ಹನ್ನೊಂದು ರಾಜ್ಯಗಳ 56 ವಿಧಾನಸಭಾ ಕ್ಷೇತ್ರ, ಒಂದು ಲೋಕಸಭೆ ಕ್ಷೇತ್ರ ಹಾಗೂ ಬಹುನಿರೀಕ್ಷಿತ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು (ನವೆಂಬರ್ 10) ಪ್ರಕಟವಾಗಲಿದೆ.
ಈ ಚುನಾವಣೆಗಳು ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳ ಪಾಲಿಗೆ ನಿರ್ಣಾಯಕವಾಗಲಿದೆ. ಕರೋನಾ ಸಾಂಕ್ರಾಮಿಕ ನಂತರ ನರೇಂದ್ರ ಮೋದಿಯ ವರ್ಚಸ್ಸು, ಎರಡನೇ ಅವಧಿಯ ಬಿಜೆಪಿ ಸರ್ಕಾರದ ಆಡಳಿತ ವೈಖರಿಯಲ್ಲಿ ಮತದಾರ ಅಸಮಾಧಾನಗೊಂಡಿದ್ದಾನೆಯೇ, ಪ್ರತಿಪಕ್ಷಗಳು ನಂಬಿಕೆ ಹುಟ್ಟಿಸಿದೆಯೇ ಎಂದು ಈ ಚುನಾವಣೆ ಫಲಿತಾಂಶ ಹೇಳಲಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಎರಡು ಕ್ಷೇತ್ರ ಸೇರಿದಂತೆ ದೇಶದ ಹನ್ನೊಂದು ರಾಜ್ಯಗಳಾದ್ಯಂತ 56 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಬಿಹಾರದಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆಯೊಂದಿಗೆ ಒಂದು ಲೋಕಸಭೆ ಕ್ಷೇತ್ರಕ್ಕೂ ಉಪಚುನಾವಣೆ ನಡೆದಿದೆ. ಈ ಎಲ್ಲಾ ಚುನಾವಣೆಗಳ ಫಲಿತಾಂಶ ಇಂದು ತಿಳಿಯಲಿದೆ.
ಬಿಹಾರ ವಿಧಾನಸಬೆ ಸಾರ್ವತ್ರಿಕ ಚುನಾವಣೆ
ದೇಶದ ಬಹುನಿರೀಕ್ಷಿತ ಉಪಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಮತದಾರ ಮಹಾಘಟಬಂಧನ್ ಮೈತ್ರಿಯನ್ನು ಬೆಂಬಲಿಸಿರುವುದಾಗಿ ಹೇಳುತ್ತಿದೆ. ಇನ್ನು ಕೆಲವು ಸಮೀಕ್ಷೆಗಳ ಪ್ರಕಾರ ಅತಂತ್ರ ಫಲಿತಾಂಶ ಬರಲಿದ್ದು, ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಾಬೀತು ಪಡಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತವೆ.
Also Read: ನಿತೀಶ್ ಕುಮಾರ್ ಮತ್ತು ಬಿಜೆಪಿಗೆ ನಿರ್ಣಾಯಕವಾಗಿರುವ ಬಿಹಾರ ಗೆಲುವು!
ಕರ್ನಾಟಕ ಉಪಚುನಾವಣೆ
ಬಹುನಿರೀಕ್ಷಿತ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭೆ ಕ್ಷೇತ್ರದ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಮೈತ್ರಿ ಸರ್ಕಾರ ಉರುಳಲು ಕಾರಣವಾದ ಕಾಂಗ್ರೆಸ್ ಶಾಸಕ ಮುನಿರತ್ನ ರಾಜಿನಾಮೆ ಹಾಗೂ ಶಿರಾ ಶಾಸಕ ಸತ್ಯನಾರಾಯಣ್ ಅಕಾಲಿಕ ನಿಧನದಿಂದಾಗಿ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ.
Also Read: ಬಿಹಾರ ಚುನಾವಣೋತ್ತರ ಸಮೀಕ್ಷೆ: ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗುವ ಸಾಧ್ಯತೆ
ಮಧ್ಯಪ್ರದೇಶ ಉಪಚುನಾವಣೆ
28 ಸ್ಥಾನಗಳೊಂದಿಗೆ, ಅತೀ ಹೆಚ್ಚು ಕ್ಷೇತ್ರಗಳಲ್ಲಿ ಮಧ್ಯಪ್ರದೇಶ ಉಪಚುನಾವಣೆ ಎದುರಿಸುತ್ತಿದೆ. ಚುನಾವಣಾ ಆಯೋಗದ (EC) ಪ್ರಕಾರ ಮಧ್ಯ ಪ್ರದೇಶದಲ್ಲಿ 66.37 ರಷ್ಟು ಮತದಾನವಾಗಿದೆ.
ಕಾಂಗ್ರೆಸ್ ವಿರುದ್ಧ ಜ್ಯೋತಿರಾಧಿತ್ಯ ಸಿಂಧಿಯಾ 22 ಶಾಸಕರೊಂದಿಗೆ ಬಂಡಾಯ ಎದ್ದ ನಂತರ ಕಮಲ್ ನಾಥ್ ಸರ್ಕಾರ ಪತನವಾಯಿತು.
Also Read: ಬಿಹಾರ ಚುನಾವಣೆ: ಕೊನೆ ಹಂತದಲ್ಲಿ ರಾಜಕೀಯ ನಿವೃತ್ತಿಯ ದಾಳ ಪ್ರಯೋಗಿಸಿದ ನಿತೀಶ್!
ಉತ್ತರ ಪ್ರದೇಶ ಉಪಚುನಾವಣೆ
ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ 7 ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು, 88 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಚುನಾವಣಾ ಆಯೋಗದ ಪ್ರಕಾರ 51.57 ಶೇಕಡಾ ಮತದಾನ ನಡೆದಿದೆ.
ಗುಜರಾತ್ ಉಪಚುನಾವಣೆ
ಗುಜರಾತಿನಲ್ಲಿ 8 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. 81 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಶಾಸಕರ ರಾಜಿನಾಮೆಯೊಂದಿಗೆ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ಅವರಲ್ಲಿ ಐದು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿಕೊಂಡಿದ್ದಾರೆ.
ಒಡಿಸ್ಸಾ ಉಪಚುನಾವಣೆ
ತಿರ್ತೊಲ್ ಮತ್ತು ಬಾಲಸೋರ್ ಸದರ್ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿದೆ. ಜೂನ್ನಲ್ಲಿ ಬಿಜೆಪಿ ಶಾಸಕ ಮದನ್ ಮೋಹನ್ ದತ್ತಾ ಅವರ ಮರಣದಿಂದ ಬಾಲಸೋರ್ನಲ್ಲಿ ಉಪಚುನಾವಣೆ ಅನಿವಾರ್ಯವಾಗಿದ್ದರೆ, ಜುಲೈನಲ್ಲಿ ಹಿರಿಯ ದಲಿತ ಮುಖಂಡರಾದ ಬಿಜೆಡಿಯ ಬಿಷ್ಣು ಚರಣ್ ದಾಸ್ ಅವರ ಮರಣದಿಂದ ತಿರ್ತೊಲ್ ಕ್ಷೇತ್ರದಲ್ಲಿ ಉಪಚುನಾವಣೆ ಅನಿವಾರ್ಯವಾಯಿತು. ಚುನಾವಣಾ ಆಯೋಗ ಅಂಕಿಅಂಶಗಳ ಪ್ರಕಾರ ಉಪಚುನಾವಣೆಗಳಲ್ಲಿ ಶೇಕಡಾ 68.08 ರಷ್ಟು ಮತದಾನವಾಗಿದೆ.
Also Read: ಉಪಚುನಾವಣೆ ಬಳಿಕ ಮಂತ್ರಿಮಂಡಲ ವಿಸ್ತರಣೆ – ಬಿ ಎಸ್ ಯಡಿಯೂರಪ್ಪ ಸ್ಪಷ್ಟನೆ
ಜಾರ್ಖಂಡ್ ಉಪಚುನಾವಣೆ
ಡುಮ್ಕಾ, ಮತ್ತು ಬರ್ಮೊ ಎರಡು ಸ್ಥಾನಗಳ ಸ್ಪರ್ಧೆಯಲ್ಲಿ ಒಟ್ಟು 28 ಅಭ್ಯರ್ಥಿಗಳು ಕಣದಲ್ಲಿದ್ದರು, ಇದು ಆಡಳಿತಾರೂಢ JMM -ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ನೇರ ಹಣಾಹಣಿಯಾಗಿದೆ. ಎರಡು ಸ್ಥಾನಗಳಿಗೆ ರಾಜ್ಯದಲ್ಲಿ ಶೇಕಡಾ 62.51 ರಷ್ಟು ಮತದಾನವಾಗಿದೆ.
ನಾಗಾಲ್ಯಾಂಡ್
ಕೊಹಿಮಾ ಜಿಲ್ಲೆಯ ದಕ್ಷಿಣ ಅಂಗಮಿ ವಿಧಾನಸಭಾ ಸ್ಥಾನ ಮತ್ತು ಕಿಫೈರ್ ಜಿಲ್ಲೆಯ ಪುಂಗ್ರೊ-ಕಿಫೈರ್ ಸ್ಥಾನಕ್ಕೆ ಉಪಚುನಾವಣೆ ನಡೆಯಿತು. ವಿಧಾನಸಭಾ ಸ್ಪೀಕರ್ ವಿಖೋ-ಒ ಯೋಶು ಮತ್ತು ನಾಗ ಪೀಪಲ್ಸ್ ಫ್ರಂಟ್ನ ಟಿ ಟೊರೆಚು ಅವರ ಸಾವುಗಳಿಂದ ಉಪಚುನಾವಣೆ ಅಗತ್ಯವಾಗಿತ್ತು. ಈ ಎರಡು ಸ್ಥಾನಗಳಲ್ಲಿ ಶೇಕಡಾ 83.69 ರಷ್ಟು ಮತದಾನವಾಗಿದೆ.
Also Read: ಉಪಚುನಾವಣೆ; ರಾಜ್ಯದಲ್ಲಿ ಕಾವೇರಿದ ರಾಜಕೀಯ ಚಟುವಟಿಕೆ
ಮಣಿಪುರ
ಎರಡು ವಿಧಾನಸಭಾ ಕ್ಷೇತ್ರಗಳಾದ ಲಿಲಾಂಗ್ ಮತ್ತು ವಾಂಗ್ಜಿಂಗ್ ಟೆಂಥಾದಲ್ಲಿ ಉಪಚುನಾವಣೆ ಎದುರಿಸಿತು. ಚುನಾವಣಾ ಆಯೋಗವು ಆರಂಭದಲ್ಲಿ ರಾಜ್ಯದ ಐದು ವಿಧಾನಸಭಾ ಕ್ಷೇತ್ರಗಳನ್ನು “ಸ್ಪಷ್ಟ ಖಾಲಿ” ಎಂದು ಘೋಷಿಸಿತ್ತು, ಆದರೆ ಚುನಾವಣಾ ವೇಳಾಪಟ್ಟಿಯನ್ನು ಕೇವಲ ಎರಡಕ್ಕೆ ಮಾತ್ರ ಘೋಷಿಸಿತು, ವಾಂಗೋಯಿ, ಸೈತು ಮತ್ತು ಸಿಂಘಾಟ್ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆಯನ್ನು ಬಿಟ್ಟುಬಿಟ್ಟಿತು.
ತೆಲಂಗಾಣ
ತೆಲಂಗಾಣದಲ್ಲಿ 1 ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಈ ವರ್ಷದ ಆಗಸ್ಟ್ನಲ್ಲಿ ಆರೋಗ್ಯ ಸಮಸ್ಯೆಗಳಿಂದಾಗಿ ಮೃತಪಟ್ಟ ಟಿಆರ್ಎಸ್ ಶಾಸಕ ಸೊಲಿಪೇಟಾ ರಾಮಲಿಂಗ ರೆಡ್ಡಿ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದೆ.
Also Read: ಉಪಚುನಾವಣೆ: ಕಾಂಗ್ರೆಸ್ ʼಕೈʼ ಹಿಡಿಯುವುದೇ ಡಿಕೆಶಿ ಜಾತಿ ಲೆಕ್ಕಾಚಾರ?
ಹರಿಯಾಣ ಉಪಚುನಾವಣೆ
ಹರಿಯಾಣದ ಬರೋಡಾ ವಿಧಾನ ಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸರಾಸರಿ 68 ಪ್ರತಿಶತದಷ್ಟು ಮತದಾನವಾಗಿದೆ. ಸುಮಾರು 1.81 ಲಕ್ಷ ನೋಂದಾಯಿತ ಮತದಾರರನ್ನು ಹೊಂದಿರುವ ಬರೋಡಾ ವಿಧಾನ ಸಭೆ ಕ್ಷೇತ್ರಕ್ಕೆ ಒಲಿಂಪಿಯನ್ ಕುಸ್ತಿಪಟು ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಯೋಗೇಶ್ವರ ದತ್ ಸೇರಿದಂತೆ 14 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. 2009, 2014 ಮತ್ತು 2019 ರ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರು ಬಾರಿ ಗೆದ್ದಿದ್ದ ಕಾಂಗ್ರೆಸ್ ಶಾಸಕ ಕ್ರಿಶನ್ ಹೂಡ ಅವರ ನಿಧನದ ನಂತರ ಈ ಸ್ಥಾನ ಖಾಲಿಯಾಗಿತ್ತು.
Also Read: ಉಪಚುನಾವಣೆ ಅನರ್ಹರಿಗಷ್ಟೇ ಅಲ್ಲ, ಬಿಎಸ್ ವೈ, ಸಿದ್ದುಗೂ ಪ್ರತಿಷ್ಠೆಯ ಪ್ರಶ್ನೆ
ಬಿಹಾರ ಲೋಕಸಭಾ ಉಪಚುನಾವಣೆ
ಬಿಹಾರದ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರದ ಉಪಚುನಾವನೆಯು ನವೆಂಬರ್ 7 ರಂದು ರಾಜ್ಯದ ಮೂರನೇ ಹಂತದ ವಿಧಾನಸಭಾ ಚುನಾವಣೆಯೊಂದಿಗೆ ನಡೆಯಿತು. ಫೆಬ್ರವರಿಯಲ್ಲಿ ಜೆಡಿಯು ಸಂಸದ ಬೈದ್ಯನಾಥ್ ಪ್ರಸಾದ್ ಮಹತೋ ಅವರ ನಿಧನದ ನಂತರ ವಾಲ್ಮೀಕಿ ನಗರ ಸ್ಥಾನದಲ್ಲಿ ಉಪಚುನಾವಣೆ ಅಗತ್ಯವಾಗಿತ್ತು. ಆರು ವಿಧಾನಸಭಾ ಸ್ಥಾನಗಳನ್ನು ಒಳಗೊಂಡಿರುವ ವಾಲ್ಮೀಕಿ ನಗರ ಕ್ಷೇತ್ರದಲ್ಲಿ ಶೇ 58.66 ರಷ್ಟು ಮತದಾನವಾಗಿದೆ.