ಮುಡಾದಲ್ಲಿ ಬಗೆದಷ್ಟು ಹಗರಣಗಳು ಬೆಳಕಿಗೆ ಬರ್ತಿವೆ. ಈಗ ಮತ್ತೊಂದು ಅಕ್ರಮ ಪತ್ತೆಯಾಗಿದ್ದು, ಭೂಮಿಯನ್ನೇ ವಶಕ್ಕೆ ಪಡೆಯದೇ ಸೈಟ್ ಹಂಚಿಕೆ ಮಾಡಲಾಗಿದೆ. ಜಿಪಿಎ ಹೆಸರಿನಲ್ಲಿ ಮತ್ತೊಂದು ಮಹಾಮೋಸ ಮಾಡಲಾಗಿದೆ. 1994ರಲ್ಲಿ ವಶಪಡಿಸಿಕೊಂಡಿದ್ದ ಭೂಮಿಯನ್ನ 2023ಕ್ಕೆ ಜಿಪಿಎ ಮಾಡಿ ಸೈಟ್ ಅಲಾಟ್ ಮಾಡಲಾಗಿದೆ. ಬಸವನಹಳ್ಳಿ ಗ್ರಾಮದ ಸರ್ವೇ ನಂಬರ್ 126/2A ಸೈಟ್ನ್ನ 30 ವರ್ಷದ ಬಳಿಕ ಪಾಲಿಕೆ ಮಾಜಿ ಸದಸ್ಯ ಎಂಸಿ ರಮೇಶ್ಗೆ ಜಿಪಿಎ ಮಾಡಲಾಗಿದೆ.
ಹೊನ್ನೇಗೌಡರ ಜಮೀನು ಖರೀದಿಸಿದಂತೆ ನಕಲಿ ದಾಖಲೆ ಸೃಷ್ಟಿ ಮಾಡಿ, ಕೇವಲ 3000 ರೂಪಾಯಿಗೆ ಕ್ರಯ ಮಾಡಿದ ಆರೋಪ ಎದುರಾಗಿದೆ. 60/90 ಅಳತೆಯ ಎರಡು ಸೈಟ್ ನೀಡಿದ ಆರೋಪವಿದೆ. ನಿಯಮದಂತೆ 50/60 ಗಿಂತ ದೊಡ್ಡ ಅಳತೆಯ 20/30 ಗಿಂತ ಚಿಕ್ಕ ಅಳತೆಯ ಸೈಟ್ ನೀಡುವಂತಿಲ್ಲ. ಸುದ್ದಿಗೋಷ್ಠಿ ನಡೆಸಿd ನಟರಾಜ್ ಹಾಗೂ ವಕೀಲ ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ ಜೊತೆಗೆ ಆದಾಯ ತೆರಿಗೆ ಇಲಾಖೆಗೂ ದೂರು ನೀಡಿದ್ದಾರೆ…