ದಿನೇ ದಿನೇ ರಾಜ್ಯ ರಾಜಧಾನಿಯಲ್ಲಿ ಓಮಿಕ್ರಾನ್ ಹೆಚ್ಚಳವಾಗುತ್ತಿದ್ದು, ರಾಜ್ಯದಲ್ಲಿ ಕಂಡುಬಂದ ಓಮಿಕ್ರಾನ್ ಸೋಂಕಿತರಲ್ಲಿ ಬಹುಪಾಲು ಬೆಂಗಳೂರಿನಲ್ಲೆ ಪತ್ತೆಯಾಗಿದ್ದು, ಇಂದು 165 ಹೊಸ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 931 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಪತ್ತೆಯಾಗಿರುವ ಒಟ್ಟು 931 ಕೇಸ್ ಓಮಿಕ್ರಾನ್ ಕೇಸ್ ಗಳ ಪೈಕಿ, ಬೆಂಗಳೂರು ನಗರ ಒಂದರಲ್ಲಿಯೇ 880 ಕೇಸ್ ಗಳು ದಾಖಲಾಗಿವೆ. ಉಳಿದ 51 ಓಮಿಕ್ರಾನ್ ಕೇಸ್ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕಂಡುಬಂದಿವೆ.
ಒಮಿಕ್ರಾನ್ ಸೋಂಕಿನ ಜೊತೆ ಜೊತೆಗೆ ಬೆಂಗಳೂರಿನಲ್ಲಿ ಕೊರೊನಾ ಮೂರನೇ ಅಲೆಯ ಆರ್ಭಟ ಜೋರಾಗಿದೆ. ಪ್ರತಿ ನಿತ್ಯ ರಾಜ್ಯ ರಾಜಧಾನಿಯಲ್ಲಿ 20 ಸಾವಿರಕ್ಕೂ ಹೆಚ್ಚು ಹೊಸ ಕೇಸ್ ಗಳು ಪತ್ತೆಯಾಗುತ್ತಿವೆ.