ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಸಾಂಗೆ ಭೇಟಿ ನೀಡುವ ಕೆಲವೇ ಘಂಟೆಗಳಿಗೂ ಮೊದಲ್ಲೇ ಇಲ್ಲಿನ ಆದಿವಾಸಿ ನ್ಯಾಷನಲ್ ಲಿಬರೇಷನ್ ಆರ್ಮಿ(ANLA)ಯ 13 ಜನರ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ.
ಅಸ್ಸಾಂನ ಬೊಕಾಜಾನ್ನಲ್ಲಿ ಪೊಲೀಸರು, ರೈಫಲ್ಸ್ ಹಾಗೂ ಸಿಆರ್ಪಿಎಫ್ನ 20ನೇ ಬೆಟಾಲಿಯನ್ ಮುಂದೆ ಶರಣಾಗಿರುವ ನಕ್ಸಲರು ಮುಖ್ಯವಾಹಿನಿಗೆ ಬರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವಾಸ್ ಶರ್ಮಾ ತಿಳಿಸಿದ್ದಾರೆ.
ಮೂರು ದಿನಗಳ ರಾಜ್ಯ ಪ್ರವಾಸವನ್ನ ಕೈಗೊಂಢಿರುವ ಕೇಂದ್ರ ಗೃ ಸಚಿವ ಅಮಿತ್ ಶಾ ಭಾರತ ಬಾಂಗ್ಲಾದೇಶ ಗಡಿ ಭಾಗವಾದ ಮಂಕಾಚಾರ್ನ ಗಡಿ ಭದ್ರತಾ ಪಡೆಯ ಹೊರಠಾಣೆಗೆ ಭೇಟಿ ನೀಡಲಿದ್ದಾರೆ. ಹಿಮಾಂತ ಬಿಸ್ವಾಸ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರವು ಒಂದು ವರ್ಷ ಪೂರೈಸಿದ ವಿಶೇಷಾರ್ಥ ಸಮಾವೇಶವನ್ನುದ್ದೇಶಿಸಿ ಶಾ ಭಾಷಣ ಮಾಡಲಿದ್ದಾರೆ.
2006ರಲ್ಲಿ ಅಸ್ಥಿತ್ವಕ್ಕೆ ಬಂದ ANLA ಅಸ್ಸಾಮಿನ ಚಹಾ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಹೋರಾಟ ಮಾಡಲಾಗುತ್ತಿದೆ. ಈ ಸಂಘಟನೆಯು ಮುಖ್ಯವಾಗಿ ಕರ್ಬಿ ಆಂಗ್ಲಾಂಗ್ ಹಾಗು ಗೋಲಾಘಾಟ್ ಜಿಲ್ಲೆಗಳಲ್ಲಿ ಆಳವಾಗಿ ನೆಲೆಯೂರಿದ್ದು ಈ ಹಿಂದೆ ಹಲವು ವಿದ್ವಂಸಕ ಕೃತ್ಯಗಳಲ್ಲಿ ಈ ಸಂಗಟನೆ ಭಾಗಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.