ಕಲಬುರಗಿ: ಈಗಾಗಲೇ ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಎರಡನೇ ಹಂತದ ಮತದಾನ ಉತ್ತರ ಕರ್ನಾಟಕ ಭಾಗದಲ್ಲಿನ ಕ್ಷೇತ್ರಗಳಿಗೆ ನಡೆಯಲಿದ್ದು, ಎಲ್ಲರ ಚಿತ್ರ ಈಗ ಆ ಕಡೆ ನೆಟ್ಟಿದೆ. ಈ ಮಧ್ಯೆ ಕೈ ನಾಯಕರ ಕಾರಿನಲ್ಲಿ 2 ಕೋಟಿ ರೂ. ಪತ್ತೆಯಾಗಿದೆ.

ಆದಾಯ ತೆರಿಗೆ (Income Tax) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ‘ಕೈ’ (Congress) ನಾಯಕರಿಗೆ ಸೇರಿದ ಕಾರಿನಲ್ಲಿ ಪತ್ತೆಯಾದ 2 ಕೋಟಿಗೂ ಅಧಿಕ ಹಣ ಸೀಜ್ ಮಾಡಿದ್ದಾರೆ.

ಕಲಬುರಗಿ (Kalaburagi) ರೈಲ್ವೆ ನಿಲ್ದಾಣದಿಂದ ಹಣ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೇರೆ ರಾಜ್ಯದಿಂದ ರೈಲಿನ ಮೂಲಕ ಕಲಬುರಗಿ ರೈಲು ನಿಲ್ದಾಣಕ್ಕೆ ಹಣ ತರಲಾಗಿತ್ತು. ರೈಲಿನಿಂದ ಕಾರಿನಲ್ಲಿ ಹಣ ಸಾಗಾಟ ಮಾಡಲಾಗಿದೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳು ಈಗಾಗಲೇ ಹಣ ಸೀಜ್ ಮಾಡಿದ್ದು, ಕಲಬುರಗಿಯ ಖರ್ಗೆ ಸರ್ಕಲ್ ಬಳಿ ಹಣದ ಸಮೇತ ಕಾರು ಸೀಜ್ ಮಾಡಿದ್ದಾರೆ.






