ಭಾರತ ಮತ್ತು ಚೀನಾ ಗಡಿಯಲ್ಲಿ ಸೈನಿಕರ ನಡುವೆ ಸಂಘರ್ಷ ಆಗಿದ್ದು ಕಳೆದ ಸೋಮವಾರ ರಾತ್ರಿ(ಜೂನ್ 15ರಂದು). ಅದಕ್ಕೂ ಮೊದಲೇ ಎರಡೂ ದೇಶಗಳ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜೂನ್ 6ರಿಂದ ಎರಡೂ ದೇಶಗಳ ಸೇನಾ ಅಧಿಕಾರಿಗಳ ಮಟ್ಟದಲ್ಲಿ, ವಿದೇಶಾಂಗ ಇಲಾಖೆ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿತ್ತು. ಆದರೆ ಮಾತುಕತೆ ಎಷ್ಟು ಪರಿಣಾಮಕಾರಿಯಾಗಿದೆ? ಫಲಪ್ರದವಾಗುತ್ತಿದೆ ಎಂಬ ಮಾಹಿತಿಗಳನ್ನು ಕೇಂದ್ರ ಸರ್ಕಾರವಾಗಲೀ, ರಕ್ಷಣಾ ಇಲಾಖೆಯಾಗಲಿ ಅಥವಾ ವಿದೇಶಾಂಗ ಇಲಾಖೆಯಾಗಲಿ ನೀಡಲಿಲ್ಲ. ಜೊತೆಗೆ ಮಾತುಕತೆ ನಡೆಯುತ್ತಿದ್ದರೂ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದೇಗೆ ಎಂಬುದನ್ನೂ ತಿಳಿಸಲಿಲ್ಲ.
ನಿಜ, ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಕೆಲ ಸಂಗತಿಗಳನ್ನು ಮುಚ್ಚಿಡಬೇಕಾಗುತ್ತದೆ. ಆದರೆ ಎಲ್ಲವನ್ನೂ ಅಲ್ಲ. ‘ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಕೆಲ ಸಂಗತಿಗಳನ್ನು ಮುಚ್ಚಿಡಬೇಕಾಗುತ್ತದೆ’ ಎಂಬುದನ್ನೇ ನೆಪ ಮಾಡಿಕೊಂಡು ಮಗುಮ್ಮಾಗಿದೆ. ನೆಪಮಾತ್ರಕ್ಕೆ ಆಗೊಮ್ಮೆ ಈಗೊಮ್ಮೆ ಕೆಲ ಮಾಹಿತಿ ಹಂಚಿಕೊಳ್ಳುತ್ತಿದೆ. ಆ ಮಾಹಿತಿಗಳು ಎಂಥವು ಎಂದರೆ ‘ಇಂದು ಎರಡೂ ದೇಶಗಳ ಸೇನಾ ಮಟ್ಟದ ಮಾತುಕತೆ ಮಾಹಿತಿ ತಿಳಿಸಲಾಗುತ್ತೆ’ ಎಂಬಂಥವು. ಆದರೆ ಮಾತುಕತೆ ಯಾವ ವಿಷಯದ ಬಗ್ಗೆ ಎಂಬುದನ್ನು ತಿಳಿಸುವುದಿಲ್ಲ. ಮಾತುಕತೆ ಮುಗಿದ ಬಳಿಕ ‘ಔಟ್ ಕಮ್’ ಏನು ಎಂಬುದನ್ನೂ ತಿಳಿಸುವುದಿಲ್ಲ.
ಈ ನಡುವೆ ದೇಶದಲ್ಲಿ ವಿರೋಧ ಪಕ್ಷಗಳು ಸತ್ತು ಹೋಗಿರುವುದು ಮತ್ತು ಮಾಧ್ಯಮಗಳು ಸರ್ಕಾರದ ತುತ್ತೂರಿ ಆಗಿರುವುದು ಆಡಳಿತ ಪಕ್ಷಕ್ಕೆ ಅನುಕೂಲವಾಗಿದೆ. ಆದರೆ ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನತೆ ಉಂಟಾದ ಮೊದಲ ದಿನದಿಂದಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತ್ರ ನಿರಂತರವಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡುತ್ತಾ ಬಂದಿದ್ದಾರೆ. ‘ಏನಾಗುತ್ತಿದೆ?’ ಎಂಬುದನ್ನು ತಿಳಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಗಡಿಯಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ‘ಏನೂ ಆಗೇ ಇಲ್ಲ’ ಎನ್ನುವಂತೆ ಜಾಣಮೌನ ವಹಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕೇಳುತ್ತಿದ್ದಾರೆ.
ಈಗಲೂ ಭಾರತ ಮತ್ತು ಚೀನಾ ಗಡಿಯಲ್ಲಿ ಸೈನಿಕರ ನಡುವೆ ಸಂಘರ್ಷ ಉಂಟಾದ ಬಳಿಕ ನಿರಂತರವಾಗಿ ಕೇಂದ್ರ ಸರ್ಕಾರವನ್ನು ‘ಏನಾಯಿತು ಹೇಳಿ?’ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಹಾಗೂ ಕೇಂದ್ರ ಸರ್ಕಾರವನ್ನು ಕೇಳಿದ ಪ್ರಶ್ನೆಗಳು ಈ ಕೆಳಕಂಡಂತಿವೆ.
ಗುರುವಾರ ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗಳು;
* ನಮ್ಮ ನಿಶಸ್ತ್ರ ಸೈನಿಕರನ್ನು ಕೊಲ್ಲಲು ಚೀನಾಗೆ ಎಷ್ಟು ಧೈರ್ಯ?
* ನಮ್ಮ ಸೈನಿಕರನ್ನು ನಿಶಸ್ತ್ರವಾಗಿ ಹುತಾತ್ಮರಾಗಲು ಕಳುಹಿಸಿದ್ದೇಕೆ?
ಬುಧವಾರ ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗಳು;
* ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದು ಏಕೆ?
* ಮೋದಿ ವಸ್ತುಸ್ಥಿತಿಯನ್ನು ಏಕೆ ಮುಚ್ಚಿಡುತ್ತಿದ್ದಾರೆ?
* ಆಗಿದ್ದು ಆಯ್ತು, ಈಗ ಏನಾಗುತ್ತಿದೆ ಹೇಳಿ
* ನಮ್ಮ ಸೈನಿಕರನ್ನು ಹತ್ಯೆ ಮಾಡಲು ಚೀನಾಕ್ಕೆ ಎಷ್ಟು ಧೈರ್ಯ?
* ನಮ್ಮ ಜಾಗವನ್ನು ವಶಪಡಿಸಿಕೊಳ್ಳಲು ಚೀನಾಕ್ಕೆ ಎಷ್ಟು ಧೈರ್ಯ?
ಎಂದಿನಂತೆ ರಾಹುಲ್ ಗಾಂಧಿ ಅವರ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರಿಂದ ಬಂದಿರುವುದು ಕುಹಕಗಳು ಮಾತ್ರ.
20 ಸೈನಿಕರು ಹುತಾತ್ಮರಾದ ಸುದ್ದಿ ತಿಳಿದೂ ಅವರಿಗೆ ಸಂತಾಪ ಸೂಚಿಸಲು 15ಗಂಟೆ ಸಮಯ ತೆಗೆದುಕೊಂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೂ ರಾಹುಲ್ ಗಾಂಧಿ ಕೆಲ ಪ್ರಶ್ನೆ ಕೇಳಿದ್ದಾರೆ. ರಾಜನಾಥ್ ಸಿಂಗ್ ಸೈನಿಕರ ಸಾವಿನಿಂದ ತುಂಬಾ ನೋವಾಗಿದೆ ಎಂದಷ್ಟೇ ಹೇಳಿದ್ದರಿಂದ ರಾಹುಲ್ ಗಾಂಧಿ ಪ್ರಶ್ನೆಗಳು ಸ್ವಲ್ಪ ಖಡಕ್ ಆಗಿವೆ. ದೇಶ ಸಂಕಟದಲ್ಲಿದ್ದಾಗಲೂ ಚುನಾವಣಾ ಪ್ರಚಾರದಲ್ಲಿ ನಿರತತಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಪ್ರಶ್ನಿಸಿದ್ದಾರೆ. ಜೊತೆಗೆ ರಾಹುಲ್ ಗಾಂಧಿ ಮಾಧ್ಯಮಗಳ ನಿಲುವನ್ನೂ ಚುಚ್ಚಿದ್ದಾರೆ.
* ಸೈನಿಕರ ಸಾವಿನಿಂದ ನೀವು ತುಂಬಾ ನೋವಿನಿಂದ ಕೂಡಿದ್ದರೆ, ನಿಮ್ಮ ಟ್ವೀಟ್‌ನಲ್ಲಿ ಚೀನಾ ಹೆಸರಿಡದೆ ಭಾರತೀಯ ಸೇನೆಯನ್ನು ಏಕೆ ಅವಮಾನಿಸುತ್ತೀರಿ?
* ಕಾಂಡೋಲ್ ಮಾಡಲು 2 ದಿನಗಳನ್ನು ಏಕೆ ತೆಗೆದುಕೊಳ್ಳಬೇಕು?
* ಸೈನಿಕರು ಸಾಯುತ್ತಿರುವ ಸಂದರ್ಭದಲ್ಲೂ ಚುನಾವಣಾ ಸಮಾವೇಶಗಳನ್ನು ಏಕೆ ಮಾಡುತ್ತಿದ್ದೀರಿ?
* ಕ್ರೋನಿ ಮಾಧ್ಯಮದಿಂದ ಸೈನ್ಯವನ್ನು ಏಕೆ ಮರೆಮಾಚಬೇಕು?
* ಕೇಂದ್ರ ಸರ್ಕಾರದಿಂದ ಹಣ ಪಡೆದಿರುವ ಮಾಧ್ಯಮಗಳು ಸೈನ್ಯವನ್ನು ದೂಷಿಸುವುದು ಏಕೆ?
If it was so painful:
1. Why insult Indian Army by not naming China in your tweet?
2. Why take 2 days to condole?
3. Why address rallies as soldiers were being martyred?
4. Why hide and get the Army blamed by the crony media?
5. Why make paid-media blame Army instead of GOI? https://t.co/mpLpMRxwS7— Rahul Gandhi (@RahulGandhi) June 17, 2020
ಇದಲ್ಲದೆ ರಾಹುಲ್ ಗಾಂಧಿ ಅವರ ಸಹೋದರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಪ್ರಶ್ನೆಸಹಿತ ಒತ್ತಾಯ ಮಾಡಿದ್ದಾರೆ. “ನಮ್ಮ ಭೂಮಿ, ನಮ್ಮ ಸಾರ್ವಭೌಮತ್ವಕ್ಕೆ ಬೆದರಿಕೆ ಇದೆ. ನಮ್ಮ ಸೈನಿಕರು ಮತ್ತು ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ನಾವು ಸುಮ್ಮನಿರಲು ಸಾಧ್ಯವೇ?” ಎಂದು ಪ್ರಶ್ನಿಸಿದ್ದಾರೆ. ಪ್ರಶ್ನೆಯ ಬೆನ್ನಲ್ಲೇ “ನಮ್ಮ ಭೂಮಿ ವಾಪಸ್ ಪಡೆಯಲು ಭಾರತದ ನಾಯಕತ್ವ ಇಚ್ಛಾಶಕ್ತಿಯನ್ನು ತೋರಬೇಕು. ಅಂಥ ಇಚ್ಛಾಶಕ್ತಿ ತೋರಿಸಿ ನರೇಂದ್ರ ಮೋದಿ” ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
हमारी धरती मां, हमारी संप्रभुता खतरे में है। हमारे जवान शहीद हो रहे हैं। क्या हम चुप बैठे रहेंगे?
भारत की जनता सच की हकदार है, उसे ऐसे नेतृत्व की दरकार है जो हमारी जमीन छिनने से पहले अपनी जान देने के लिए तैयार हो।
सामने आइए @narendramodi जी, चीन का सामना करने का वक्त आ गया है।
— Priyanka Gandhi Vadra (@priyankagandhi) June 17, 2020
ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ಹಾಗೂ ಸೇನೆಯ ಜೊತೆ ನಿಲ್ಲುತ್ತದೆ ಎಂದು ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಗಲ್ವಾನ್ ಕಣಿವೆ ಬಳಿ ಚೀನಾದ ಸೈನಿಕರು ಭಾರತದ 20 ಭಾರತೀಯ ಯೋಧರನ್ನು ಬಲಿ ತೆಗೆದುಕೊಂಡಿರುವುದು ದೇಶದ ಸಾಕ್ಷಿಪ್ರಜ್ಞೆಯನ್ನು ಅಲುಗಾಡಿಸಿದೆ. ಒಂದೂವರೆ ತಿಂಗಳಿನಿಂದ ಚೀನಾದ ಸೇನೆ ಭಾರತದ ಭೂಭಾಗವನ್ನು ಅತಿಕ್ರಮಿಸಿಕೊಂಡಿದೆ. ನಮ್ಮ ನೆಲವನ್ನು ವಶಪಡಿಸಿಕೊಳ್ಳಲು ಹಾಗೂ 20 ಯೋಧರನ್ನು ಬಲಿ ತೆಗೆದುಕೊಳ್ಳಲು ಹೇಗೆ ಸಾಧ್ಯವಾಯಿತು? ಎಂಬುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನರಿಗೆ ತಿಳಿಸಬೇಕು ಎಂದು ಸವಾಲು ಹಾಕಿದ್ದಾರೆ.
ಕಾಣೆಯಾಗಿರುವ ಭಾರತದ ಯೋಧರು ಎಲ್ಲಿದ್ದಾರೆ? ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಯೋಧರು ಹಾಗೂ ಸೇನಾಧಿಕಾರಿಗಳ ಸಂಖ್ಯೆ ಎಷ್ಟು? ಚೀನಾ ಈವರೆಗೆ ಭಾರತದ ಎಷ್ಟು ಭೂಮಿಯನ್ನು ವಶಪಡಿಸಿಕೊಂಡಿದೆ? ಇದರ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ? ಸೋನಿಯಾ ಗಾಂಧಿ ಅವರು ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸರ್ಕಾರದ್ದು ಮಾತ್ರ ದಿವ್ಯ ಮೌನ…