ಕಳೆದ ಎರಡು ದಿನಗಳಿಂದ ನಡೆದ ಪ್ರತ್ಯೇಕ ಘಟನೆಗಳಲ್ಲಿ 12 ಮಂದಿ ಮೃತಪಟ್ಟಿರುವ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಎರಡು ದಿನಗಳಿಂದ ಜವರಾಯ ಅಟ್ಟಹಾಸ ಮೆರೆಯುತ್ತಿದ್ದು ಇಲ್ಲಿಯವರೆಗೆ 12ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರದಿಂದ ಗುರುವಾರದವರೆಗೆ ನಡೆದ ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ 10 ಮಂದಿ ಮೃತಪಟ್ಟಿದ್ದು ಕೆರೆಗೆ ಹಾರಿ ಬಾಲಕ, ಕರಡಿ ದಾಳಿಗೆ ರೈತ ಬಲಿಯಾಗಿದ್ದಾರೆ.
ಈ ಮೂಲಕ ತುಕೂರು ಜಿಲ್ಲೆ ಸಾವಿನ ಮನೆಯಂತಾಗಿದ್ದು ಸರಣಿ ಸಾವಿಗೆ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ.
