ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಕ್ಷೇತ್ರದ ಜನತೆಗೆ ಸೆಟ್ ಟಾಪ್ ಬಾಕ್ಸ್ ಹಂಚಿರುವ ಪ್ರಕರಣದ ವಿರುದ್ಧ ಸಾಮಾಜಿಕ ಹೋರಾಟಗಾರ, ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಚುನಾವಣಾ ಆಯೋಗ ಹಾಗೂ ಆರ್ ಆರ್ ನಗರದ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
Also Read: ಆರ್‌ಆರ್ ನಗರ ಉಪಚುನಾವಣೆ; ಬಿಜೆಪಿ ಅಭ್ಯರ್ಥಿ ಮುನಿರತ್ನ ಆಸ್ತಿಯಲ್ಲಿ ಭಾರಿ ಏರಿಕೆ
ಮುನಿರತ್ನ ಕ್ಷೇತ್ರದ ಮತದಾರರಿಗೆ ಅಕ್ರಮವಾಗಿ ಸೆಟ್‌ಟಾಪ್ ಬಾಕ್ಸ್ ಹಂಚಿ ಆಮಿಷ ಒಡ್ಡಿದ್ದಾರೆಂದು ಪ್ರತಿಪಕ್ಷ ಕಾಂಗ್ರೆಸ್ ಕಳೆದ ವಾರ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಒಂದು ಸಾವಿರ ಬೆಲೆ ಬಾಳುವ ಸುಮಾರು 50 ಸಾವಿರಕ್ಕೂ ಹೆಚ್ಚು ಟಿವಿ ಸೆಟ್ ಟಾಪ್ ಬಾಕ್ಸ್‌ಗಳನ್ನು ಮುನಿರತ್ನ ಕ್ಷೇತ್ರದ ಮತದಾರರಿಗೆ ಹಂಚಿದ್ದಾರೆ ಎಂದು ಕಾಂಗ್ರೆಸ್ ಆರೋಪವಾಗಿತ್ತು. ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕದ ಮುನಿರತ್ನ ಟಾಪ್ ಬಾಕ್ಸ್ ಹಂಚಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಅಲ್ಲದೆ ಇದು ತನ್ನ ವ್ಯವಹಾರದ ಭಾಗ ಎಂದು ಸಮರ್ಥನೆ ನೀಡಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ವಿಚಾರದ ಕುರಿತಂತೆ ಕರ್ನಾಟಕ ಮೂಲದ ನ್ಯೂಸ್ 18 ಹಿರಿಯ ಪತ್ರಕರ್ತ ಡಿಪಿ ಸತೀಶ್, ತಮ್ಮ ಅಧಿಕೃತ ಟ್ವಿಟರ್ ಖಾತೆ ಮೂಲಕ ಬೆಳಕು ಚೆಲ್ಲಿದ್ದು, “ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಐದು ಕೋಟಿ ಬೆಲೆಬಾಳುವ 34,000 ಸೆಟ್ ಟಾಪ್ ಬಾಕ್ಸ್ ಹಂಚಿದ್ದಾರೆ. ಒಂದು ವೇಳೆ ಗೆದ್ದರೂ ಚುನಾವಣಾ ವೆಚ್ಚ ಮಿತಿಯನ್ನು ಮೀರಿದ್ದಕ್ಕೆ ಅವರ ಸ್ಥಾನವನ್ನು ಅನರ್ಹಗೊಳಿಸಬಹುದೆಂದು ಕಾನೂನು ತಜ್ಞರು ಹೇಳುತ್ತಾರೆ” ಎಂದು ಟ್ವೀಟ್ ಮಾಡಿದ್ದರು.

Thanks a ton for flagging this, @dp_satish.
I've filed a complaint with the ECI and Returning Officer for Rajarajeshwari Nagar (AC: 154) about this incident requesting action within 24 hours for bribing voters and indulging in corrupt practice under the RP Act, 1951. https://t.co/DZU83tCaFi
— Saket Gokhale (@SaketGokhale) November 2, 2020
ಇದಕ್ಕೆ ಪ್ರತಿಕ್ರಿಯಿಸಿರುವ ಸಾಕೇತ್ ಗೋಖಲೆ, ಈ ಪ್ರಕರಣದ ಕುರಿತಂತೆ ಚುನಾವಣಾ ಆಯೋಗ ಹಾಗೂ ಆರ್ ಆರ್ ನಗರದ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದು, ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವುದಕ್ಕೆ RP Act, 1951 ಅಡಿಯಲ್ಲಿ 24 ಗಂಟೆಗಳೊಳಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಮಾಜಿ ಶಾಸಕರಾಗಿದ್ದ ಮುನಿರತ್ನರ ವಿರುದ್ಧ ಚುನಾವಣಾ ಅಕ್ರಮಗಳ ಆರೋಪ ಇದೇ ಮೊದಲಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಮತದಾರರ ಗುರುತು ಚೀಟಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಬಂದಿತ್ತು.





