ಬಿಸಿಸಿಐ ತಂಡದ ಮಾಜಿ ಹಾಗೂ ಹಾಲಿ ಆಟಗಾರರು #IndiaTogether, #IndiaAgainstPropaganda ಹ್ಯಾಷ್‌ಟ್ಯಾಗ್ ಬಳಸಿ ಕೇಂದ್ರದ ಪರ ಬ್ಯಾಟಿಂಗ್ ನಡೆಸುತ್ತಿರುವಂತೆಯೇ, ಬೌಲರ್ ಸಂದೀಪ್ ಶರ್ಮ ಇದಕ್ಕೆ ವಿರುದ್ಧವಾಗಿ ಹೋಗಿದ್ದಾರೆ.
ಅಮೆರಿಕ ಮೂಲದ ಪಾಪ್ ತಾರೆ ರಿಹಾನ್ನ, ದೆಹಲಿಯಲ್ಲಿ ಇಂಟರ್‌ನೆಟ್ ಸ್ಥಗಿತ ಕುರಿತಂತೆ ಮಾಡಿರುವ ಟ್ವೀಟ್ ಬಳಿಕ ವಿದೇಶಾಂಗ ಸಚಿವಾಲಯವು ʼದೇಶದ ಕೆಲವು ರೈತರು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ದೇಶದ ಆಂತರಿಕ ವಿಚಾರ. ಇದರಲ್ಲಿ ಯಾರೂ ಮೂಗು ತೂರಿಸಬಾರದೆಂದು ಹೇಳಿತ್ತು.ಟ್ರಂಪ್ ಭಾರತವನ್ನು ಕೊಳಕೆಂದಾಗ ಎಲ್ಲಿ ಹೋಗಿತ್ತು ಭಾರತೀಯ ತಾರೆಯರ ದೇಶಪ್ರೇಮ?
ಇದಕ್ಕೆ ತದ್ವಿರುದ್ಧವಾಗಿ ಟ್ವೀಟ್ ಮಾಡಿರುವ ಸಂದೀಪ್ ಶರ್ಮ, “ವಿದೇಶಾಂಗ ಸಚಿವಾಲಯ ಸೇರಿದಂತೆ ಹಲವಾರು ಮಂದಿ ಗಾಯಕಿ ರಿಹಾನ್ನ ರೈತರಿಗೆ ಬೆಂಬಲ ನೀಡಿರುವುದನ್ನು ʼಇದು ಭಾರತದ ಆಂತರಿಕ ವಿಚಾರʼ ಎಂಬ ನೆಲೆಗಟ್ಟಿನಲ್ಲಿ ಖಂಡಿಸಿದ್ದಾರೆ. ಇದೇ ತರ್ಕದ ಪ್ರಕಾರ, ನಾಝಿ ಯುಗದಲ್ಲಿ ಜರ್ಮನ್ ನಾಝಿಗಳ ಕೃತ್ಯವನ್ನು ಯಾರೂ ಖಂಡಿಸಬಾರದು, ಇದೇ ತರ್ಕದ ಪ್ರಕಾರ ಪಾಕಿಸ್ತಾನದಲ್ಲಿ ಅಹ್ಮದಿ, ಹಿಂದು, ಸಿಖ್ ಹಾಗೂ ಕ್ರಿಶ್ಚಿಯನ್ನರ ನರಮೇಧವಾದರೆ ಯಾರೂ ಖಂಡಿಸಬಾರದು. ಇದೇ ತರ್ಕದ ಪ್ರಕಾರ ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು, 1984 ಸಿಖ್ ಹತ್ಯಾಖಾಂಡ, ಅಮೆರಿಕದ ಹೊರಗಿನವರು ವರ್ಣಬೇಧ ನೀತಿ, ಚೀನಾದ ಹೊರಗಿನವರು ಉಯಿಘರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು, ಬರ್ಮಾದಲ್ಲಿ ರೊಹಿಂಗ್ಯಾರ ಹತ್ಯಾಕಾಂಡವನ್ನು ಖಂಡಿಸಬಾರದು. ಇದೆಲ್ಲವೂ ಆ ದೇಶದ ಆಂತರಿಕ ವ್ಯವಹಾರಗಳು” ಎಂಬ ಸಂದೇಶವನ್ನು ಹಂಚಿಕೊಂಡಿದ್ದರು.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ಪ್ರಬಲ ತಾರೆಗಳೆಲ್ಲರೂ ಕೇಂದ್ರ ಸರ್ಕಾರದ ಪರವಾಗಿ ಮಾತನಾಡಿದರೆ, ರೈತರಿಗೆ ಬೆಂಬಲವಾಗಿ ಮಾನವೀಯ ಕಳಕಳಿಯಿಂದ ಮಾತನಾಡಿದ ಸಂದೀಪ್ ಶರ್ಮ ಭಾರತೀಯ ಮನಸ್ಸು ಗೆದ್ದಿದ್ದರು. ಆದರೆ ಕೆಲವೇ ಕ್ಷಣದಲ್ಲಿ ಸಂದೀಪ್ ಶರ್ಮ ತನ್ನ ಟ್ವೀಟ್ ಅನ್ನು ಡಿಲಿಟ್ ಮಾಡಿದ್ದಾರೆ. ಇದು ಸಾಕಷ್ಟು ಅನುಮಾನ ಹುಟ್ಟು ಹಾಕಿಸಿದೆ.https://platform.twitter.com/embed/Tweet.html?dnt=false&embedId=twitter-widget-2&features=eyJ0ZndfZXhwZXJpbWVudHNfY29va2llX2V4cGlyYXRpb24iOnsiYnVja2V0IjoxMjA5NjAwLCJ2ZXJzaW9uIjpudWxsfSwidGZ3X2hvcml6b25fdHdlZXRfZW1iZWRfOTU1NSI6eyJidWNrZXQiOiJodGUiLCJ2ZXJzaW9uIjpudWxsfX0%3D&frame=false&hideCard=false&hideThread=false&id=1357244534137122817&lang=kn&origin=https%3A%2F%2Fpratidhvani.com%2Fnational%2F2021%2F02%2F04%2Fsandeep-sharma-farmers-rihanna&sessionId=a603cd8806138b4b250f7f9e828cff5ef9b794a7&theme=light&widgetsVersion=2d233ae%3A1618352735472&width=550px
ತಾರೆಗಳನ್ನು ಬೆದರಿಸಿ ತಮ್ಮ ಪರವಾಗಿ ಟ್ವೀಟ್ ಮಾಡುವಂತೆ ನೋಡಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಸಂದೀಪ್ ಶರ್ಮ ಪ್ರಕರಣ ಪುಷ್ಟಿ ನೀಡಿದೆ. ಸಂದೀಪ್ ಶರ್ಮ ಅವರ ಮೇಲೆ ಒತ್ತಡ ಹೇರಿ ಅವರ ಟ್ವೀಟ್ ಅನ್ನು ಡಿಲಿಟ್ ಮಾಡಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಮೊದಲೂ ರೈತ ಚಳುವಳಿಯನ್ನು ಬೆಂಬಲಿಸಿದ್ದ ಸಂದೀಪ್ ಶರ್ಮ:
ಸಂದೀಪ್ ಶರ್ಮ ಸರ್ಕಾರದ ವಿರುದ್ಧವಾಗಿ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ರೈತರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದರು.
ರೈತರ ಹೋರಾಟದಲ್ಲಿ ಪಾಲ್ಗೊಂಡ ಪಂಜಾಬ್ ಮೂಲದ ಬ್ಯಾಟ್ಸ್‌ಮನ್ ಮನ್‌ದೀಪ್ ರೈತ ಚಳವಳಿಯಲ್ಲಿ ಭಾಗಿಯಾಗಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದ ಸಂದೀಪ್, ʼನಿನ್ನ ಕುರಿತು ತುಂಬಾ ಹೆಮ್ಮೆಯೆನಿಸುತ್ತದೆ ಸಹೋದರʼ ಎಂದು ಟ್ವೀಟ್ ಮಾಡಿದ್ದರು.
ಗಮನ ಸೆಳೆದ ಮನೋಜ್ ತಿವಾರಿ
ಸಾಮಾಜಿಕ ಜಾಲತಾಣದಲ್ಲಿ ರೈತರ ಪರ ವಿರೋಧ, ಸರ್ಕಾರದ ಪರ ವಿರೋಧ ಇರುವ ಕ್ರಿಕೆಟಿಗರ ಚರ್ಚೆ ನಡೆಯುತ್ತಿರುವ ನಡುವೆ, ಪಶ್ಚಿಮ ಬಂಗಾಳ ಮೂಲದ ಕ್ರಿಕೆಟ್ ಆಟಗಾರ ಮನೋಜ್ ತಿವಾರಿಯ ಟ್ವೀಟ್ ಸಾಕಷ್ಟು ಕುತೂಹಲ ಮೂಡಿಸಿದೆ.
ಸರ್ಕಾರದ ಪರ ಟ್ವೀಟ್ ಹಾಕಿರುವ ತಾರೆಯರು ಸರ್ಕಾರದ ಕೈಗೊಂಬೆಗಳು ಎಂದು ಟೀಕೆಗೊಳಗಾಗುತ್ತಿರುವ ಸಂಧರ್ಭದಲ್ಲಿಯೇ ʼಪಪೆಟ್ ಶೋʼ (ಗೊಂಬೆ ಆಟ) ಟ್ವೀಟ್ ಮೂಲಕ ಮನೋಜ್ ತಿವಾರಿ ಗಮನ ಸೆಳೆದಿದ್ದಾರೆ.
ನಾನು ಮಗುವಾಗಿರುವಾಗ ಪಪೆಟ್ ಶೋ ನೋಡಿರಲಿಲ್ಲ. ಇದು ಸಾಧ್ಯವಾಗಲು ನನಗೆ 35 ವರ್ಷ ಹಿಡಿಯಿತು ಎಂದು ಟ್ವೀಟ್ ಮಾಡಿದ್ದಾರೆ. ಇದು ಪರೋಕ್ಷವಾಗಿ ಸರ್ಕಾರದ ಕೈಗೊಂಬೆಗಳಂತೆ ವರ್ತಿಸಿದ ಆಟಗಾರರ ಕುರಿತೇ ಹೇಳಲಾಗಿದೆ ಎನ್ನಲಾಗುತ್ತಿದೆ.