ಶ್ರೀ ರಾಮನ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದ ಪ್ರೊ. ಕೆ ಎಸ್ ಭಗವಾನ್ ಈಗ ಹಿಂದು ಧರ್ಮದ ಕುರಿತಾಗಿ ಮಾತನಾಡಿ ಇನ್ನೊಂದು ವಿವಾದ ಸೃಷ್ಟಿಸಿದ್ದಾರೆ. ಹಿಂದು ಎಂಬುದು ಒಂದು ಧರ್ಮವೇ ಅಲ್ಲ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಹಿಂದು ಧರ್ಮವೇ ಇಲ್ಲ. ಹೀಂದೂ ಧರ್ಮವೆಂದರೆ ಬ್ರಾಹ್ಮಣರು ಎಂದು ಅರ್ಥ. ಉಳಿದವರೆಲ್ಲರೂ ಶೂದ್ರರು. ಮನುಸ್ಮೃತಿಯಲ್ಲಿ ಶೂದ್ರರನ್ನು ವೇಶ್ಯೆಯರು ಎಂದು ಕರೆಯಲಾಗಿದೆ,” ಎಂದು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಗ್ರಾಮೀಣ ಭಾಗದ ಜನರಿಗೆ ಹಿಂದು ಎಂದರೆ ಗೊತ್ತೇ ಇಲ್ಲ. ಅವರನ್ನು ಕೇಳಿದರೆ, ನಾವು ಒಕ್ಕಲಿಗರು, ಕುರುಬರು ಎಂದು ಹೇಳುತ್ತಾರೆ. ಆ ಕಾರಣದಿಂದ ಹಿಂದು ಎಂಬ ಪದವನ್ನೇ ತೆಗೆದು ಹಾಕಬೇಕು, ಎಂದವರು ಹೇಳಿದ್ದಾರೆ.
ಹಿಂದು ಎಂಬ ಪದವನ್ನು ಬಳಕೆ ಮಾಡಿದವರು ಪರ್ಶಿಯನ್ನರು. ಅದನ್ನು ಬಿಟ್ಟು ಬೇರೆ ಪದ ಹುಡುಕಲು ನಿಮಗೆ ಆಗಲಿಲ್ವಾ, ಎಂದು ಪ್ರಶ್ನಿಸಿದ್ದಾರೆ.
ಇನ್ನು, ಮಹಿಷಾ ದಸರವನ್ನು ಈ ಬಾರಿ ಆಚರಿಸುವುದು ಖಂಡಿತ. ಜಿಲ್ಲಾಧಿಕಾರಿ ಅನುಮತಿ ನೀಡದಿದ್ದರೂ, ಅಕ್ಟೋಬರ್15ರ ಬೆಳಿಗ್ಗೆ ಮಹಿಷಾ ದಸರಾ ಆಚರಿಸುತ್ತೇವೆ, ಎಂದು ಮಾಜಿ ಮೇಯರ್ ಆಗಿದ್ದ ಪುರುಷೋತ್ತಮ್ ಹೇಳಿದ್ದಾರೆ.