ಲಾಕ್‌ಡೌನ್ ಸಂಧರ್ಭದಲ್ಲಿ ವಶಪಡಿಸಲಾದ ವಾಹನಗಳನ್ನು ಮೇ ಒಂದರ ಬಳಿಕ ವಾಹನದ ಮಾಲೀಕರಿಗೆ ಹಿಂದಿರುಗಿಸಲು ತೀರ್ಮಾನ ಕೈಗೊಂಡಿದ್ದು, ವಾಹನದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅನುಕ್ರಮವಾಗಿ ಮೊದಲು ವಶಪಡಿಸಿಕೊಂಡ ವಾಹನಗಳನ್ನು ಮೊದಲು ಹಿಂದಿರುಗಿಸಲಾಗುವುದು ಎಂದು ಭಾಸ್ಕರ್ ರಾವ್ ಹೇಳಿದ್ದರು.
Also Read: ಲಾಕ್‌ಡೌನ್‌ನಲ್ಲಿ ಸೀಝ್ ಮಾಡಿದ್ದ ವಾಹನಗಳನ್ನು ಮಾಲಿಕರಿಗೆ ಮರಳಿಸಲು ಕ್ರಮ- ಕಮಿಷನರ್ ಭಾಸ್ಕರ್ ರಾವ್
ನಂತರ ಟ್ವೀಟ್ ಮಾಡಿದ್ದ ಭಾಸ್ಕರ್ ರಾವ್ ನಿಮ್ಮ ಹತ್ತಿರದ ಪೋಲಿಸ್ ಠಾಣೆಗಳು ಹೆಚ್ಚಿನ ಮಾಹಿತಿ ನೀಡಿ ನಿಮಗೆ ಸಹಾಯಿಸುತ್ತವೆ. NDMA ಕಾಯ್ದೆಯಡಿಯಲ್ಲಿ ವಾಹನಗಳನ್ನು ಸೀಝ್ ಮಾಡಲಾಗಿದ್ದು, ನಮ್ಮ ಕೋರಿಕೆಯ ಮೇರೆಗೆ ಹೈ ಕೋರ್ಟ್ ವಾಹನ ಮರಳಿಸುವ ಪ್ರಕ್ರಿಯೆಯನ್ನು ಸರಳೀಕರಿಸಿದೆ. ಇಲ್ಲದಿದ್ದರೆ 48,510 ಮಂದಿ ವಾಹನ ಮಾಲೀಕರು ವಿವಿಧ ಕೋರ್ಟ್‌ಗಳಲ್ಲಿ ಸೇರಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಷ್ಟವಾಗುತ್ತಿತ್ತು ಎಂದು ಹೇಳಿದ್ದಾರೆ.

ವಾಹನ ಮರಳಿಕರಿಸುವ ಪ್ರಕ್ರಿಯೆ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಆಯುಕ್ತ, ತನ್ನ ಮೂರನೆಯ ಟ್ವೀಟಿನಲ್ಲಿ ಕರ್ನಾಟಕದ ಹೈಕೋರ್ಟ್ ವಾಹನಗಳನ್ನು ಬಿಡಿಸಿಕೊಳ್ಳಲು ಕೋರ್ಟಿಗೆ ಹಾಜರಾಗದೆ ಪೋಲೀಸ್ ಠಾಣೆಯಲ್ಲೆ ವಾಹನ ಬಿಡಿಸಿಕೊಳ್ಳಲು ಅನುಮೋದಿಸಿದೆ. ಪುನರಾವರ್ತನೆಗೊಳ್ಳುವುದಿಲ್ಲವೆಂಬ ಕರಾರಿನೊಂದಿಗೆ ದ್ವಿ ಚಕ್ರ ಮತ್ತು ತ್ರಿ ಚಕ್ರ ವಾಹನಗಳು ರುಪಾಯಿ 500 ಹಾಗೂ ನಾಲ್ಕು ಚಕ್ರದ ವಾಹನಗಳು 1,000 ರುಪಾಯಿಯ ಚಲನನ್ನು ಬ್ಯಾಂಕಿನಲ್ಲಿ ಕಟ್ಟಿ ವಾಹನಗಳನ್ನು ಬಿಡಿಸಿಕೊಳ್ಳಬಹುದೆಂದು ಬರೆದಿದ್ದಾರೆ.