ಪ್ರಜ್ವಲ್ (prajwal revanna) ಪೆನ್‌ಡ್ರೈವ್ (Pendrive) ಕೇಸ್‌ನಲ್ಲಿ ಡಿ.ಕೆ ಶಿವಕುಮಾರ್ (Dk shivakumar) ವಿರುದ್ಧ ವಕೀಲ ದೇವರಾಜೇಗೌಡ (Devarajegowda) 100 ಕೋಟಿ ಬಾಂಬ್ ಹಾಕಿದ ಬೆನ್ನಲ್ಲೇ ಬಿಜೆಪಿ (BJP) ನಾಯಕರು ಕಾಂಗ್ರೆಸ್ (Congress) ವಿರುದ್ಧ ಕೆರಳಿ ಕೆಂಡವಾಗಿದ್ದಾರೆ. ದಿನೇ ದಿನೇ ಹೊಸ ಹೊಸ ವಿಷಯಗಳು ಹೊರಗೆ ಬರ್ತಿವೆ. SIT ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ. ಈ ಪ್ರಕರಣವನ್ನ ಸಿಬಿಐಗೆ ವಹಿಸ್ಬೇಕು ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಆಗ್ರಹ ಮಾಡಿದ್ದಾರೆ.
ಪೆನ್‌ಡ್ರೈವ್ ವಿಚಾರವಾಗಿ ಮಾತಾಡಿದ ಮಾಜಿ ಸಿಎಂ ಡಿ.ವಿ ಸದಾನಂದ ಗೌಡ (DV sadananda gowda) ಪೆನ್‌ಡ್ರೈವ್ ಪ್ರಕರಣವನ್ನ ಸಿಬಿಐ (CBI) ಅಥವಾ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ದೇವರಾಜೇಗೌಡ ಆರೋಪದ ಬಗ್ಗೆ ನಾನಾಗಲಿ, ಪಕ್ಷದವರಾಗಲಿ ಮಧ್ಯಪ್ರವೇಶ ಮಾಡಲ್ಲ ಎಂದಿದ್ದಾರೆ.
ಈ ನಡುವೆ ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ವಕೀಲ ದೇವರಾಜೇಗೌಡರನ್ನ 1 ದಿನ ವಶಕ್ಕೆ ಪಡೆದಿದ್ದ SIT ಪೊಲೀಸರು, ನಿನ್ನೆ ಇಡೀ ದಿನ ತನಿಖೆ ಮಾಡಿದ್ದಾರೆ. ಇಂದು ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು, 42 ನೇ ಎಸಿಎಂಎಂ ನ್ಯಾಯಾಧೀಶರ (ACMM court) ಮುಂದೆ ಹಾಜರು ಮಾಡಿದ್ದಾರೆ. ಟ್ರಾನ್ಸಿಸ್ಟ್ ವಾರೆಂಟ್ ಮೇಲೆ ಕಸ್ಟಡಿಗೆ ಪಡೆದಿದ್ದ ಎಸ್‌ಐಟಿ ಟೀಂ, ಇದೀಗ ಮತ್ತೆ 2 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದೆ.