
ಬೆಂಗಳೂರಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ ನಡೆದಿದೆ. ಟೆಕ್ನೊವಾ ಟೇಪ್ಸ್ ಕಂಪನಿಯಲ್ಲಿ(Technova Tapes Company) ಬೆಂಕಿ ಅವಘಡ(Fire Accident) ನಡೆದಿದ್ದು, ಶಾರ್ಟ್ ಸರ್ಕ್ಯೂಟ್(Short Circuit)ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬೆಳ್ಳಗ್ಗೆ ಸುಮಾರು 9:45 ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಆ ಸಮಯಕ್ಕಾಗಲೇ ಸುಮಾರು 500 ಜನ ಕೆಲಸಗಾರರು ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವಘಡ ಸಂಭವಿಸುತ್ತಿದ್ದಂತೆ ಹೊರಗೆ ಓಡಿ ಬಂದ ಕಾರ್ಮಿಕರು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

8ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು(Fire Trucks) ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಲಾಗ್ತಿದೆ. ಆದರೂ ಬೆಂಕಿ ನಿಯಂತ್ರಕ್ಕೆ ಸಿಗ್ತಿಲ್ಲ. ಒಂದೊಂದೆ ಸಿಲಿಂಡರ್ಗಳು(Cylinder) ಸ್ಫೋಟ ಆಗ್ತಿದ್ದು, ನೀರಿನ ಜೊತೆ ಪಾಮ್ ಬಳಸಿ ಬೆಂಕಿ ನಂದಿಸಲು ಹರಸಾಹಸ ಮಾಡಲಾಗ್ತಿದೆ. ಸುಮಾರು 16 ಬ್ಯಾರೆಲ್ಗಳಲ್ಲಿ ಸಾಲ್ವೆಂಟ್ ಕೆಮಿಕಲ್(Solvent Chemical) ಸಂಗ್ರಹ ಮಾಡಲಾಗಿತ್ತು. ಸಾಲ್ವೆಂಟ್ ಪೆಟ್ರೋಲಿಯಂ ಕೆಮಿಕಲ್(Petroleum Chemical) ಆದ್ದರಿಂದ ಪಾಮ್ ಸಿಂಪಡಿಸಿದರು ನಿಯಂತ್ರಣಕ್ಕೆ ಸಿಗ್ತಿಲ್ಲ.

ಕಾರ್ಖಾನೆಗೆ ಬೆಂಕಿ ಬಿದ್ದ ವಿಚಾರ ತಿಳಿದ ಆನೇಕಲ್ ತಹಶಿಲ್ದಾರ್ ಶಶಿಧರ್ ಮಾಡ್ಯಾಳ್(Shasidar Madkal) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ಸಂಘದ ಅಧ್ಯಕ್ಷ ಪ್ರಸಾದ್ ಕೂಡ ಪರಿಶೀಲನೆ ನಡೆಸಿದ್ದಾರೆ. ಅರವಿಂದ್ ರಾವ್ ಎಂಬುವವರಿಗೆ ಸೇರಿದ ಕಾರ್ಖಾನೆ ಇದಾಗಿದ್ದು, ಅಗ್ನಿ ಅವಘಡದಿಂದ ಕೋಟ್ಯಾಂತರ(Crore) ರೂಪಾಯಿ ನಷ್ಟ ಉಂಟಾಗಿದೆ ಎನ್ನಲಾಗಿದೆ. ಕಾರ್ಖಾನೆ ಆಡಳಿತ ಮಂಡಳಿ ಸುರಕ್ಷತೆ ಬಗ್ಗೆ ಒತ್ತು ಕೊಟ್ಟಿರುವುದು ಕಂಡು ಬಂದಿದೆ.

ಕೆಮಿಕಲ್(Chemical) ಮಿಶ್ರಿತ ಹೊಗೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಕಾರಣಕ್ಕೆ ಅಗ್ನಿ ಅವಘಡ ನಡೆದ ಪ್ರದೇಶದಲ್ಲಿ ಹೈ ಅಲರ್ಟ್(Alert) ಘೋಷಣೆ ಮಾಡಲಾಗಿದೆ. ನೂರು ಮೀಟರ್ ವ್ಯಾಪ್ತಿಯಲ್ಲಿ ಕಾರ್ಮಿಕರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಮಾಸ್ಕ್ ಧರಿಸುವಂತೆ ಆನೇಕಲ್ ತಹಶಿಲ್ದಾರ್ ಮನವಿ ಮಾಡಿದ್ದಾರೆ. ಕ್ಷಣ ಕ್ಷಣಕ್ಕೂ ಕೆಮಿಕಲ್ ಬ್ಯಾರೆಲ್ಗಳು ಸ್ಫೋಟ ಆಗ್ತಿದ್ದು, ಸ್ಫೋಟದ ಜೊತೆಗೆ ಕೆಟ್ಟ ಹೊಗೆ ಹೊರ ಬರುತ್ತಿದೆ. ಇಡೀ ಏರಿಯಾದಲ್ಲಿ(Area) ಕೆಟ್ಟ ಹೊಗೆ ಅವರಿಸುತ್ತಿದೆ. ಉಸಿರಾಟದ ತೊಂದರೆ, ಚರ್ಮದ ಸಮಸ್ಯೆ(Skin Problem) ಉಲ್ಬಣ ಆಗುವ ಸಾಧ್ಯತೆ ಇದೆ ಎಂದು ಕೈಗಾರಿಕೆಗಳ ಆಡಳಿತ ಮಂಡಳಿಗಳಿಗೂ ಎಚ್ಚರಿಕೆ ನೀಡಲಾಗಿದೆ.










