ನಿರ್ಭಯಾ ಪ್ರಕರಣವನ್ನು ಕೈ ಎತ್ತಿಕೊಂಡು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೆ ಹೋರಾಡಿದ್ದ ವಕೀಲೆ ಸೀಮಾ ಕುಶ್ವಾಹಾ ಅವರನ್ನು ಕೂಡಾ ಸಂತ್ರಸ್ಥೆಯ ಪೋಷಕರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ. ಗುರುವಾರವೇ ಹಾಥ್ರಾಸ್‌ಗೆ ಹೊರಟಿದ್ದ ಸೀಮಾ ಅವರನ್ನು ತಡೆಯಲಾಗಿದೆ.
“ಸಂತ್ರಸ್ಥೆಯ ಪೋಷಕರನ್ನು ಭೇಟಿಯಾಗದೇ, ನಾನೂ ಹಾಥ್ರಾಸ್ ಬಿಟ್ಟು ಕದಲುವುದಿಲ್ಲ. ಕಾನೂನಾತ್ಮಕವಾಗಿ ಸಹಾಯ ಮಾಡಿ ಪೋಷಕರು ನನ್ನ ಬಳಿ ಕೇಳಿಕೊಂಡಿದ್ದಾರೆ. ಆದರೆ, ಆಡಳಿತದಲ್ಲಿರುವವರು ನನ್ನನ್ನು ಭೇಟಿಯಾಗಲು ಬಿಡುತ್ತಿಲ್ಲ,” ಎಂದು ಅವರು ಹೇಳಿದ್ದಾರೆ.
Also Read: ಹಾಥ್ರಾಸ್ ಹೇಯ ಘಟನೆ ಮತ್ತು ʼಉತ್ತರಪ್ರದೇಶʼ ಎಂಬ ಭವಿಷ್ಯದ ಭಾರತದ ಮಾದರಿ!
ಉತ್ತರ ಪ್ರದೇಶ ಸರ್ಕಾರದ ದಮನಕಾರಿ ನೀತಿ ಇಲ್ಲಿಗೇ ನಿಲ್ಲಲಿಲ್ಲ. ಹಾಥ್ರಾಸ್‌ನಲ್ಲಿ ಮಾಧ್ಯಮಗಳಿಗೆ ಕೂಡಾ ನಿರ್ಬಂಧ ಹೇರಲಾಗಿದ್ದು, ಯಾವುದೇ ಮಾಧ್ಯಮಗಳು ಘಟನೆ ನಡೆದ ಸ್ಥಳಕ್ಕೆ ತಲುಪದಂತೆ ತಡೆಯಲಾಗಿದೆ. ಸಂತ್ರಸ್ಥೆಯ ಊರಿನಿಂದ 2 ಕಿ.ಮೀ. ದೂರದಲ್ಲಿಯೇ ಎಲ್ಲಾ ಮಾಧ್ಯಮದ ವರದಿಗಾರರನ್ನು ತಡೆಯಲಾಗಿದೆ. ಈ ಕುರಿತಾಗಿ ಮಾಧ್ಯಮಗಳು ಒಬ್ಬ ಐಎಎಸ್ ಅಧಿಕಾರಿಯನ್ನು ಪ್ರಶ್ನಿಸಿದಾಗ ಇದು ʼಮೇಲಿನಿಂದʼ ಬಂದ ಆದೇಶ, ಹಾಗಾಗಿ ಅವರನ್ನೇ ಕೇಳಿ ಎಂಬ ಉತ್ತರ ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜವಾಬ್ದಾರಿಯುತ ಸ್ಥಾನದಲ್ಲಿದ್ದ ಓರ್ವ ಐಎಎಸ್ ಅಧಿಕಾರಿಯೇ, ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅಥವಾ, ಆ ಅಧಿಕಾರಿ ನಿಜಕ್ಕೂ ಏನೂ ತಿಳಿಯದೇ ಇದ್ದವರಾಗಿದ್ದರೆ, ಮೇಲಧಿಕಾರಿಗಳು ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎಂಬ ಅಂಶವೂ ಸ್ಪಷ್ಟವಾಗುತ್ತದೆ.
Also Read: ತಾವು ಹೋಗೊಲ್ಲ, ಹೋಗುವವರನ್ನು ಬಿಡೊಲ್ಲ; ಯೋಗಿ ಮಾಡೆಲ್!
ಈ ಹಿಂದೆಯೂ, ಉತ್ತರ ಪ್ರದೇಶದ ಪೊಲೀಸರು ಮಾಧ್ಯಮದವರನ್ನು ತಡೆದು ವಿಕಾಸ್ ದುಬೆಯ ಎನ್‌ಕೌಂಟರ್ ಮಾಡಿದ್ದರು. ನಂತರ ಅವರು ಹೇಳಿದ್ದ ಕಥೆಯೇ ನಿಜವೆಂದು ನಂಬುವಂತೆ ಕೇಳಿಕೊಂಡಿದ್ದರು.
ಸೆಕ್ಷನ್ 144 ಅಸ್ತ್ರ ಬಳಕೆ:
ಹಾಥ್ರಾಸ್‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಹಾಗೂ ಕೊಲೆಯ ವಿರುದ್ದ ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಭುಗಿಲೆದ್ದ ಪ್ರತಿಭಟನೆಗಳನ್ನು ತಡೆಯಲು ಸರ್ಕಾರವು ಸೆಕ್ಷನ್ 144 ಮೊರೆ ಹೋಗುತ್ತಿದೆ. ಹಥ್ರಾಸ್ನಲ್ಲಿ ನಿನ್ನೆಯೇ ಸೆಕ್ಷನ್ 144 ಜಾರಿಗೊಳಿಸಿದ್ದರೆ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಇಂದು ಜಾರಿಗೊಳಿಸಲಾಗಿದೆ.
ಶುಕ್ರವಾರದಂದು ದೆಹಲಿಯ ಇಂಡಿಯಾ ಗೇಟ್ ಬಳಿ ಹಾಥ್ರಾಸ್ ಪ್ರಕರಣವನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆ ಕಾರಣದಿಂದ ಇಂಡಿಯಾ ಗೇಟ್ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
Also Read: ಹಾಥ್ರಾಸ್: ಅತ್ಯಾಚಾರವೇ ನಡೆದಿಲ್ಲ ಎಂದ ಪೊಲೀಸರು
ಈ ಕುರಿತಾಗಿ ಟ್ವೀಟ್ ಮಾಡಿರುವ ನವ ದೆಹಲಿ ಡಿಸಿಪಿ ಆಗಿರುವ ಐಶ್ ಸಿಂಗ್, “ದೆಹಲಿಯ ಜಂತರ್ ಮಂತರ್‌ನಲ್ಲಿ ನೂರು ಜನಕ್ಕೆ ಮೀರದಂತೆ ಸಾರ್ವಜನಿಕ ಸಭೆಗಳನ್ನು ಆಯೋಜಿಸಬಹುದಾದಿಗೆ. ಅದೂ ಕೂಡಾ ಮುಂಚಿತವಾಗಿ ಅನುಮತಿ ಪಡೆದಿದ್ದರೆ ಮಾತ್ರ. ಇಂಡಿಯಾ ಗೇಟ್ ಬಳಿ ಸಿಆರ್‌ಪಿಸಿ ಸೆಕ್ಷನ್ 144 ಜಾರಿಗೊಳಿಸಿದ್ದರಿಂದ ಅಲ್ಲಿ ಸಭೆ ನಡೆಸಲು ಅನುಮತಿಯಿರುವುದಿಲ್ಲ,” ಎಂದು ಹೇಳಿದ್ದಾರೆ.