
ಕಾಲೇಜ್ ನಿಂದ ಮನೆಗೆ ಮರಳುವಾಗ ವಿದ್ಯಾರ್ಥಿನಿಗೆ ಹೃದಯಾಘಾತ (Heart attack) ಸಂಭವಿಸಿದ್ದು,ಚಿಕಿತ್ಸೆ ಫಲಿಸದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ತುಮಕೂರಿನ ಮಧುಗಿರಿ ತಾಲೂಕಿನ ಮಿಡಿಗೇಶಿ ಮೂಲದ ಮೈಥಿಲಿ (Student maithili) (19) ಸಾವನ್ನಪಿದ ವಿದ್ಯಾರ್ಥಿನಿ.
ತುಮಕೂರು (Tumkur) ಜಿಲ್ಲೆ ಪಾವಗಡ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಪಾವಗಡ ಪಟ್ಟಣದ ಶ್ರೀ ವೈ.ಈರಂಗಯ್ಯಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಮೈಥಿಲಿ ಪ್ರಥಮ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು.

ಆದ್ರೆ ನಿನ್ನೆ ಸಂಜೆ (ಜ.19) ಕಾಲೇಜು ಮುಗಿಸಿ ಮನೆಗೆ ವಾಪಸ್ ಹೋಗುವಾಗ ಹೃದಯಾಘಾತ ಸಂಭವಿಸಿದ್ದು,ಕೂಡಲೇ ಪಾವಗಡ ತಾಲ್ಲೂಕು ಆಸ್ಪತ್ರೆಗೆ ಸ್ನೇಹಿತರು ವಿದ್ಯಾರ್ಥಿನಿಯನ್ನು ಕರೆದೊಯ್ದಿದ್ದಾರೆ. ಆದ್ರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೈಥಿಲಿ ಸಾವನ್ನಪ್ಪಿದ್ದರು ಎಂದು ಟಿಕಿಡುಬಂದಿದೆ.