಲ ಎಂದು ಹೇಳಿದ್ದಾರೆ. ತೆರವು ಕಾರ್ಯಾಚರಣೆ ನಡೆಸುವ ಸ್ಥಳ ತುಂಬಾ ದೊಡ್ಡದಿತ್ತು. ನಾನು ಇನ್ನೊಂದು ಬದಿಯಿದ್ದೆ. ಘಟನೆಯ ಕುರಿತು ಮಾಹಿತಿ ಪಡೆಯುತ್ತೇನೆ,” ಎಂದು ಹೇಳಿದ್ದಾರೆ.

ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಘಟನೆಯ ಕುರಿತು ಮಾತನಾಡಿ, ಪೊಲೀಸರ ಮೇಲೆ ಸ್ಥಳೀಯರು ಮಚ್ಚು ಮತ್ತು ಇತರ ಆಯುಧಗಳಿಂದ ದಾಳಿ ನಡೆಸಿದ್ದಾರೆ ಎಂಬ ಕುರಿತು ಮಾಹಿತಿ ಬಂದಿದೆ. ಹಿಂಸಾಚಾರದ ನಂತರವೂ ತೆರವು ಕಾರ್ಯಾಚರಣೆ ಮುಂದುವರೆದಿದೆ. ನಾಳೆಯೂ ಮುಮದುವರೆಯುತ್ತದೆ,” ಎಂದು ಹೇಲಿದ್ದಾರೆ.

ಈ ಪ್ರದೇಶದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ನಿವಾಸಿಗಳೇ ಹೆಚ್ಚಾಗಿದ್ದಾರೆ. ಅವರೆಲ್ಲರೂ ಪೂರ್ವ ಬಂಗಾಳದ ಮೂಲದವರು, ಇಲ್ಲಿ ಅನಧಿಕೃತವಾಗಿ ವಾಸವಿದ್ದಾರೆ ಎಂದು ಸರ್ಕಾರ ಹೇಳಿತ್ತು. ಸೋಮವಾರದಂದು ಬಹುದೊಡ್ಡ ತೆರವು ಕಾರ್ಯಾಚರಣೆ ನಡೆಸಿ ಸುಮಾರು 800 ಕುಟುಂಬಗಳ ವಾಸಕ್ಕೆ ಸ್ಥಳವಿಲ್ಲದಂತೆ ಮಾಡಲಾಗಿತ್ತು.

ಈ ತೆರವು ಕಾರ್ಯಾಚರಣೆಯ ಮೊದಲ ಹಂತ ಜೂನ್ ತಿಂಗಳಲ್ಲಿಯೇ ಆರಂಭಿಸಲಾಗಿತ್ತು. ಅಸ್ಸಾಂನ ಗೋರುಖುಟಿ ಹಾಗೂ ಸಿಫಾಜ್ಪುರ್’ನಲ್ಲಿ “ಅಕ್ರಮ ವಲಸಿಗರು” ಆಕ್ರಮಿಸಿಕೊಂಡಿರುವ 77,000 ಬಿಘಾ (ಸುಮಾರು 1,24,740 ಎಕರೆ) ಭೂಮಿಯನ್ನು ಕೃಷಿ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದು ಹಿಮಂತ್ ಹೇಳಿದ್ದರು.

ಈ ತೆರವು ಕಾರ್ಯಾಚರಣೆಯ ವಿರುದ್ದ ಸ್ಥಳೀಯರಿಂದ ಪ್ರತಿರೋಧ ವ್ಯಕ್ತವಾಗಿತ್ತು. ಈಗಾಗಲೇ ಸಾವಿರಾರು ಕುಟುಂಬಗಳು ಬೀದಿಪಾಲಾಗಿದ್ದು, ನಿರಾಶ್ರಿತರಿಗೆ ಪರ್ಯಾಯ ವಾಸದ ವ್ಯವಸ್ಥೆಯನ್ನೂ ನೀಡಲಾಗಿಲ್ಲ.

ಪ್ರತಿಭಟನಾಕಾರರ ಮೇಲೆ ನಡೆದ ಗುಂಡಿನ ದಾಳಿ ಹಾಗೂ ಇಬ್ಬರ ಸಾವಿನ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಬೆಂಬಲಿತ ಬೆಂಕಿಯಿಮದ ಅಸ್ಸಾಂ ನರಳುತ್ತಿದೆ. ಅಲ್ಲಿನ ಎಲ್ಲಾ ಸಹೋದರ – ಸಹೋದರಿಯರಿಗೆ ನನ್ನ ಬೆಂಬಲ ನೀಡುತ್ತಿದ್ದೇನೆ. ಈ ರೀತಿ ಭಾರತದಲ್ಲಿರುವ ಯಾರೊಂದಿಗೂ ಆಗದಿರಲಿ, ಎಂದು ಹೇಳಿದ್ದಾರೆ.

Assam is on state-sponsored fire.

I stand in solidarity with our brothers and sisters in the state- no children of India deserve this. pic.twitter.com/syo4BTIXKH

— Rahul Gandhi (@RahulGandhi) September 23, 2021

ಅಸ್ಸಾಂ ಸರ್ಕಾರದ ವಿರುದ್ದ ಕಿಡಿಕಾರಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಕುಮಾರ್ ಬೋರಾಹ್, 1970ರಿಂದ ಧೋಲ್ಪುರ್ ಪ್ರದೇಶದಲ್ಲಿ ವಾಸವಿದ್ದವರನ್ನೂ ಒಕ್ಕಲೆಬ್ಬಿಸಲಾಗುತ್ತಿದೆ. ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ಸರ್ಕಾರ ಪರ್ಯಾಯ ವಾಸದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿತ್ತು. ಇಲ್ಲಿ ವಾಸವಿದ್ದವರ ಮೂಲ ಆದಾಯ ಕೃಷಿ. ಈಗ ಅವರ ಆಹಾರದ ಮೂಲವನ್ನೇ ಅವರಿಂದ ಕಿತ್ತುಕೊಳ್ಳಲಾಗಿದೆ. ಜನರ ಹಿತಕ್ಕಾಗಿ ಕೆಲಸ ಮಾಡುವುದು ಸರ್ಕಾರದ ಕರ್ತವ್ಯ. ಜನರನ್ನು ನಿರಾಶ್ರಿತರನ್ನಾಗಿಸುವುದಲ್ಲ. ಅಸ್ಸಾಂ ರಾಜ್ಯವನ್ನು ಪೊಲೀಸ್ ರಾಜ್ಯವಾಗಿ ಪರಿವರ್ತಿಸುವ ಕೆಲಸವನ್ನು ಸರ್ಕಾರ ಮಾಡದಿರಲಿ,” ಎಂದು ಹೇಳಿದ್ದಾರೆ. 

Tags: BJPCovid 19ಅಸ್ಸಾಂಅಸ್ಸಾಂ ಸರ್ಕಾರಗುಂಡಿನ ದಾಳಿಪೊಲೀಸ್ಪ್ರತಿಭಟನಾಕಾರಬಿಜೆಪಿಭೂಪೇಶ್ ಕುಮಾರ್ ಬೋರಾಹ್ಮುಸ್ಲಿಂ ಸಮುದಾಯರಾಹುಲ್ ಗಾಂಧಿಸುಶಾಂತ್ಹಿಂಸಾಚಾರ
Previous Post

ರಾಜಧಾನಿ ಬೆಂಗಳೂರಲ್ಲಿ‌ ಹೆಚ್ಚಿದ ಮಧುಮೇಹ ಕಾಯಿಲೆ : BBMP ಸರ್ವೇಯಲ್ಲಿ ಬಯಲು!

Next Post

2023 ಚುನಾವಣೆ : ಜೆಡಿಎಸ್ ತೃತೀಯ ಶಕ್ತಿಯಾಗಿ ಹೊರಹೊಮ್ಮಲು ಸರ್ವ ಸಿದ್ಧತೆ : HDK

Related Posts

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ
Top Story

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

by ಪ್ರತಿಧ್ವನಿ
November 14, 2025
0

ಪುಣೆ: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದಲ್ಲಿ ಹತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ದೇಶದಲ್ಲಿ ಮತ್ತೊಂದು ದೊಡ್ಡ ಅವಘಡ ನಡೆದಿದೆ. ಪುಣೆ-ಬೆಂಗಳೂರು...

Read moreDetails
ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

November 14, 2025
ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

November 14, 2025
N Chaluvarayaswamy: ಕೃಷಿ ಸಬಲೀಕರಣಕ್ಕೆ ನೆರವಾಗಿ: ಎನ್.ಚಲುವರಾಯಸ್ವಾಮಿ ಕರೆ

N Chaluvarayaswamy: ಕೃಷಿ ಸಬಲೀಕರಣಕ್ಕೆ ನೆರವಾಗಿ: ಎನ್.ಚಲುವರಾಯಸ್ವಾಮಿ ಕರೆ

November 13, 2025
ಮೇಕೆದಾಟು ಯೋಜನೆ ವಿರುದ್ಧದ ಅರ್ಜಿ ವಜಾ: ಇದು ಬೆಂಗಳೂರಿಗರ ಗೆಲುವು ಎಂದ ಡಿ.ಕೆ ಶಿವಕುಮಾರ್

ಮೇಕೆದಾಟು ಯೋಜನೆ ವಿರುದ್ಧದ ಅರ್ಜಿ ವಜಾ: ಇದು ಬೆಂಗಳೂರಿಗರ ಗೆಲುವು ಎಂದ ಡಿ.ಕೆ ಶಿವಕುಮಾರ್

November 13, 2025
Next Post
2023 ಚುನಾವಣೆ :  ಜೆಡಿಎಸ್ ತೃತೀಯ ಶಕ್ತಿಯಾಗಿ ಹೊರಹೊಮ್ಮಲು  ಸರ್ವ ಸಿದ್ಧತೆ : HDK

2023 ಚುನಾವಣೆ : ಜೆಡಿಎಸ್ ತೃತೀಯ ಶಕ್ತಿಯಾಗಿ ಹೊರಹೊಮ್ಮಲು ಸರ್ವ ಸಿದ್ಧತೆ : HDK

Please login to join discussion

Recent News

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ
Top Story

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

by ಪ್ರತಿಧ್ವನಿ
November 14, 2025
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ
Top Story

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

by ಪ್ರತಿಧ್ವನಿ
November 14, 2025
ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌
Top Story

ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

by ಪ್ರತಿಧ್ವನಿ
November 14, 2025
ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ
Top Story

ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

by ಪ್ರತಿಧ್ವನಿ
November 14, 2025
ಇಂದಿನ ರಾಶಿ ಭವಿಷ್ಯ: ಈ ದಿನದ ಅದೃಷ್ಟದ ರಾಶಿಗಳಿವು
Top Story

ಇಂದಿನ ರಾಶಿ ಭವಿಷ್ಯ: ಈ ದಿನದ ಅದೃಷ್ಟದ ರಾಶಿಗಳಿವು

by ಪ್ರತಿಧ್ವನಿ
November 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

November 14, 2025
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

November 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!