ಬಿಗ್ ಬಾಸ್ ಕನ್ನಡ ಸೀಸನ್ 11, 10ನೇ ವಾರಕ್ಕೆ ಕಾಲಿಟ್ಟಿದೆ. ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಸಂದರ್ಭದಲ್ಲಿ ಟ್ವಿಸ್ಟ್ ಒಂದು ನಡೆದಿದ್ದು.ವೈಲ್ಡ್ ಕಾರ್ಡ್ ಎಂಟ್ರಿ ಶೋಭಾ ಶೆಟ್ಟಿ ಸ್ವ ಇಚ್ಛೆ ಇಂದ ಬಿಗ್ ಬಾಸ್ ಮನೆ ಬಿಟ್ಟು ಹೊರ ಬಂದಿದ್ದಾರೆ.
ಇನ್ನು ಬಿಗ್ ಬಾಸ್ ನ ಇಂದಿನ ಪ್ರೋಮೋ ಹೊರಬಿದ್ದಿದ್ದು, ಬಿಗ್ ಬಾಸ್ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಜಿಸಿದ್ದಾರೆ.ಹಾಗೂ ಎರಡು ತಂಡಗಳು ಕೂಡ ಒಂದೊಂದು ನ್ಯೂಸ್ ಚಾನೆಲ್ ಗಳಾಗಿವೆ..ಒಂದು ಚಾನೆಲ್ ನ ಆಂಕರ್ ಐಶ್ವರ್ಯ ಆದ್ರೆ, ಮತ್ತೊಂದು ಚಾನೆಲ್ ನ ಆಂಕರ್ ಚೈತ್ರಾ ಆಗಿದ್ದಾರೆ.
ಎರಡು ಚಾನೆಲ್ ಗಳು ಕೂಡ ಅವರ ವಿರುದ್ಧವಿರುವ ತಂಡದ ಕಂಟೆಸ್ಟೆಂಟ್ ಗಳ ವಿಚಾರವನ್ನು ತೆಗೆದು ಚೆನ್ನಾಗಿ ರೋಸ್ಟ್ ಮಾಡಿದ್ದಾರೆ..ಇದು ಕೆಲವರಿಗೆ ಖುಷಿ ನೀಡಿದ್ರೇ,ಇನ್ನು ಕೆಲವರ ವಿಚಾರ ಬೇಸರ ಮೂಡಿಸಿದೆ…
ಇನ್ನು ಮತ್ತೊಂದು ವಿಚಾರ ಇತಿಹಾಸದಲ್ಲೆ ಮೊಟ್ಟಮೊದಲ ಬಾರಿಗೆ ಅತಿ ಹೆಚ್ಚು ಮನೋರಂಜನೆ ನೀಡುವ ತಂಡ ಜಿಯೋ ಸಿನಿಮಾ ಮೂಲಕ ಪ್ರೇಕ್ಷಕರಿಂದ ವೋಟ್ ಪಡೆದು ಗೆಲ್ಲಲಿದೆ.. ಒಟ್ಟಿನಲ್ಲಿ ಈ ವಾರದ ಬಿಗ್ ಬಾಸ್ ಮನೆಯಲ್ಲಿ ಹೊಸ ಕಾನ್ಸೆಪ್ಟ್ ಅನ್ನ ತಂದಿದ್ದು ಯಾವ ತಂಡ ಯಾವ ರೀತಿ ಪರ್ಫಾರ್ಮ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.