• Home
  • About Us
  • ಕರ್ನಾಟಕ
Saturday, November 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಹೆಚ್1ಬಿ ವೀಸಾ ರದ್ದು ಮಾಡಿದ ಅಮೆರಿಕ; ಭಾರತದ ಆರ್ಥಿಕತೆಗೆ ಮತ್ತೊಂದು ಬರೆ

by
June 24, 2020
in ದೇಶ
0
ಹೆಚ್1ಬಿ ವೀಸಾ ರದ್ದು ಮಾಡಿದ ಅಮೆರಿಕ; ಭಾರತದ ಆರ್ಥಿಕತೆಗೆ ಮತ್ತೊಂದು ಬರೆ
Share on WhatsAppShare on FacebookShare on Telegram

ಭಾರತೀಯ ಐಟಿ ವೃತ್ತಿಪರರಲ್ಲಿ ಜನಪ್ರಿಯವಾಗಿರುವ ಹೆಚ್ -1 ಬಿ ವೀಸಾಗಳ ವಿತರಣೆಯೂ ಸೇರಿದಂತೆ ಎಲ್ಲಾ ವಿದೇಶಿ ವೃತ್ತಿಪರ ವೀಸಾಗಳ ವಿತರಣೆಯನ್ನು ಅಮಾನತುಗೊಳಿಸುವುದಾಗಿ ಇಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದರೊಂದಿಗೆ ಭಾರತದ ಅತಿದೊಡ್ಡ ಉದ್ಯೋಗದಾತ ರಾಷ್ಟ್ರವಾಗಿದ್ದ ಅಮೆರಿಕದಲ್ಲಿ ಭಾರತದ ಲಕ್ಷಾಂತರ ಐಟಿ ವೃತ್ತಿಪರರು ನಿರುದ್ಯೋಗಿಗಳಾದಂತಾಗಿದೆ.

ADVERTISEMENT

ಇಲ್ಲಿ ನಿಜವಾದ ತರ್ಕ ಇರುವುದು ಅಮೆರಿಕ ಹೆಚ್1 ಬಿ ವೀಸಾವನ್ನು ಅಮಾನತುಗೊಳಿಸಿರುವುದಲ್ಲ ಬದಲಾಗಿ ಇಂದು ವಿಶ್ವದ ಅತಿದೊಡ್ಡ ಶ್ರೀಮಂತ ರಾಷ್ಟ್ರ ವಿಶ್ವದ ದೊಡ್ಡಣ್ಣ ಅಮೆರಿಕದ ಇಂದು ಆಡಿರುವ ಆ ಒಂದು ಮಾತು.

ಹೌದು…! ಹೆಚ್1ಬಿ ವೀಸಾವನ್ನು ಅಮಾನತುಗೊಳಿಸಿದ ಬೆನ್ನಿಗೆ ಇಂದು ಪ್ರಕಟಣೆ ಹೊರಡಿಸಿರುವ ಶ್ವೇತಭವನ, “ವಿಶ್ವದ ಐಟಿ ವೃತ್ತಿಪರರಿಗೆ ಅನುಕೂಲವಾಗುತ್ತಿದ್ದ ಎಚ್ -1 ಬಿ ಮತ್ತು ಎಲ್ 1 ಸೇರಿದಂತೆ ವಿದೇಶಿ ಕೆಲಸದ ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಇದರಿಂದ ಅಮೆರಿಕದಲ್ಲಿ 5,25,000 ಉದ್ಯೋಗಗಳು ಮುಕ್ತವಾಗಿದೆ” ಎಂಬ ಹೇಳಿಕೆಯೊಂದನ್ನು ನೀಡಿದೆ.

ಅಮೆರಿಕದ ಶ್ವೇತಭವನ ಹೀಗೊಂದು ಹೇಳಿಕೆ ನೀಡಿದೆ ಎಂದರೆ ಕರೋನಾದಂತಹ ಸಾಂಕ್ರಾಮಿಕ ವೈರಸ್ ಅಮೆರಿಕದಂತಹ ದೇಶವನ್ನು ಹೇಗೆ ಹಿಂಡಿ ಹಿಪ್ಪೆ ಮಾಡಿದೆ? ಅಮೆರಿದಲ್ಲೂ ನಿರುದ್ಯೋಗ ಯಾವ ಹಂತ ತಲುಪಿದೆ? ಎಂಬುದನ್ನು ತಿಳಿಯಬಹುದು. ಇನ್ನು ಇದರಿಂದ ಭಾರತಕ್ಕಾಗುವ ನಷ್ಟವೇನು? ಭಾರತದ ಐಟಿ ಉದ್ಯೋಗಿಗಳ ಕಥೆ ಏನು? ಎಂಬುದು ಇದೀಗ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಆ ಕುರಿತು ವಿವರ ಇಲ್ಲಿದೆ.

ವಿಶ್ವದ ಆರ್ಥಿಕತೆಯನ್ನೇ ಕುಗ್ಗಿಸಿದ ಕರೋನಾ;

ಕರೋನಾ ವಿಶ್ವದ ಆರ್ಥಿಕತೆಯನ್ನೇ ನಡುಗಿಸಿದೆ. ಪೂರ್ವದಲ್ಲಿ ಚೀನಾದಿಂದ ಪಶ್ಚಿಮದಲ್ಲಿ ಅಮೆರಿಕ ಖಂಡದವರೆಗೆ ಎಲ್ಲಾ ದೇಶಗಳನ್ನೂ ಇದೀಗ ಕರೋನಾ ಬಿಟ್ಟೂ ಬಿಡದೆ ಕಾಡುತ್ತಿದೆ. ಪರಿಣಾಮ ವಿಶ್ವದ ಆರ್ಥಿಕತೆಯೇ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಇನ್ನೂ ನಿರುದ್ಯೋಗವಂತು ಎಲ್ಲೆಡೆ ತಾಂಡವವಾಡುತ್ತಿದೆ.

ಕರೋನಾ ಮತ್ತು ಅದರಿಂದ ಉಂಟಾದ ಲಾಕ್‌ಡೌನ್ ಕಾರಣಕ್ಕೆ ಈವರೆಗೆ ಭಾರತ ದಿನಕ್ಕೆ 35,000 ಕೋಟಿ ನಷ್ಟ ಅನುಭವಿಸುತ್ತಿದೆ. 3 ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದ್ದ ಭಾರತದ ಆರ್ಥಿಕತೆ ಇದೀಗ 2 ಟ್ರಿಲಿಯನ್‌ನತ್ತ ಹಿಮ್ಮುಖವಾಗಿ ಚಲಿಸುತ್ತಿದೆ. ಇನ್ನೂ ಕೊರೋನಾದಿಂದಾಗಿ ವಿಶ್ವದ ಆರ್ಥಿಕತೆಗೆ ಎಷ್ಟು ನಷ್ಟ? ಎಂಬುದನ್ನು ಖಚಿತವಾಗಿ ಲೆಕ್ಕಾಚಾರ ಮಾಡಲಾಗಿಲ್ಲ. ಆದರೆ, ಸಣ್ಣ ಪ್ರಮಾಣದ ಆರ್ಥಿಕತೆ ಹೊಂದಿರುವ ರಾಷ್ಟ್ರಗಳು ಈ ಹೊಡೆತದಿಂದ ಚೇತರಿಸಿಕೊಳ್ಳಲು ಕನಿಷ್ಟ 10 ವರ್ಷ ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

ಅಸಲಿಗೆ ಅಮೆರಿಕವನ್ನು ವಿಶ್ವದ ಉದ್ಯೋಗದಾತ ದೇಶ ಎನ್ನಲಾಗುತ್ತದೆ. ಭಾರತ ಚೀನಾ ಸೇರಿದಂತೆ ತೃತೀಯ ರಾಷ್ಟ್ರಗಳ ಅಪಾರ ಸಂಖ್ಯೆಯ ತಂತ್ರಜ್ಞರು ಪ್ರತಿದಿನ ಅಮೆರಿಕಾಗಾಗಿ ವಿಶ್ವದೆಲ್ಲೆಡೆಯಿಂದ ದುಡಿಯುತ್ತಿದ್ದಾರೆ. ಹೆಚ್1ಬಿ ವೀಸಾ ಮೂಲಕ ಅಮೆರಿಕಕ್ಕೆ ತೆರಳಿ ದುಡಿಯುವ ವರ್ಗ ಒಂದೆಡೆಯಾದರೆ, ಭಾರತದಿಂದಲೇ ಅಮೆರಿಕದ ವಿವಿಧ ಕಂಪೆನಿಗಳಿಗಾಗಿ ದುಡಿಯುವ ವರ್ಗ ಮತ್ತೊಂದು.

ಆದರೆ, ಇದೀಗ ಅಮೆರಿಕದ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಹೀಗಾಗಿ ಅಮೆರಿಕದ ಉದ್ಯೋಗ ಅಮೆರಿಕನ್ನರಿಗೆ ಎಂದು ವಿಶ್ವದ ದೊಡ್ಡಣ್ಣ ಹೊಸ ರಾಗ ತೆಗೆಯುತ್ತಿದೆ ಎಂದರೆ ಕರೋನಾ ಸೋಂಕಿನಿಂದ ಅಮೆರಿಕದಲ್ಲಿ ಎಂತಹಾ ನಿರುದ್ಯೋಗ ಸಮಸ್ಯೆ ತಲೆದೋರಿದೆ ಎಂಬುದನ್ನು ಊಹಿಸಬಹುದು. ಆದರೆ, ಅಮೆರಿಕದಲ್ಲಿ ವಲಸೆ ಕಾರ್ಮಿಕರ ಕುರಿತು ಅಮೆರಿಕ ದ್ವನಿ ಎತ್ತಿದ್ದು ಇದೇ ಮೊದಲೇನಲ್ಲ.

ವಲಸಿಗರ ವಿರೋಧಿಯಾದ ಟ್ರಂಪ್:

ಅಮೆರಿಕ ಹೆಚ್1ಬಿ ವೀಸಾ ಅಮಾನತುಗೊಳಿಸಿದ ಬೆನ್ನಿಗೆ ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್ “ಕಣ್ಣಿಗೆ ಕಾಣದ ಶತ್ರುವಿನ ದಾಳಿಯ ಸಂದರ್ಭದಲ್ಲಿ ನಮ್ಮ ಶ್ರೇಷ್ಠ ಅಮೆರಿಕ ನಾಗರಿಕರ ಉದ್ಯೋಗಗಳನ್ನು ರಕ್ಷಣೆ ಮಾಡಲು ಅಮೆರಿಕಾಕ್ಕೆ ಬರುವ ವಲಸೆಯನ್ನು ನಿರ್ಬಂಧಿಸುವ ಕಾರ್ಯಾದೇಶಕ್ಕೆ ಸಹಿ ಹಾಕುತ್ತಿದ್ದೇನೆ” ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಅಸಲಿಗೆ ಅಮೆರಿಕಾದಲ್ಲಿ ಬಲಪಂಥೀಯ ರಿಪಬ್ಲಿಕನ್ ಪಕ್ಷ ಅಧಿಕಾರಕ್ಕೆ ಬಂದಾಗಿಲಿಂದಲೂ ಉದ್ಯೋಗಕ್ಕೆ ವಲಸೆ ಬರುವುದನ್ನು ನಿಷೇಧಿಸುವುದರ ಬಗ್ಗೆ ಡೊನಾಲ್ಡ್ ಟ್ರಂಪ್ ಸರ್ಕಾರ ಮಾತನಾಡುತ್ತಲೇ ಇತ್ತು. ನಿರಾಶ್ರಿತರಿಗೆ ವೀಸಾ ಕೊಡುವುದಕ್ಕೆ ಹೆಚ್ಚಿನ ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತಲ್ಲದೆ, ದಾಖಲೆಗಳಿಲ್ಲದೆ ವಲಸೆ ಬಂದಿದ್ದವರ ಮೇಲೆ ಹದ್ದಿನ ಕಣ್ಣು ಇಟ್ಟಿತ್ತು. ಈಗ ಜಾಗತಿಕ ಸಾಂಕ್ರಾಮಿಕದ ಕಾರಣ ನೀಡಿ ವಲಸೆಯನ್ನು ಇನ್ನಷ್ಟು ಬಿಗಿ ಮಾಡಲು ಟ್ರಂಪ್ ಮುಂದಾಗಿದ್ದಾರೆ.

ಈಗಾಗಲೇ ಕಾನೂನುಬಾಹಿರ ವಲಸೆ ತಡೆಯಲು ಕೆಲವು ಗಡಿಗಳಲ್ಲಿ ಗೋಡೆ ಕಟ್ಟಿರುವಂತೆಯೇ, ಇನ್ನು ಮುಂದೆ ಈ ಕಾರ್ಯಾದೇಶ ಜಾರಿಗೆ ಬಂದ ನಂತರ ಕಾನೂನಾತ್ಮಕ ವಲಸೆಯ ಅರ್ಜಿಗಳನ್ನು ಕೂಡ ಮುಂದಿನ ಬದಲಾವಣೆ ಆಗುವರೆಗೆ ಪುರಸ್ಕರಿಸುವುದಿಲ್ಲ. ಈಗ ಈ ನಡೆಯನ್ನು ಅಮೆರಿಕಾದ ಡೆಮಾಕ್ರಾಟ್ ಪಕ್ಷ ಟೀಕಿಸಿದೆ.

ಭಾರತೀಯ ಟೆಕ್ಕಿಗಳಿಗೆ ಕಂಟಕ

ಅಮೆರಿಕಾದಲ್ಲಿ ವಿಶೇಷ ಕೌಶಲ್ಯದ ಉದ್ಯೋಗಕ್ಕಾಗಿ ಹಲವು ವರ್ಷಗಳಿಂದ ವಲಸೆ ಹೋಗುತ್ತಿದ್ದ ಸಾವಿರಾರು ಭಾರತೀಯ ನಾಗರಿಕರಿಗೆ ಇದೀಗ ಅಮೆರಿಕದ ನಿರ್ಧಾರದಿಂದ ಸಮಸ್ಯೆ ತಲೆದೋರಲಿದೆ. ಈಗಾಗಲೇ ಅಲ್ಲಿ ನೆಲೆಸಿರುವ ಉದ್ಯೋಗಿಗಳ ವೀಸಾ ಅವಧಿ ಮುಗಿದರೆ ಮುಂದೇನಾಗಬಹುದು ಎಂಬ ಚಿಂತೆ ಹಲವು ಭಾರತೀಯರಲ್ಲಿ ಮನೆಮಾಡಿದೆ. ಇದರ ಬಗ್ಗೆ ಹಲವು ಭಾರತೀಯ ವಲಸಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಉದಾಹರಣೆಗೆ ಎಂ ಪಾಂಡೆ ಎಂಬುವವರು ನರೇಂದ್ರ ಮೋದಿ, ಪ್ರಧಾನ ಮಂತ್ರಿ ಕಾರ್ಯಾಲಯ, ವಿದೇಶಾಂಗ ಸಚಿವ ಮುಂತಾದವರನ್ನು ಟ್ಯಾಗ್ ಮಾಡಿ ಈಗ ವಿಸಾ ಅವಧಿ ಮುಗಿಯುವ ಸಮಯದಲ್ಲಿ ತಲೆದೋರಿರುವ ಸಮಸ್ಯೆಗೆ ಪರಿಹಾರ ಹುಡುಕುವಂತೆ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದಾರೆ.

ಇದೆ ವಿಷಯವಾಗಿ ಟ್ವೀಟ್ ಮಾಡಿರುವ ಡೀನಾ ದಾಸ್ ಎಂಬ ಮಹಿಳೆಯೊಬ್ಬರು, ನಾನು ವೈದ್ಯೆಯಾಗಿ ಕೊರೊನ ಸಾಂಕ್ರಾಮಿಕದ ವಿರುದ್ಧ ನ್ಯೂಯಾರ್ಕ್ ನಲ್ಲಿ ಹೋರಾಟ ಮಾಡುತ್ತಿದ್ದೇನೆ, ನನ್ನಂತಹ ಕುಟುಂಬಗಳಿಗೂ ನೀವು ತೊಂದರೆ ಮಾಡುತ್ತಿದ್ದೀರಿ ಎಂದಿದ್ದಾರೆ.

ಒಟ್ಟಾರೆ ಹೆಚ್1ಬಿ ವೀಸಾ ನಿರಾಕರಣೆಯಿಂದ ಭಾರತದ ಬಹುದೊಡ್ಡ ಯುವ ಸಮುದಾಯವೊಂದು ದೊಡ್ಡ ನಿರುದ್ಯೋಗ ಸಮಸ್ಯೆಗೆ ಒಳಗಾಗಲಿರುವುದು ಖಚಿತವಾದಂತಾಗಿದೆ.

ಟ್ರಂಪ್ ನಿರ್ಧಾರ ಭಾರತದ ಐಟಿ ವಲಯದ ಮೇಲೆಯೂ ಪರಿಣಾಮ ಬೀರಬಹುದೇ?

ಪ್ರತಿ ವರ್ಷ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಭಾರತೀಯರು ಅಮೆರಿಕಾದಲ್ಲಿ ಉದ್ಯೋಗ ಅರಸಿ ವೀಸಾಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಇದರಲ್ಲಿ ಬಹುತೇಕ ಮಂದಿ ಐಟಿ ವಲಯಕ್ಕೆ ಸೇರಿದವರು.

ಟ್ರಂಪ್ ಆಡಳಿತಕ್ಕೆ ಬಂದಾಗಿಲಿಂದಲೂ ಈ ವಲಯಕ್ಕೆ ಸಿಗುವ ವೀಸಾಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2019 ರಲ್ಲಿ ವೀಸಾ ತಿರಸ್ಕಾರದ ದರ ತೀವ್ರವಾಗಿ, ಸುಮಾರು ಶೇ.32ರಷ್ಟು ವೀಸಾ ಅರ್ಜಿಗಳು ತಿರಸ್ಕೃತವಾಗಿದ್ದವು. ಈಗ ಹೊಸ ನಿರ್ಬಂಧದ ಪ್ರಕಾರ ಈ ಅರ್ಜಿಗಳನ್ನು ಪುರಸ್ಕರಿಸುವುದೇ ಇಲ್ಲ. ಇದರಿಂದ ಐಟಿ ವಲಯಕ್ಕೆ ಭಾರೀ ಹೊಡೆತ ಬೀಳಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೆ ಎನ್‌ಆರ್‌ಐ ಗಳ ಆದಾಯದ ಮೂಲಕ ಭಾರತಕ್ಕೆ ಹರಿದುಬರುತ್ತಿದ್ದ ಲಕ್ಷಾಂತರ ಕೋಟಿ ಆದಾಯವೂ ಇದೀಗ ಶ್ವೇತ ಭವನದ ನಿರ್ಧಾರದಿಂದ ತಡೆಗೊಳ್ಳಲಿದೆ ಎನ್ನಲಾಗುತ್ತಿದೆ.

ಒಟ್ಟಲ್ಲಿ ಕಣ್ಣಿಗೆ ಕಾಣದ ಕೊರೋನಾದಂತಹ ಸಾಂಕ್ರಾಮಿಕ ರೋಗ ಭಾರತದಂತಹ ತೃತೀಯ ರಾಷ್ಟ್ರ ಮಾತ್ರವಲ್ಲದೇ ವಿಶ್ವದ ದೊಡ್ಡಣ್ಣ ಅಮೆರಿಕವನ್ನೂ ಈ ಹಂತಕ್ಕೆ ತಳ್ಳಿದೆ ಎಂದರೆ, ಭವಿಷ್ಯದಲ್ಲಿ ಆರ್ಥಿಕತೆಯ ವಿಚಾರದಲ್ಲಿ ವಿಶ್ವದ ಎದುರು ರೂಪುಗೊಳ್ಳಬಹುದಾದ ಸವಾಲುಗಳು ಏನು? ಎಂಬುದನ್ನು ಪಟ್ಟಿ ಮಾಡಿ ಎಲ್ಲಾ ಸವಾಲಿಗೂ ಇಡೀ ಜಗತ್ತು ಈಗಿಲಿಂದಲೇ ತನ್ನನ್ನು ತಾನು ಸಿದ್ದಪಡಿಸಿಕೊಳ್ಳದ ಹೊರತು ಬೇರೆ ವಿಧಿ ಇಲ್ಲ.

Tags: ಅಮೇರಿಕಾಐಟಿ ಕಂಪನಿಗಳುಟೆಕ್ಕಿಟ್ರಂಪ್ಡೊನಾಲ್ಡ್ ಟ್ರಂಪ್ವಲಸೆ ವೀಸಾವೀಸಾ
Previous Post

Minimum Balance: ಜನ ಸಾಮಾನ್ಯರಿಂದ 10,000 ಕೋಟಿ ದಂಡ ವಸೂಲಿ ಮಾಡಿದ ಬ್ಯಾಂಕ್‌ಗಳು

Next Post

ಚೀನಾ ಸರಕು ಬಹಿಷ್ಕರಿಸುವಂತೆ ದೇಶೀಯ ಉದ್ಯಮಿಗಳಿಗೆ CAIT ಪತ್ರ

Related Posts

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ
Top Story

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

by ಪ್ರತಿಧ್ವನಿ
November 21, 2025
0

ದುಬೈ ಏರ್​​ ಶೋ ಕಾರ್ಯಕ್ರಮದಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. https://youtu.be/_-ETZQKXvgY?si=HJdmeaIp6arDY5i5 ತೇಜಸ್ ಯುದ್ಧ ವಿಮಾನ ಏರೋಬ್ಯಾಟಿಕ್ಸ್ ಪ್ರದರ್ಶಿಸಿ ನಂತರ ಇದ್ದಕ್ಕಿದ್ದಂತೆ...

Read moreDetails

“ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆ ಮೂರು ವರ್ಷಗಳಲ್ಲಿ ರೂ 88 ಲಕ್ಷ ಕೋಟಿಗೆ ಏರಿಕೆ”

November 20, 2025

ಟೆಕ್ ಮೇಳದಲ್ಲಿ ಭವಿಷ್ಯದ ಇಂಧನ ಕ್ಷೇತ್ರ ಕುರಿತು ಸಂವಾದ ನಡೆಸಿದ ಸಚಿವ ಪ್ರಿಯಾಂಕ ಖರ್ಗೆ..!!

November 20, 2025

ವಿದ್ಯಾರ್ಥಿಗಳೊಂದಿಗೆ ಅಂತರಿಕ್ಷ ಯಾತ್ರಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರೊಂದಿಗೆ ಸಂವಾದ ಕಾರ್ಯಕ್ರಮ: ಸಚಿವ ಎನ್‌ ಎಸ್‌ ಭೋಸರಾಜು

November 20, 2025

Lakshmi Hebbalkar: ಅಧಿಕಾರ ಎಂಬುದು ಶಾಶ್ವತ ಅಲ್ಲ,‌ ಅದು ಅವಕಾಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 20, 2025
Next Post
ಚೀನಾ ಸರಕು ಬಹಿಷ್ಕರಿಸುವಂತೆ ದೇಶೀಯ ಉದ್ಯಮಿಗಳಿಗೆ CAIT ಪತ್ರ

ಚೀನಾ ಸರಕು ಬಹಿಷ್ಕರಿಸುವಂತೆ ದೇಶೀಯ ಉದ್ಯಮಿಗಳಿಗೆ CAIT ಪತ್ರ

Please login to join discussion

Recent News

ಸಾಮಾಜಿಕ ಕಾರ್ಯಕರ್ತನ ಕೊಲೆ ಯತ್ನ ಆರೋಪ: ಕಾಂಗ್ರೆಸ್ ನಾಯಕಿ ಸವಿತಾಬಾಯಿ ಬಂಧನ
Top Story

ಸಾಮಾಜಿಕ ಕಾರ್ಯಕರ್ತನ ಕೊಲೆ ಯತ್ನ ಆರೋಪ: ಕಾಂಗ್ರೆಸ್ ನಾಯಕಿ ಸವಿತಾಬಾಯಿ ಬಂಧನ

by ಪ್ರತಿಧ್ವನಿ
November 22, 2025
7 ಕೋಟಿ ದರೋಡೆ ಕೇಸ್‌: ಆಂಧ್ರ ಪ್ರದೇಶದಲ್ಲಿ ಖಾಲಿ ಬಾಕ್ಸ್ ಗಳು ಪತ್ತೆ
Top Story

7 ಕೋಟಿ ದರೋಡೆ ಕೇಸ್‌: ಆಂಧ್ರ ಪ್ರದೇಶದಲ್ಲಿ ಖಾಲಿ ಬಾಕ್ಸ್ ಗಳು ಪತ್ತೆ

by ಪ್ರತಿಧ್ವನಿ
November 22, 2025
Daily Horoscope: ಇಂದಿನ ಲಾಭದಾಯಕ ರಾಶಿಗಳಿವು?
Top Story

Daily Horoscope: ಇಂದಿನ ಲಾಭದಾಯಕ ರಾಶಿಗಳಿವು?

by ಪ್ರತಿಧ್ವನಿ
November 22, 2025
ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್
Top Story

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ
Top Story

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಾಮಾಜಿಕ ಕಾರ್ಯಕರ್ತನ ಕೊಲೆ ಯತ್ನ ಆರೋಪ: ಕಾಂಗ್ರೆಸ್ ನಾಯಕಿ ಸವಿತಾಬಾಯಿ ಬಂಧನ

ಸಾಮಾಜಿಕ ಕಾರ್ಯಕರ್ತನ ಕೊಲೆ ಯತ್ನ ಆರೋಪ: ಕಾಂಗ್ರೆಸ್ ನಾಯಕಿ ಸವಿತಾಬಾಯಿ ಬಂಧನ

November 22, 2025
7 ಕೋಟಿ ದರೋಡೆ ಕೇಸ್‌: ಆಂಧ್ರ ಪ್ರದೇಶದಲ್ಲಿ ಖಾಲಿ ಬಾಕ್ಸ್ ಗಳು ಪತ್ತೆ

7 ಕೋಟಿ ದರೋಡೆ ಕೇಸ್‌: ಆಂಧ್ರ ಪ್ರದೇಶದಲ್ಲಿ ಖಾಲಿ ಬಾಕ್ಸ್ ಗಳು ಪತ್ತೆ

November 22, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada