ತ್ರಿಪುರಾದ ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ಬಿಜೆಪಿಯ 9 ಶಾಸಕರು ಹಾಗು ಮಿತ್ರ ಪಕ್ಷವಾದ ಇಂಡಿಜಿನಸ್ ಫೀಪಲ್ ಫ್ರಂಟ್ ಆಫ್ ತ್ರಿಪುರಾದ(IPFT) 2 ಶಾಸಕರು ಸೇರಿದಂತೆ ಒಟ್ಟು 11 ಮಂದಿ ಶಾಸಕರು ಸೋಮವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ಸರಳ ಸಮಾರಂಭದಲ್ಲಿ ರಾಜ್ಯಪಾಲರಾದ ಎಸ್ ಎನ್ ಆರ್ಯ ನೂತನ ಸಚಿವರಿಗೆ ಪ್ರಮಾಣ ವಚನ ಭೋಧಿಸಿದ್ದರು. ಸಿಎಂ ಮಾಣಿಕ್ ಸಾಹಾ, ಮಾಜಿ ಮುಖಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ಈ ಹಿಂದೆ ಬಿಪ್ಲಬ್ ಸಂಪುಟದಲ್ಲಿದ್ದ ಎಲ್ಲರಿಗು ಹೊಸ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಪಿಎಫ್ಟಿಯ ಮೇವರ್ ಕುಮಾರ ಜಮಾತಿಯರನ್ನು ಕೈ ಬಿಡಲಾಗಿದೆ.
ರಾಜ್ಯ ರಾಜಕಾರಣದಲ್ಲಿ ನಡೆದ ಮಹತ್ವದ ಬೆಳವಣಿಗೆಯಲ್ಲಿ ಬಿಪ್ಲಬ್ ಕುಮಾರ್ ದೇವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆ ನಂತರ 2016ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಣಿಕ್ ಸಾಹಾರನ್ನು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಯಾಗಿ ಘೋಷಿಸಿತ್ತು.