ಉತ್ತರಾಖಂಡ್ ನಲ್ಲಿ ಇತ್ತೀಚೆಗೆ ಸಂಭವಿಸಿದ ಹಿಮಪಾತದಲ್ಲಿ ಬೆಂಗಳೂರು ಜನರ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದರೆ, ೧೨ ಮಂದಿಯನ್ನು ರಕ್ಷಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಾಖಂಡದಲ್ಲಿ ನೆಹರು ಇನ್ಸಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಅಡ್ವಾನ್ಸ್ ಮೌಂಟೇನಿಯರಿಂಗ್ ಕೋರ್ಸ್ ಬ್ಯಾಚ್-217ನಿಂದ ನವೆಂಬರ್ ೨೧ರಂದು ಪ್ರಾರಂಭವಾಯಿತು. ಅಕ್ಟೋಬರ್ 4 ರಂದು ಪ್ರಶಿಕ್ಷಣಾರ್ಥಿಗಳು ಮತ್ತು ಬೋಧಕರು ಪರ್ವತದಿಂದ ಹಿಂತಿರುಗುವಾಗ ಬೆಳಗ್ಗೆ 400 ಗಂಟೆಗೆ ದೌಪದಿ ಕಾ ದಂಡ (17000 ಅಡಿ) ಪರ್ವತದಲ್ಲಿ ಹಿಮಕುಸಿತ ಉಂಟಾಗಿತ್ತು ಎಂದರು.
34 ಪ್ರಶಿಕ್ಷಣಾರ್ಥಿಗಳು ಮತ್ತು ಪರ್ವತಾರೋಹಣ ಬೋಧಕರು ಬೆಳಿಗ್ಗೆ 08.45 ಗಂಟೆಗೆ ಹಿಮಪಾತದಲ್ಲಿ ಬೆಂಗಳೂರು ನಗರ ಜಿಲ್ಲೆಯ ಇಬ್ಬರು ವಿಕ್ರಮ್ ಎಂ ಮತ್ತು ರಕ್ಷಿತ್ ಮೃತಪಟ್ಟರೆ, 12 ಬೋಧಕರು ಮತ್ತು ಪ್ರಶಿಕ್ಷಣಾರ್ಥಿಗಳನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕದ ಇಬ್ಬರ ಮೃತದೇಹವೂ ಸಿಕ್ಕಿದೆ. ಡಿಸಾಸ್ಟರ್ ಮ್ಯಾನೇಜ್ಮೆಂಟ್ ನವರಿಗೆ ಎಲ್ಲ ರೀತಿಯ ನೆರವು ನೀಡಲು ಸೂಚನೆ ನೀಡಿದ್ದೇನೆ. ಬೆಂಗಳೂರಿಗೆ ತರುವ ವ್ಯವಸ್ಥೆ ಮಾಡಲಾಗಿದೆ. ಇಂದು ವಿಮಾನದ ಮೂಲಕ ಮೃತ ದೇಹ ಬರಲಿದೆ ಎಂದು ಅವರು ಹೇಳಿದರು.

ಇದೇ ವೇಳೆ ಬೆಂಗಳೂರಿನಲ್ಲಿ ಅಕ್ರಮ ನಿವಾಸಗಳನ್ನು ಧ್ವಂಸಗೊಳಿಸುವ ಕೆಲಸ ಪ್ರಗತಿಯಲ್ಲಿದ್ದು, ಬಡವ, ಮಧ್ಯಮ, ಸಾಹುಕಾರ ಅನ್ನೋ ಪ್ರಶ್ನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜಕಾಲುವೆ ಒತ್ತುವರಿ ಮಾಡಿರೋರನ್ನ ಸಮಾನವಾಗಿ ನೋಡಬೇಕು. ಹಾಗೆಯೇ ನೋಡುತ್ತೇವೆ. ಸರ್ಕಾರಕ್ಕೆ ಎಲ್ಲರೂ ಕೂಡ ಒಂದೇ.ಎಲ್ಲವನ್ನೂ ಸಮಾನವಾಗಿ ನೋಡಿ, ಡೆಮಾಲಿಷನ್ ಮಾಡಲು ಸೂಚಿಸಿದ್ದೇನೆ ಎಂದು ಅವರು ಹೇಳಿದರು.
ಸುಮಾರು 150-200 ಜನರ ಒತ್ತುವರಿಯಿಂದ ಸಾವಿರಾರು ಜನರಿಗೆ ಸಮಸ್ಯೆ ಆಗಿದೆ. ಕೆಲವರು ಕೋರ್ಟ್ ಗೆ ಹೊಗಿದ್ದಾರೆ. ನ್ಯಾಯಾಲಯಕ್ಕೂ ಮನವರಿಕೆ ಮಾಡಿ ಆದೇಶ ಪಡೆದು ತೆರವು ಮಾಡುತ್ತೇವೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ. ಸರ್ಕಾರ ನ್ಯಾಯಯುತವಾಗಿ ಕಾರ್ಯಾಚರಣೆ ನಡೆಸುತ್ತದೆ. ತ್ವರಿತವಾಗಿ ಸರ್ವೇ ಕಾರ್ಯವೂ ನಡೆಯುತ್ತಿದೆ. ಮುಂದೆ ಮಳೆ ಬಂದರೆ ಯಾರಿಗೂ ಸಮಸ್ಯೆ ಆಗಬಾರದು ಎನ್ನುವುದು ನಮ್ಮ ಉದ್ದೇಶ ಎಂದು ಅಶೋಕ ಹೇಳಿದರು.











