Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

17ನೇ ಗ್ರಾನ್ ಸ್ಲಾಂ ಮುಡಿಗೇರಿಸಿಕೊಂಡ ಜೋಕೋವಿಚ್‌‌

17ನೇ ಗ್ರಾನ್ ಸ್ಲಾಂ ಮುಡಿಗೇರಿಸಿಕೊಂಡ ಜೋಕೋವಿಚ್‌‌
17ನೇ ಗ್ರಾನ್ ಸ್ಲಾಂ ಮುಡಿಗೇರಿಸಿಕೊಂಡ ಜೋಕೋವಿಚ್‌‌

February 2, 2020
Share on FacebookShare on Twitter

ಇಂದಿನ ದಿನಮಾನದ ಟೆನಿಸ್ ಲೋಕದ ಬಿಗ್‌-3 ಪುರುಷರ ಗ್ರಾನ್ ಸ್ಲಾಂ ಡಾಮಿನೇಷನ್ ಮುಂದುವರೆದಿದ್ದು, ಸರ್ಬಿಯಾದ ನೋವಾಕ್‌ ಜೋಕೋವಿಚ್‌ ದಾಖಲೆಯ ಎಂಟನೇ ಆಸ್ಟ್ರೇಲಿಯಾ ಓಪನ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ವೃತ್ತಿ ಬದುಕಿನ 17ನೇ ಗ್ರಾನ್ ಸ್ಲಾಂಅನ್ನು ಜೋಕೋವಿಚ್‌ ತಮ್ಮದಾಗಿಸಿಕೊಂಡಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

2025ರ ಅಂತ್ಯಕ್ಕೆ $ 5 ಟ್ರಿಲ್ಲಿಯನ್ ಆರ್ಥಿಕತೆ ಸಾಧಿಸಲಿದೆ ಭಾರತ- ಅಮಿತ್ ಶಾ

ಪ.ಬಂಗಾಳಕ್ಕೆ ಸಿಗುತ್ತಿಲ್ಲ ಕೇಂದ್ರದ ಅನುದಾನ- ಶೀಘ್ರವೇ ಪ್ರಧಾನಿ ಮೋದಿ ಭೇಟಿಯಾಗಲಿರುವ ದೀದಿ..!

ಪೊಲೀಸ್ ಠಾಣೆಯಲ್ಲಿ SI ಅಚಾತುರ್ಯ- ಮಹಿಳೆ ತಲೆಗೆ ಹೊಕ್ಕಿದ ಗುಂಡು..!

ರಾಡ್‌ ಲೆವರ್‌ ಅರೆನಾದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆರಂಭಿಕ ಫೇವರಿಟ್‌ ಆಗಿ ಕಣಕ್ಕಿಳಿದಿದ್ದ ಡೊಮಿನಿಕ್ ಥೀಮ್‌, ಮೊದಲ ಮೂರು ಸೆಟ್‌ಗಳ ಬಳಿಕ ಈ ನಿರೀಕ್ಷೆಗಳನ್ನು ಇನ್ನಷ್ಟು ಬಲಗೊಳಿಸಿದ್ದರು.

ಬಿಗ್‌-3 (ರೋಜರ್‌ ಫೆಡರರ್‌, ರಾಫೆಲ್ ನಡಾಲ್, ನೋವಾಕ್ ಜೋಕೋವಿಚ್‌) ಮೇಲಾಟಕ್ಕೊಂದು ಅಂತ್ಯ ಹಾಡಬಲ್ಲ ಸಮರ್ಥರಲ್ಲಿ ಒಬ್ಬರೆಂದು ಹೇಳಲಾದ ಆಸ್ಟ್ರಿಯಾದ 26ರ ಹರೆಯದ ಥೀಮ್‌, 4-6, 6-4 & 6-2 ರಲ್ಲಿ ಮೊದಲ ಮೂರು ಸೆಟ್‌ಗಳಲ್ಲಿ ಮುನ್ನಡೆ ಸಾಧಿಸಿದ್ದರು.

ಆದರೆ, ಇದೇ ಸಂದರ್ಭಕ್ಕೆಂದೇ ತಮ್ಮ ಅತ್ಯುತ್ತಮ ಆಟವನ್ನು ಕಾಯ್ದುಕೊಂಡಂತೆ ಕಂಡ ಜೋಕೋವಿಚ್‌ ತಾವೇಕೆ 16 ಗ್ರಾನ್ ಸ್ಲಾಮ್‌ಗಳ ಒಡೆಯ ಎಂದು ತೋರುವ ಆಟವನ್ನಾಡಿ, ಮಿಕ್ಕ ಎರಡು ಸೆಟ್‌ಗಳಲ್ಲಿ ಅದ್ಭುತ come back ಮಾಡಿ, 6-3, 6-4ರಲ್ಲಿ ಸತತ ಸೆಟ್‌ಗಳನ್ನು ಗೆಲ್ಲುವ ಮೂಲಕ, 5 ಸೆಟ್‌ಗಳ ಪಂದ್ಯವನ್ನು ರೋಚಕವಾಗಿ ತಮ್ಮದಾಗಿಸಿಕೊಂಡಿದ್ದಾರೆ.

ಒಂದು ನಿಮಿಷ ಕೊರೆ, ನಾಲ್ಕು ಗಂಟೆಗಳ ಕಾಲ ನಡೆದ ಈ ಕಾದಾಟದಲ್ಲಿ ಇಬ್ಬರೂ ಆಟಗಾರರ stamina, mental strength ಹಾಗೂ determinationಗಳನ್ನು ಪರೀಕ್ಷಿಸಿದ ಈ ಪಂದ್ಯದಲ್ಲಿ ಅಂತಿಮ ನಗೆ ಚೆಲ್ಲಿದ ಜೋಕೋವಿಚ್‌ ಆಸ್ಟ್ರೇಲಿಯಾ ಓಪನ್‌ ಫೈನಲ್‌ನಲ್ಲಿ ತಮ್ಮ ಅಜೇಯ ಓಟ ಮುಂದುವರೆಸಿದ್ದಲ್ಲದೇ, ಸ್ಪೇನ್‌ನ ರಾಫೆಲ್‌ ನಡಾಲ್‌ರನ್ನು ಹಿಂದಿಕ್ಕಿ ಪುರುಷರ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಿಯಾಗಿದ್ದಾರೆ.

ITF ಇತಿಹಾಸದಲ್ಲೇ ಅತ್ಯಂತ ಹೆಚ್ಚು, 20 ಗ್ರಾನ್‌ ಸ್ಲಾಂಗಳನ್ನು ಗೆದ್ದಿರುವ ಸ್ವಿಸ್‌ ಸೆನ್ಸೇಷನ್‌ ರೋಜರ್‌ ಫೆಡರರ್‌‌ ದಾಖಲೆಯ ಸರಿಗಟ್ಟಲು ಜೋಕೋವಿಚ್‌ಗೆ ಇನ್ನು ಮೂರು ಪ್ರಶಸ್ತಿಗಳು ಬೇಕಿವೆ. ಕಳೆದ 13 ಗ್ರಾನ್‌ ಸ್ಲಾಂಗಳ, ಪುರುಷ ಸಿಂಗಲ್ಸ್‌ ಪ್ರಶಸ್ತಿಗಳನ್ನು, ಜೋಕೋವಿಚ್‌, ಫೆಡರರ್‌ ಹಾಗೂ ನಡಾಲ್‌‌ರೇ ತಮ್ಮಲ್ಲೇ ಹಂಚಿಕೊಂಡಿದ್ದಾರೆ.

ಟೂರ್ನಿಯ ಕ್ವಾರ್ಟರ್‌ ಫೈನಲ್‌ ಹಾಗೂ ಸೆಮಿ ಫೈನಲ್‌ ಪಂದ್ಯಗಳಲ್ಲಿ ರಾಫೇಲ್ ನಡಾಲ್ ಹಾಗೂ ಅಲೆಕ್ಸಾಂಡರ್‌ ಝ್ವರೆವ್‌ರನ್ನು ಮಣಿಸಿ ಬಂದಿದ್ದ ಡೊಮಿನಿಕ್ ಥೀಮ್‌ ಪ್ರಶಸ್ತಿ ಸುತ್ತಿನ ರೋಚಕ ಘಟ್ಟದಲ್ಲಿ, ತಮಗಿಂತ ಸುಪೀರಿಯರ್‌ ರ್ಯಾಂಕ್‌ನ ಆಟಗಾರನ ಮುಂದೆ battle of temperamentನಲ್ಲಿ ಕೊಂಚ ಹಿನ್ನಡೆ ಕಂಡರೂ ಸಹ ಸಾಕಷ್ಟು ಭರವಸೆ ಮೂಡಿಸಿದ್ದಾರೆ.

ಡೊಮಿನಿಕ್ ಥೀಮ್‌ ಹಾಗೂ ಜರ್ಮನಿಯ ಅಲೆಕ್ಸಾಂಡರ್‌ ಝ್ವರೆವ್‌‌ ಈ ಬಿಗ್‌-3 ಪ್ರಾಬಲ್ಯದ ಕೋಟೆಯನ್ನು ಭೇದಿಸುವ ಲಕ್ಷಣಗಳನ್ನು ತೋರುತ್ತಿದ್ದು, 2020ರ ಮೊದಲಾರ್ಧದಲ್ಲಿ ಟೆನಿಸ್‌ ಲೋಕಕ್ಕೆ ಮತ್ತೆರಡು ಸೂಪರ್‌ ಸ್ಟಾರ್‌ಗಳ ಪರಿಚಯವಾಗಬಹುದು

RS 500
RS 1500

SCAN HERE

Pratidhvani Youtube

«
Prev
1
/
6246
Next
»
loading
play
Shashikumar : ಲೀಲಮ್ಮನ ಅಂತಿಮ ದರ್ಶನಕ್ಕೆ ಬಂದ ಶಶಿಕುಮಾರ್
play
DK Shivakumar : ಮೊನ್ನೆ ಕೊನೆ ಭೇಟಿ, ಲೀಲಾವತಿ ನನ್ನ ಮನೆಗೆ ಬಂದಿದ್ರು
«
Prev
1
/
6246
Next
»
loading

don't miss it !

ಇವತ್ತು ರಾತ್ರಿಯೇ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ
Top Story

ಇವತ್ತು ರಾತ್ರಿಯೇ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ

by Prathidhvani
December 4, 2023
2 ರಾಜ್ಯಗಳಲ್ಲಿ ಕಾಂಗ್ರೆಸ್, 2 ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ
Top Story

2 ರಾಜ್ಯಗಳಲ್ಲಿ ಕಾಂಗ್ರೆಸ್, 2 ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ

by Prathidhvani
December 3, 2023
200 ಕೋಟಿ ನೋಟುಗಳ ಜಪ್ತಿ ಬಗ್ಗೆ ಟ್ವೀಟಿಸಿ ಕಾಂಗ್ರೆಸ್‌ಗೆ ಕುಟುಕಿದ ಪ್ರಧಾನಿ ಮೋದಿ- ಇದೇ ಮೋದಿ ಗ್ಯಾರಂಟಿ..!
ದೇಶ

200 ಕೋಟಿ ನೋಟುಗಳ ಜಪ್ತಿ ಬಗ್ಗೆ ಟ್ವೀಟಿಸಿ ಕಾಂಗ್ರೆಸ್‌ಗೆ ಕುಟುಕಿದ ಪ್ರಧಾನಿ ಮೋದಿ- ಇದೇ ಮೋದಿ ಗ್ಯಾರಂಟಿ..!

by Prathidhvani
December 8, 2023
ರಜಪೂತ ನಾಯಕನ ಹತ್ಯೆ- ರಾಜಸ್ಥಾನ ಬಂದ್, ಕಾವೇರಿದ ಪ್ರತಿಭಟನೆ- BJPಗೆ ಎದುರಾಯ್ತು ಮೊದಲ ಸವಾಲು
ದೇಶ

ರಜಪೂತ ನಾಯಕನ ಹತ್ಯೆ- ರಾಜಸ್ಥಾನ ಬಂದ್, ಕಾವೇರಿದ ಪ್ರತಿಭಟನೆ- BJPಗೆ ಎದುರಾಯ್ತು ಮೊದಲ ಸವಾಲು

by Prathidhvani
December 6, 2023
CM ಸಿದ್ದರಾಮಯ್ಯ ಕಾರಿಗೆ ದಾರಿ ಮಾಡಿಕೊಡಲು ಕುಮಾರಸ್ವಾಮಿ ಕಾರು ಪಕ್ಕಕ್ಕೆ ನಿಲ್ಲಿಸಿದ ಪೊಲೀಸರು
ಕರ್ನಾಟಕ

CM ಸಿದ್ದರಾಮಯ್ಯ ಕಾರಿಗೆ ದಾರಿ ಮಾಡಿಕೊಡಲು ಕುಮಾರಸ್ವಾಮಿ ಕಾರು ಪಕ್ಕಕ್ಕೆ ನಿಲ್ಲಿಸಿದ ಪೊಲೀಸರು

by Prathidhvani
December 6, 2023
Next Post
ಜಮ್ಮು ಮತ್ತು ಕಾಶ್ಮೀರದಿಂದ ಜಿಯೋ ಚಾಟ್ ಹೊರಕ್ಕೆ

ಜಮ್ಮು ಮತ್ತು ಕಾಶ್ಮೀರದಿಂದ ಜಿಯೋ ಚಾಟ್ ಹೊರಕ್ಕೆ

ಐದು ಸ್ಮಾರಕಗಳ ಸಂರಕ್ಷಣೆಗೆ ಸಂಕಲ್ಪ

ಐದು ಸ್ಮಾರಕಗಳ ಸಂರಕ್ಷಣೆಗೆ ಸಂಕಲ್ಪ

ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸುವುದು ಸಂವಿಧಾನ ಉಲ್ಲಂಘನೆ ಅಲ್ಲವೇ?

ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸುವುದು ಸಂವಿಧಾನ ಉಲ್ಲಂಘನೆ ಅಲ್ಲವೇ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist