ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಗೂಡ್ಸ್ ರೈಲು ಹರಿದು ಮೃತಪಟ್ಟ 16 ವಲಸೆ ಕಾರ್ಮಿಕರು ಪ್ರಯಾಣದ ಪಾಸ್‌ಗಾಗಿ ಮಧ್ಯಪ್ರದೇಶ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಬಿಜೆಪಿ ಸರ್ಕಾರ ಈ ಕುರಿತು ಗಮನಹರಿಸಲಿಲ್ಲ ಎಂದು ಕಾಂಗ್ರೆಸ್ ಮುಖ್ಯಸ್ಥ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.
ದುರಂತದ ವೇಳೆ ಬದುಕುಳಿದ ಕಾರ್ಮಿಕರೊಬ್ಬರು ತಮ್ಮ ರಾಜ್ಯಗಳಿಗೆ ತೆರಳಲು ತಾವು ಪಾಸ್‌ಗೆ ಅರ್ಜಿ ಸಲ್ಲಿಸಿದ್ದೆವು ಎಂದು ಹೇಳಿಕೆ ನೀಡಿರುವ ವೀಡಿಯೊವೊಂದನ್ನು ಟ್ವೀಟ್ ಮಾಡಿರುವ ಕಾಂಗ್ರೆಸಿನ ಹಿರಿಯ ನಾಯಕ ಮಧ್ಯಪ್ರದೇಶ ಸರ್ಕಾರದ ಬೇಜವಾಬ್ದಾರಿ ಮತ್ತು ನಿಷ್ಕ್ರಿಯತೆಯೇ ಕಾರ್ಮಿಕರ ಸಾವಿಗೆ ಕಾರಣ, ಪಾಸ್‌ಗೆ ಅರ್ಜಿ ಸಲ್ಲಿಸಿದ ಬಳಿಕ ಮಧ್ಯ ಪ್ರದೇಶ ಸರ್ಕಾರ ಏನು ಕ್ರಮ ಕೈಗೊಂಡಿದೆಯೆಂದು ತನಿಖೆಯಾಗಬೇಕೆಂದು ಆಗ್ರಹಿಸಿದರು.

ಘಟನೆ ನಡೆಯುವ ಹದಿನೈದು ದಿನಗಳ ಹಿಂದೆಯೇ ಕಾರ್ಮಿಕರು ಪಾಸ್‌ಗಾಗಿ ಅರ್ಜಿ ಸಲ್ಲಿಸಿದ್ದರು, ಆವಾಗಲೇ ಪಾಸ್ ವಿತರಿಸಿದ್ದರೆ 16 ಕಾರ್ಮಿಕರ ಪ್ರಾಣ ಉಳಿಸಬಹುದಾಗಿತ್ತು. ಶಿವರಾಜ್ ಜೀ, ಈ ಸಾವು ಜಂಗಲ್ ರಾಜ್‌ನ ಪರಿಣಾಮ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಟ್ವೀಟ್ ಮಾಡಿದೆ.
ಶುಕ್ರವಾರ ಬೆಳಗಿನ ಜಾವ 20 ಮಂದಿಯಿದ್ದ ವಲಸೆ ಕಾರ್ಮಿಕರ ಗುಂಪಿನಲ್ಲಿ ದಣಿವಾರಿಸಲು ರೈಲು ಹಳಿಯ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ರೈಲು ಹರಿದು 16 ವಲಸೆ ಕಾರ್ಮಿಕರು ಅಸುನೀಗಿದ್ದರು. ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರ ಮೃತರ ಕುಟುಂಬಗಳಿಗೆ ಕ್ರಮವಾಗಿ 5 ಲಕ್ಷ ಮತ್ತು 10 ಲಕ್ಷ ಪರಿಹಾರವನ್ನು ಘೊಷಿಸಿದೆ.












