ಜಿಲ್ಲೆಯವರು ಅಲ್ಲದ ರಾಜಕೀಯ ಪ್ರತಿನಿಧಿಗಳು ಮತದಾನದ 2 ದಿನ ಮುಂಚೆ ಜಿಲ್ಲೆಯನ್ನು ಬಿಟ್ಟು ತಮ್ಮ ಜಿಲ್ಲೆಗಳಿಗೆ ಹೋಗಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಳಾದ ಡಾ. ಕೆ.ವಿ ರಾಜೇಂದ್ರ ಅವರು ತಿಳಿಸಿದರು. ಇಂದು ತಮ್ಮ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಹೋಟೆಲ್ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣಾ ಸಂಧರ್ಭದಲ್ಲಿ ಹೊರಗಡೆಯಿಂದ ಬಂದು ಹಣ ಹಂಚುವುದು ಹಾಗೂ ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುತ್ತದೆ. ರೂಮ್ ಗಳನ್ನು ನೀಡುವಾಗ ಅವರ ಗುರುತಿನ ಚೀಟಿ ಹಾಗೂ ಅವರು ಬಂದಿರುವ ಉದ್ದೇಶ ತಿಳಿದುಕೊಳ್ಳಬೇಕು. ರಾಜಕೀಯ ಉದ್ದೇಶದಿಂದ ಬಂದಿದ್ದರೆ ಅವರು ಮತದಾನದ 2 ದಿನ ಮುಂಚೆ ಜಿಲ್ಲೆಯನ್ನು ತೊರೆಯಬೇಕು ಎಂದರು.

ಮೇ 10 ರಂದು ಮತದಾನ ಇದ್ದು ಮೇ 8 ರಂದು ಸಂಜೆ 6 ಗಂಟೆಗೆ ಹೊರ ಜಿಲ್ಲೆಯವರು ಜಿಲ್ಲೆಯನ್ನು ಬಿಡಬೇಕು. ಹೋಟೆಲ್ ಮಾಲೀಕರು ಈ ಬಗ್ಗೆ ಗಮನ ಹರಿಸಬೇಕು ಪ್ರವಾಸಕ್ಕೆ ಬರುವವರಿಗೆ ಯಾವುದೇ ನಿರ್ಭಂದ ಇಲ್ಲ. ತಮ್ಮ ಹೋಟೆಲ್ ಗಳಲ್ಲಿ ಮತದಾನದ ಮಹತ್ವ ತಿಳಿಸುವ ಪೋಸ್ಟರ್ ಗಳನ್ನು ಹಾಕಿ. ನೈತಿಕ ಮತದಾನ ಬಗ್ಗೆ ತಮ್ಮ ಸಿಬ್ಬಂದಿಗಳ ಮೂಲಕ ಹೋಟೆಲಿಗೆ ಬರುವ ಸಾರ್ವಜನಿಕರಿಗೆ ಅರಿವು ಮೂಡಿಸಿ. ಚುನಾವಣಾ ಅಕ್ರಮದ ಬಗ್ಗೆ ದೂರನ್ನು ಸಿ ವಿಜಿಲ್ ಅಪ್ ನಲ್ಲಿ ದೂರು ಸಲ್ಲಿಸಬಹುದು. ಹೋಟೆಲ್ ಸಿಬ್ಬಂದಿಗಳು ಮತದಾನ ಮಾಡಲು ವೇತನ ಸಹಿತ ರಜೆ ನೀಡಬೇಕು ಎಂದರು.ಒಣ ದಿನಗಳಲ್ಲಿ ಮದ್ಯ ಮಾರಾಟ ನಿಷೇಧ ಆಗಿರುತ್ತದೆ. ಈ ಅವಧಿಯಲ್ಲಿ ಮದ್ಯ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೋಟೆಲ್ ಗಳಲ್ಲಿ ಸಿ. ಸಿ ಟಿವಿ ಗಳು ಹಾಗೂ 24 *7 ಚಾಲ್ತಿಯಲ್ಲಿ ಇರಬೇಕು. 30 ದಿನಗಳ ಸಿಸಿ ಟಿವಿ ಪೂಟೆಜ್ ಇರಬೇಕು. ನಿರಂತರ ವಿದ್ಯುತ್ ಸೌಲಭ್ಯ ಇರಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಚುನಾವಣಾ ತಹಶಿಲ್ದಾರ್ ರಾಮಪ್ರಸಾದ್ ಸೇರಿದಂತೆ ಹೋಟೆಲ್ ಮಾಲೀಕರು ಉಪಸ್ಥಿತರಿದ್ದರು.
–
