ಬಿಹಾರದ ಚುನಾವಣಾ ಕಣದಲ್ಲಿ ಕಾವು ಹೆಚ್ಚುತಿದ್ದು, ಇಡೀ ದೇಶದ ಎಲ್ಲರ ಕಣ್ಣು ನವೆಂಬರ್ 10ರಂದು ಹೊರಬೀಳುವ ಫಲಿತಾಂಶದತ್ತ ನೆಟ್ಟಿದೆ. ಈಗ ಬಹು ಮುಖ್ಯ ಪ್ರಶ್ನೆ ಎಂದರೆ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರೀಯ ಪಕ್ಷವನ್ನು ಈ ಬಾರಿ ಬಿಹಾರದ ಜನತೆ ತಿರಸ್ಕರಿಸುತ್ತಾರಾ ಎಂಬುದಾಗಿದೆ. ಏಕೆಂದರೆ 2015 ರ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದರು. ಬಿಜೆಪಿಯು ತಾನು ಹಿಂದೂಗಳ ಪ್ರತಿನಿಧಿ ಎಂದು ಮಾತಾಡಿದರೆ ಇದರ ಪ್ರತಿಸ್ಪರ್ದಿಯಾಗಿರುವ ಶಿವಸೇನೆ ಕೂಡ ತನ್ನ ಉಗ್ರ ಹಿಂದುತ್ವದಿಂದ ಹಿಂದೆ ಸರಿದು ಮೃದು ಹಿಂದುತ್ವ ಅಜೆಂಡ ಮುಂದಿಟ್ಟುಕೊಂಡು ಸ್ಪರ್ಧಿಸುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ಭಾನುವಾರ ಮುಖ್ಯ ಮಂತ್ರಿ ಉದ್ಧವ್ ಠಾಕ್ರೆ ಅವರ ದಸರಾ ಭಾಷಣವು ಮೊದಲ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಭಾಷಣ ಮಾಡಿದಂತಿತ್ತು. ಇವರ ಭಾಷಣವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿಜಯ ದಶಮಿಯ ಭಾಷಣಕ್ಕೆ ವ್ಯತಿರಿಕ್ತವಾಗಿತ್ತು. ನಾಗ್ಪುರದಲ್ಲಿ ಮತ್ತು ಮುಂಬೈನಲ್ಲಿ, ಮಾಡಲಾದ ಎರಡು ದಸರಾ ಭಾಷಣಗಳು ರಾಜಕೀಯ ಶಕ್ತಿ ಮತ್ತು ಚುನಾವಣಾ ಯಶಸ್ಸಿನ ಅನ್ವೇಷಣೆಯಲ್ಲಿ ಹಿಂದುತ್ವದ ಘೋಷಣೆಯನ್ನು ಯಾವ ರೀತಿಯಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಎರಡು ಪರ್ಯಾಯ ಮಾರ್ಗಗಳು ಇದ್ದಂತಾಗಿದೆ.
Also Read: ಶೀವಸೇನೆಯಿಂದ ಥಳಿತಕ್ಕೊಳಗಾದ ಮಾಜಿ ನೌಕಾಧಿಕಾರಿ ಬಿಜೆಪಿಗೆ ಸೇರ್ಪಡೆ
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ‘ಹಿಂದೂ ರಾಷ್ಟ್ರೀಯತೆಯ’ ಅಧಿಕೃತ ಉಸ್ತುವಾರಿ ಪಾತ್ರವನ್ನು ವಹಿಸಿಕೊಂಡಿರುವಂತೆ ಮಾತಾಡಿದ್ದರು. ಅವರು ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ಕಾರ್ಯ ವೈಖರಿಗೆ ನೀರಸ ಕ್ಷಮೆ ಕೋರುವಂತೆ ಮಾತಾಡಿದರು. ನೆರೆಯ ಚೀನಾದ ಸೈನ್ಯವು ಭಾರತದ ಭೂಪ್ರದೇಶದ ದೊಡ್ಡ ಭಾಗಗಳನ್ನು ಅತಿಕ್ರಮಣ ಮಾಡಿದೆ ಎಂಬ ವಿಷಯವು ಅವರನ್ನು ಚಿಂತೆಗೀಡು ಮಾಡಿರಲಿಲ್ಲ ಬದಲಾಗಿ, ರಕ್ಷಣಾ ಸಚಿವಾಲಯದ ವಕ್ತಾರರಂತೆ, ಅವರು ಮೋದಿ ಸರ್ಕಾರದ ದುರ್ಬಲತೆಯನ್ನು ಸಮರ್ಥಿಸಿಕೊಂಡು ಮತ್ತು ಚೀನಾದ ಅತಿಕ್ರಮಣವನ್ನು ನಿರ್ಲಕ್ಷಿಸಿ ಮಾತನಾಡಿದರು. ಇದರಿಂದ, ನಾಗಪುರ ಸಂಘ ಚಾಲಕರು ತಮ್ಮದೇ ಆದ ನೈತಿಕ ಮೇಲುಗೈಯಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.
Also Read: ಉದ್ಧವ್ ಠಾಕ್ರೆಯ ವ್ಯಂಗ್ಯ ಚಿತ್ರ ಹಂಚಿದ ಆರೋಪ: ನಿವೃತ್ತ ನೌಕಾಪಡೆ ಅಧಿಕಾರಿ ಮೇಲೆ ಹಲ್ಲೆ
ಆದರೆ ಇದಕ್ಕೆ ತದ್ವಿರುದ್ಧವಾಗಿ, ಉದ್ಧವ್ ಠಾಕ್ರೆ ಅವರು ಫೈರ್ ಬ್ರಾಂಡ್ ಎಂದೇ ಪರಿಚಿತವಾಗಿದ್ದು ಬಿಜೆಪಿ ಮತ್ತು ನಾಗಪುರದ ಜತೆಗಾರರನ್ನು ಎದುರಿಸಿದರು. ಮೊದಲಿಗೆ, ಮಹಾರಾಷ್ಟ್ರ ಮುಖ್ಯ ಮಂತ್ರಿ ಠಾಕ್ರೆ ಅವರಿಗೆ ಪ್ರಧಾನಿ ಮೋದಿ ಷಾ ಹೇಳಿಕೆಯನ್ನು ನೈತಿಕವಾಗಿ ಉನ್ನತ ರಾಜಕಾರಣಕ್ಕೆ ಒಪ್ಪಿಕೊಳ್ಳಲು ಇಷ್ಟವಿಲ್ಲ. ಕಳೆದ ನವೆಂಬರ್ನಲ್ಲಿ ಬಿಜೆಪಿ ನಾಯಕತ್ವವು ಮಹಾರಾಷ್ಟ್ರದ ರಾಜ್ಯಪಾಲರನ್ನು ಬಳಸಿಕೊಂಡು ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರು ಬೆಳಗಿನ ಜಾವದಲ್ಲಿ ಪ್ರಮಾಣವಚನ ಸ್ವೀಕರಿಸಲು ಅನುವು ಮಾಡಿ ಕೊಟ್ಟಾಗ, ಶಿವಸೇನೆಯು ಮೋದಿ ಮತ್ತು ಅವರ ಮುಂಬೈ ರಾಜಕೀಯ ಕಾರ್ಯಕರ್ತರನ್ನು ಎದುರಿಸಿತು. ಮೋದಿ ಮತ್ತು ಅಮಿತ್ ಷಾ ಸರ್ಕಾರವನ್ನು ಉರುಳಿಸಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿದರು. ಆಗ, ಶಿವಸೇನಾ ಮುಖ್ಯಸ್ಥರು ಮರಾಠರು ಎಂದಿಗೂ ಮೊಘಲರೊಂದಿಗೆ ರಾಜಿಯಾಗದ ಐತಿಹಾಸಿಕ ಹಿನ್ನೆಲೆ ಹೊಂದಿರುವುದಾಗಿ ದೆಹಲಿಯ ಬಿಜೆಪಿ ಮುಖಂಡರಿಗೆ ನೆನಪಿಸಿದರು. ಅಷ್ಟೇ ಅಲ್ಲ ಮಹಾರಾಷ್ಟ್ರವೇ ಒಂದು ಕಾಲದಲ್ಲಿ ಔರಂಗಜೇಬ್ ಮತ್ತು ಅವನ ಸೇನಾಧಿಪತಿ ಅಫ್ಜಲ್ ಖಾನ್ ಅವರನ್ನು ಸಮಾಧಿ ಮಾಡಿರುವುದನ್ನು ಜ್ಞಾಪಿಸಿದರು.
ಉದ್ಧವ್ ಠಾಕ್ರೆ ಅವರ ಪ್ರಕಾರ ಬಿಜೆಪಿ ಮತ್ತು RSS ಗೆ ಹಿಂದುತ್ವವನ್ನು ಪ್ರತಿನಿಧಿಸಲು ಅಧಿಕೃತ ಹಕ್ಕೇನೂ ಇಲ್ಲ, ಅಷ್ಟೇ ಅಲ್ಲ ಇವರಿಗೆ ಯಾವುದೇ ಅಥವಾ ಯಾರಿಗೇ ಹಿಂದುತ್ವದ ಪ್ರಮಾಣ ಪತ್ರ ನೀಡಲು ಆ ವಿಶ್ವಾಸಾರ್ಹತೆಯೂ ಇಲ್ಲ. ಶಿವಸೇನೆ ಮೊದಲಿನಿಂದಲೂ ಪಾಕಿಸ್ಥಾನ ಮತ್ತು ಮುಸ್ಲಿಮರ ವಿರುದ್ಧ ಪ್ರತೀಕೂಲ ಮನಸ್ಥಿತಿ ಹೊಂದಿರುವ ರಾಜಕೀಯ ಪಕ್ಷವಾಗಿದೆ. ಈ ಹಿಂದೆ ಶಿವಸೇನಾ ಮುಖ್ಯಸ್ಥರಾಗಿದ್ದ ಬಾಳಾ ಠಾಕ್ರೆಯು ಮುಂಬೈನಲ್ಲಿ ಪಾಕಿಸ್ತಾನದ ಗಾಯಕರು ಅಥವಾ ಕಾಮಿಕ್ ಕಲಾವಿದರನ್ನು ಪ್ರದರ್ಶನ ನೀಡಲು ಅವಕಾಶ ಕೊಡಲಿಲ್ಲ ಅಷ್ಟೇ ಅಲ್ಲ ಮಹಾರಾಷ್ಟ್ರದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಆಟ ಆಡುವುದಕ್ಕೂ ಅವಕಾಶ ನೀಡಿರಲಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.
Also Read: ʼಮೋದಿ ಜೊತೆಗಿನ ಸಂವಾದ ವ್ಯರ್ಥ ಅನ್ನೋ ಕೇರಳ ಗೆದ್ದಿದೆʼ ಬಿಜೆಪಿಗೆ ಶಿವಸೇನೆ ತಿರುಗೇಟು
ಅದೇ ಸಮಯದಲ್ಲಿ, ಅಧಿಕಾರವು ಶಿವಸೇನೆಯ ದೌರ್ಬಲ್ಯಕ್ಕೆ ಕಾರಣವಾಗಲಿಲ್ಲ ಎಂದು ಮುಖ್ಯಮಂತ್ರಿ ಠಾಕ್ರೆ ಬಿಜೆಪಿ ಯ ಹೈ ಕಮಾಂಡ್ ಗೆ ನೆನಪಿಸಿದರು. ಶಿವ ಸೈನಿಕರು ಇನ್ನೂ ಸುತ್ತಲೂ ಇದ್ದಾರೆ ಮತ್ತು ಹಿಂಸಾಚಾರ ನಡೆಸಲು ಅವರು ಹೋಗುವುದಿಲ್ಲ ಎಂದರಲ್ಲದೆ ಶಿವಸೇನೆ ಬಲಶಾಲಿ ಆಗಿದ್ದು ಅದರ ಜತೆ ಸಂಘರ್ಷ ಬಿಟ್ಟು ಬೇರೆ ಯಾವುದಾದರೂ ಸಂಘಟನೆ ಜತೆ ದ್ವೇಷ ತೋರಿಸಿ ಎಂದು ಅವರು ಹೇಳಿದರು. ಮೋದಿಯ ಬಗ್ಗೆ ಈ ರೀತಿ ಹೇಳಿಕೆ ನೀಡಲು ಉದ್ಧವ್ ಠಾಕ್ರೆ ಅವರಿಗೆ ಎಲ್ಲ ಕಾರಣಗಳಿವೆ. ಧಾರಾವಿಯಲ್ಲಿನ ಕೋವಿಡ್ 19 ಸಾಂಕ್ರಾಮಿಕವನ್ನು ಎದುರಿಸಿ ಅಂತಿಮವಾಗಿ ಯಶಸ್ಸು ಸಾಧಿಸಿದ ಬಗ್ಗೆ ಯಾವುದೇ ಮುಖ್ಯಮಂತ್ರಿಗಳು ಸಮಾಧಾನ ತೃಪ್ತಿ ಪಡೆಯಬಹುದಾಗಿದೆ. ಆದರೆ ಆ ದಿನಗಳಲ್ಲಿ ಬಿಜೆಪಿಯು ಆಡಳಿತಾತ್ಮಕ ಲೋಪವಾಗಿದೆ ಎಂದು ದುರುದ್ದೇಶಪೂರಿತವಾಗಿ ಪಿಸುಗುಟ್ಟುತ್ತಿತ್ತು. ಕೇಂದ್ರದ ಆಡಳಿತ ಒಂದೇ ಕೋವಿಡ್ 19 ಸಾಂಕ್ರಮಿಕವನ್ನು ಯಶಸ್ವಿಯಾಗಿ ಎದುರಿಸಬಹುದು ಎಂದು ಬಿಜೆಪಿ ನಾಯಕರು ಹೇಳಿದ್ದನ್ನು ಠಾಕ್ರೆ ಅವರು ಮರೆಯಲು ಸಾಧ್ಯವಿಲ್ಲ. ಧಾರವಿಯಲ್ಲಿನ ಈ ಯಶಸ್ಸಿನಿಂದಾಗಿ, ಬಿಜೆಪಿಯ ನೈಜ ಮುಖವನ್ನು ಅನಾವರಣಗೊಳಿಸಲು ಠಾಕ್ರೆ ಅವರಿಗೆ ಧೈರ್ಯ ಬಂದಿತು. ಗಂಟೆ ಬಾರಿಸುವ ಅಥವಾ ದೀಪ ಹಚ್ಚುವುದರಿಂದ ದೇಶಭಕ್ತಿಯನ್ನು ಅಥವಾ ಹಿಂದುತ್ವವನ್ನು ವ್ಯಾಖ್ಯಾನಿಸಲು ಆಗುವುದಿಲ್ಲ ಎಂದು ಅವರು ಹೇಳಿದರು.
Also Read: ಬಿಜೆಪಿಯ ‘ಮಹಾ’ ಚಕ್ರವ್ಯೂಹದಲ್ಲಿ ಶಿವಸೇನೆ
ತನ್ನ ತಂದೆಯನ್ನು ಮೀರಿ ಉದ್ಧವ್ ಠಾಕ್ರೆ ತಮ್ಮನ್ನು ತಾವು ಆಧುನಿಕ ಶೈಲಿಯ ವ್ಯಕ್ತಿಯಂತೆ ಗುರುತಿಸಿಕೊಂಡಿದ್ದಾರೆ. ಮುಂಬೈಗೆ ತಕ್ಕಂತೆ ಬಾಲ್ ಠಾಕ್ರೆಯ ನೀತಿ ಮತ್ತು ನಿಲುವುಗಳಲ್ಲಿ ಕ್ರಿಯಾತ್ಮಕವಾಗಿ ಬದಲಾಗಿದೆ. ಶಿವಸೇನೆ ಈ ಮೊದಲು ಹಿಂಸಾಚಾರದ ಮೇಲಿನ ಕಾರ್ಯತಂತ್ರದ ಅವಲಂಬನೆ ಮತ್ತು ಹಿಂಸೆಯ ಬೆದರಿಕೆಯ ಯತ್ನದಿಂದ ದೂರ ಸರಿಯುತ್ತಿರುವಂತೆ ಬಿಂಬಿಸಿಕೊಲ್ಲುತ್ತಿದೆ. ಈಗ ತನ್ನ ಹೊಸ ರಾಜಕೀಯ ಗೌರವದ ಬೇಡಿಕೆಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದೆ.
ಉದ್ಧವ್ ಠಾಕ್ರೆ ಎಲ್ಲರ ಮೇಲೂ ತನ್ನ ಚತುರತೆಯಿಂದ ಪ್ರಭಾವ ಬೀರಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಜತೆ ಉತ್ತಮ ಸಂಬಂದ ಹೊಂದಿದ್ದಾಗಲೂ, ಬಿಜೆಪಿಯ ಸಾಮಾಜಿಕ ಪ್ರಾಬಲ್ಯವು ಅನಿಶ್ಚಿತವಾಗಿತ್ತು; ಶಿವಸೇನೆ ಜತೆಗಿನ ಸಂಬಂದವನ್ನು ಕಡಿತಗೊಳಿಸಿಕೊಂಡ ನಂತರ ಮಹಾರಾಷ್ಟ್ರದಲ್ಲಿ ಬಿಜೆಪಿ ಸಾಮಾಜಿಕವಾಗಿ ದುರ್ಬಲವಾಗಿ ಬಿಟ್ಟಿದೆ. ಉದ್ಧವ್ ಠಾಕ್ರೆ ಅವರು ಮೋದಿಯ ಆಡಳಿತಾತ್ಮಕ ಸಮರ್ಥನೆಯನ್ನು ಪ್ರಶ್ನಿಸುವುದಲ್ಲದೆ, ಇಸ್ಲಾಮೋಫೋಬಿಯಾ, ಪಾಕಿಸ್ತಾನ ಮತ್ತು ರಾಷ್ಟ್ರೀಯತೆಯ ಬಿಜೆಪಿಯ ಏಕಸ್ವಾಮ್ಯದ ವಿಷಯಗಳಲ್ಲೂ ಬಿಜೆಪಿ ಜತೆ ಸ್ಪರ್ದೆಗೆ ನಿಂತಿದ್ದಾರೆ. ಬಿಜೆಪಿಯ ಪರಿಕಲ್ಪನೆಗಳ ಮೇಲೆ ಉದ್ಧವ್ ಠಾಕ್ರೆ ಅವರ ಆಕ್ರಮಣವು ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ಬಿಜೆಪಿಯೇ ಇದರಿಂದ ಆತಂಕಗೊಂಡಿದೆ.